ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಕಳಲೆಯ ಆರೋಗ್ಯದ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ಯಾವೆಲ್ಲಾ ರೋಗಗಳಿಗೆ ಮನೆ ಮದ್ದು ಇದು ನೋಡಿ

ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆ ಸಾಕಷ್ಟು ಕಳಲೆ ಸಸ್ಯವನ್ನು ಕಾಣುತ್ತೇವೆ. ಆದರೆ ಹೆಚ್ಚಿನವರಿಗೆ ಕಳಲೆ (Bamboo shoots) ಸಸ್ಯದ ಬಗ್ಗೆ ತಿಳಿದಿಲ್ಲ. ಬಿದಿರಿನ ಪುಟ್ಟ ಪುಟ್ಟ ಸಸಿಗಳಿಗೆ ಕಳಲೆ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವುದರಿಂದ ಇದನ್ನು ಬಳಸಿ ಸಾಕಷ್ಟು ಆಹಾರ ಪದಾರ್ಥಗಳನ್ನು ತಯಾರಿಸಲಾಗುವುದು. ಬಿದಿರಿನ ಸಸ್ಯದಲ್ಲಿ ಔಷಧೀಯ ಗುಣ ಹಾಗೂ ಆರೋಗ್ಯಕರ ಅಂಶವು ಅಧಿಕವಾಗಿದೆ.

ಮಳೆಗಾಲ ಆರಂಭವಾಗುತ್ತಲೇ ಬಿದಿರಿನ ಬುಡದಲ್ಲಿ ಬೆಳೆಯುವ ಗಿಡವಾಗಿದ್ದು, ಹಳ್ಳಿ ಪ್ರದೇಶದ ಜನರಿಗೆ ಈ ಸಸ್ಯದ ಪರಿಚಯವಿರುತ್ತದೆ. ಆದರೆ ಕಳಲೆ ಅಥವಾ ಬಿದಿರಿನ ಚಿಗುರು ಇದರಲ್ಲಿ ಸೈನೋಜೆನಿಕ್ ಗ್ಲೈಕೋಸೈಡ್ ಎಂಬ ನೈಸರ್ಗಿಕ ಜೀವಾಣು ಅಧಿಕ ಪ್ರಮಾಣದಲ್ಲಿದ್ದು, ಇದೊಂದು ವಿಷವಾಗಿದೆ. ಹೀಗಾಗಿ ಅಡುಗೆ ಮಾಡುವಾಗ ಇದನ್ನು ಕುದಿಯುವ ನೀರಿನಲ್ಲಿ ಹಲವಾರು ಬಾರಿ ಕುದಿಸಿ, ಸ್ವಚ್ಛಮಾಡಿ ನಂತರದಲ್ಲಿ ಅಡುಗೆ ಮಾಡುತ್ತಾರೆ.

ಕಳಲೆಯಿಂದ ಪಲ್ಯ, ಸಾಂಬಾರು, ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ. ಹೀಗಾಗಿ ಉಪ್ಪು ನೀರಿನಲ್ಲಿ ಹಾಕಿಟ್ಟು ಆರು ತಿಂಗಳ ಬಳಿಕ ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಹೇರಳವಾಗಿ ಬಳಸಲಾಗುತ್ತದೆ. ದೇಶದ ಇತರ ಭೂಭಾಗದಲ್ಲಿ ಈ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಕರ್ನಾಟಕದಲ್ಲೂ ಕರಾವಳಿ ಭಾಗ (Costal Area) ದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಕಳಲೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದ್ದು, ಪ್ರೊಟೀನ್, ಕಾರ್ಬೋಹೈಡ್ರೇಟ್, ನಾರಿನಂಶ ಮತ್ತು ಖನಿಜ ಅಂಶಗಳು ಹೇರಳವಾಗಿದೆ. ಮಧುಮೇಹಿಗಳಿಗೆ ಕಳಲೆ ಬಹಳ ಉತ್ತಮವಾದ ಆಹಾರವಾಗಿದೆ. ಅಧಿಕ ಪ್ರಮಾಣದಲ್ಲಿರುವ ರೋಗ ನಿರೋಧಕ ಶಕ್ತಿ ಆರೋಗ್ಯವನ್ನು ಕಾಪಾಡುತ್ತದೆ. ಶ್ವಾಸಕೋಶದ ಕಫವನ್ನು ಹೊರಹಾಕುತ್ತದೆ. ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಂದ ಬರುವ ರೋಗವನ್ನು ದೂರ ಮಾಡುತ್ತದೆ.

ಮೆದುಳನ್ನು ಚುರುಕುಗೊಳಿಸುವುದಲ್ಲದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ. ಅದಲ್ಲದೇ ಮೂಳೆಗಳನ್ನು ಬಲಪಡಿಸಲು ಸಹಾಯಕವಾಗಿದೆ. ಆದರೆ ಈ ಕಳಲೆಯನ್ನು ಗರ್ಭಿಣಿಯರು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಜೀವಮಾನದಲ್ಲಿ ಒಮ್ಮೆ ಈ ಕಳಲೆಯನ್ನು ಸೇವಿಸಿದರೆ ಬೇಡ ಎನ್ನುವುದೇ ಇಲ್ಲ. ಅಷ್ಟರ ಮಟ್ಟಿಗೆ ವಿಭಿನ್ನ ರುಚಿ ಹೊಂದಿದ್ದರೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *