ಹಣ್ಣುಗಳನ್ನು ತಿನ್ನೋದ್ರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತವೆ. ಆದರೆ ಹೂವಿನಿಂದಲೂ ನಾವು ದೇಹಕ್ಕೆ ಉಪಯೋಗವನ್ನು ಪಡೆದುಕೊಳ್ಳಬಹುದು ಎಂಬುದು ಹೊಸ ವಿಷಯ. ಅದರಂತೆ ನಾವು ಬಾಳೆ ಹೂವಿನಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು. ಈ ಬಾಳೆ ಹೂವು ಪುರುಷರ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಬನ್ನಿ ಹಾಗಾದರೆ ಬಾಳೆ ಹೂವಿನಿಂದ ಏನೇನು ಪ್ರಯೋಜನ ಇದೆ ಅಂತ ತಿಳಿದುಕೊಳ್ಳೋಣ.
ಬಾಳೆ ಹೂವು ಮೂತ್ರಪಿಂಡದ ರಕ್ಷಣೆಯನ್ನು ಮಾಡುತ್ತದೆ. ಇದರಲ್ಲಿ ಫೈಬರ್ ಇರೋದ್ರಿಂದ ಮೂತ್ರಪಿಂಡದ ಕಲ್ಲುಗಳ ವಿರುದ್ಧ ಹೋರಾಡುತ್ತದೆ. ಇದು ದೇಹದಲ್ಲಿ ಗ್ಲುಕೋಸ್ ಅನ್ನು ಬಿಡುಗಡೆ ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.. ಇದರಲ್ಲಿ ಫೈಬರ್ ಇರೋದ್ರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.

ಬಾಳೆ ಹೂವಿನಲ್ಲಿರುವ ಟ್ಯಾನಿನ್ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೃದಯದ ಆರೋಗ್ಯವನ್ನು ಉತ್ತಮವಾಗಿ ಇಡುತ್ತವೆ. ಇದರಲ್ಲಿ ಅತಿಯಾಗಿ ಫೈಬರ್ ಅಂಶ ಇರೋದ್ರಿಂದ ಕರುಳಿಗೂ ಕೂಡ ತುಂಬಾ ಒಳ್ಳೆಯದು ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗೂ ರಕ್ತವನ್ನು ಶುದ್ದಿಗೊಳಿಸುತ್ತದೆ.
ಹಾಗಾದರೆ ಇದನ್ನ ಸೇವಿಸುವ ಕ್ರಮವನ್ನು ತಿಳಿಯೋಣ. ಬಾಳೆ ಹೂವನ್ನ ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಒಂದು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧ ಲೋಟ ವಾಗುವವರೆಗೂ ಕುದಿಸಬೇಕು. ನಂತರ ಸ್ವಲ್ಪ ಉಪ್ಪನ್ನು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅತ್ಯುತ್ತಮವಾದ ಫಲಿತಾಂಶವನ್ನು ಕಾಣಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.