ದೊಡ್ಡಪ್ಪನ ಮಗಳನ್ನೇ ಪ್ರೀತಿಸಿದ ಹಂತೊಭತ್ತರ ಯುವಕ, ಕೊನೆಗೆ ನಡೆದಿದ್ದೇ ದು-ರಂತ, ಇಲ್ಲಿದೆ ನೋಡಿ ಅಸಲಿ ಕಹಾನಿ

ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾಯೆ ಬಜಾರು ಈ ಮಾತು ಇತ್ತೀಚೆಗಿನ ದಿನಗಳಲ್ಲಿ ಘಟನೆಗಳನ್ನು ನೋಡುವಾಗ ನೂರಕ್ಕೆ ನೂರು ಸತ್ಯವೆನಿಸುತ್ತದೆ. ಇತ್ತೀಚೆಗಷ್ಟೇ ಚಾಮರಾಜನಗರ (Chamarajanagara) ಮೂಲದ ದೊಡ್ಡಪ್ಪನ ಮಗಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸ್ವತಃ ದೊಡ್ಡಪ್ಪನ ಕುಟುಂಬಸ್ಥರು ಯುವಕನನ್ನು ಕಿ-ಡ್ನಾಪ್‌ ಮಾಡಿ ಬೆಂಕಿ ಹಚ್ಚಿದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಬೆಂ-ಕಿ ಹಚ್ಚಿದ ಬೆನ್ನಲ್ಲೇ ದೇಹದ ಭಾಗವು ನೂರಕ್ಕೆ ಎಂಭತ್ತರಷ್ಟು ಸು-ಟ್ಟು ಹೋಗಿದೆ. ಆದರೆ, ಯವಕನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದ್ದು, ಆದರೆ ಕೊನೆಗೂ ಈ ಯುವಕ ಶಶಾಂಕ್‌ನು ಚಿಕಿತ್ಸೆ ಫಲಕಾರಿಯಾಗದೇ ಬದುಕಿನ ಯಾತ್ರೆಯನ್ನು ಮುಗಿಸಿರುವುದು ನಿಜಕ್ಕೂ ವಿಪರ್ಯಾಸ. ಅಂದಹಾಗೆ, ಬೆಂಗ​ಳೂರಿನ ಆರ್ ಆರ್ ನಗರ ( Benglore RR Nagar) ದ 12ನೇ ಕ್ರಾಸ್‌ ನಿವಾಸಿ ರಂಗ​ನಾಥ್‌ (Ranganath) ಮತ್ತು ಪ್ರೇಮಾ (Premaa) ದಂಪತಿ ಮಗ ಈ ಶಶಾಂಕ್‌ (Shashank). ಈ ಶಶಾಂಕನು ಎಸಿ​ಎಸ್‌ ಕಾಲೇ​ಜಿ​ನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡು​ತ್ತಿದ್ದನು. ಓದುತ್ತಿದ್ದ ಹುಡುಗನು ಪ್ರೀತಿಯ ಬಲೆಗೆ ಬಿದ್ದಿದ್ದಾನೆ.

ಈ ಶಶಾಂಕ್‌ ತನ್ನ ದೊಡ್ಡಪ್ಪ ಮನು​ ಅವರ ಮಗಳು ಲಹರಿ (Lahari) ಯನ್ನು ಪ್ರೀತಿ​ಸು​ತ್ತಿ​ದ್ದನು. ಶಶಾಂಕ್ ಹಾಗೂ ಲಹರಿ ಪ್ರೀತಿಗೆ ಮನೆಯವರಿಂದಲೇ ವಿ-ರೋಧ ವ್ಯಕ್ತವಾಗಿದೆ. ಲಹರಿ ಮನೆಯವರು ಈತನಿಗೆ ಅನೇಕ ಬಾರಿ ಬುದ್ಧಿ ಹೇಳಿದ್ದು, ಆದರೆ ಶಶಾಂಕ್ ಮಾತ್ರ ಆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಇದೇ ತಿಂಗಳ ಜುಲೈ 3ರಂದು ಮೈಸೂ​ರಿ​ನಿಂದ ಬೆಂಗ​ಳೂ​ರಿ​ಗೆ ಶಶಾಂಕ್ ಬಂದಿದ್ದಾನೆ. ಈ ವೇಳೆಯಲ್ಲಿ ತನ್ನ ಪ್ರೇಯಸಿ ಲಹರಿಯನ್ನು ತನ್ನ ಮನೆಗೆ ಶಶಾಂಕ್‌ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಲಹರಿ ತಂದೆ ಮನು ಕೋ-ಪಗೊಂಡು, ಮನೆಗೇ ನುಗ್ಗಿ ಶಶಾಂಕ್‌ ಮೇಲೆ ಹ-ಲ್ಲೆ ನಡೆಸಿದ್ದು ಕೊನೆಗೆ ಮಗಳನ್ನು ಕರೆದುಕೊಂಡು ಹೋಗಿದ್ದಾರೆ.

ಅದಲ್ಲದೇ, ಮಗಳನ್ನು ಕರೆದುಕೊಂಡು ಹೋದ ಎನ್ನುವ ಕಾರಣಕ್ಕೆ ಶಶಾಂಕ್ ನನ್ನು ಕಿ-ಡ್ನಾಪ್ ಮಾಡುವ ಮೂಲಕ ಯುವಕನ ಜೀವಕ್ಕೆ ಕು-ತ್ತು ತಂದಿದ್ದಾರೆ. ಇದೇ ಜುಲೈ 15ರಂದು ಬೆಳಗ್ಗೆ 8 ಗಂಟೆಗೆ ಶಶಾಂಕ್‌ ಎಂದಿನಂತೆ ಕಾಲೇ​ಜಿಗೆ ತೆರ​ಳಿದ್ದಾನೆ. ಆದರೆ ತರ​ಗ​ತಿ ಇಲ್ಲದ ಕಾರಣ ಬೆಳಗ್ಗೆ 9.30ರ ವೇಳೆ ಮನೆಗೆ ವಾಪ​ಸ್ಸಾಗಿದ್ದಾನೆ. ಇದನ್ನೇ ಸರಿಯಾದ ಸಮಯವೆಂಬುದು ತಿಳಿದು ಮನು, ಆರ್ ಆರ್ ಮೆಡಿಕಲ್ ಕಾಲೇಜು ಬಳಿ ಇನೋವಾ ಕಾರಿ​ನಲ್ಲಿದ್ದ ಬಂದು ಶಶಾಂಕ್ ನನ್ನು ಎಳೆದು ಕೊಂಡು ಹೋಗಿದ್ದರು. ಈ ವೇಳೆಯಲ್ಲಿ ಕಾರಿನಲ್ಲಿದ್ದ 6 ಮಂದಿ ಆತನ ಕಣ್ಣಿಗೆ ಬಟ್ಟೆಕಟ್ಟಿ, ಬಾ​ಯಿಗೆ ಬಟ್ಟೆತುರುಕಿ ಕಣಿ​ಮಿ​ಣಿಕೆ ಟೋಲ್‌ ಬಳಿಯಿರುವ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ.

ಲಹರಿಯ ತಂದೆ ಕೋ-ಪದಲ್ಲಿ, ಲಹ​ರಿ​ಯನ್ನು ಪ್ರೀತಿ ಮಾಡು​ತ್ತೀಯಾ? ನಿನಗೆ ಎಷ್ಟುಬಾರಿ ಹೇಳು​ವುದು’ ಎಂದು ಶಶಾಂಕ್‌ ನನ್ನು ಕಾರಿ​ನಿಂದ ಕೆಳ​ಗಿ​ಳಿಸಿದ್ದಾರೆ. ಅಷ್ಟೇ ಅಲ್ಲದೇ, ಪೆಟ್ರೋಲ್‌ ಸುರಿದು, ಬೆಂ-ಕಿ ಹ-ಚ್ಚಿ ಆತನನ್ನು ಅಲ್ಲಿಯೇ ಬಿಟ್ಟು ಪ-ರಾರಿಯಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ ಶಶಾಂಕ್ ಅವರ ದೊಡ್ಡಪ್ಪನೇ ಈ ಲಹರಿ ತಂದೆ ಮನು ಅಲಿಯಾಸ್ ಮಹೇಶ್‌ (Mahesh) ರಸ್ತೆಯಲ್ಲಿಯೇ ಬೆಂ-ಕಿ ಹ-ಚ್ಚಿ ಪರಾರಿಯಾದ ಬಳಿಕ ಶಶಾಂಕ್ ಮಾತ್ರ ಮೈಮೇಲಿನ ಬೆಂ-ಕಿಯನ್ನು ನೆಲಕ್ಕೆ ಉಜ್ಜಿಕೊಂಡು ಹೇಗೋ ಜೀವ ಉಳಿಸಿಕೊಂಡಿದ್ದಾನೆ.

ಅದಲ್ಲದೇ, ಆ ನೋವಿನಲ್ಲಿಯೇ ತನ್ನ ಸಂಬಂಧಿ ಹೀರಾ (Heeraa) ಎನ್ನುವವರಿಗೆ ಮಾಹಿತಿ ನೀಡಿದ್ದಾನೆ. ಆದರೆ ಶಶಾಂಕ್‌ನಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪ​ತ್ರೆ​ಗೆ ದಾಖ​ಲಿಸಿ ಚಿಕಿತ್ಸೆ ನೀಡಿದರೂ ಕೂಡ ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. ಮನು ಹಾಗೂ ಆತನ ಜೊತೆಗಿದ್ದ ಆರು ಮಂದಿಯ ವಿರುದ್ಧ ಕುಂಬ​ಳ​ಗೂಡು ಪೊಲೀಸ್‌ ಠಾಣೆ​ (Kumbalagudu Police Station) ಯಲ್ಲಿ ಪ್ರಕ​ರಣ ದಾಖಲಾಗಿದೆ.

Leave a Reply

Your email address will not be published. Required fields are marked *