ನಾಲ್ಕು ಬಾದಾಮಿಯನ್ನು ನೆನಸಿಟ್ಟು ಪ್ರತಿದಿನ ಬೆಳಿಗ್ಗೆ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಯನ್ನು ನೀವೇ ನಂಬುವುದಕ್ಕೆ ಸಾಧ್ಯವಿಲ್ಲ !!

Badam health benefits : ನೀವು ಬಾದಾಮಿ(Almonds) ಪ್ರಿಯರೇ..?? ಬಾದಾಮಿಯನ್ನು ಹುರಿದುಕೊಂಡು ತಿನ್ನುವುದು ಒಳಿತೇ ಅಥವಾ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಹೆಚ್ಚು ಉಪಕಾರಿಯೇ..?? ಹಸಿದ ಹೊಟ್ಟೆಯಲ್ಲಿ ಸೇವಿಸಬೇಕೇ ಅಥವಾ ಖಾಲಿ ಹೊಟ್ಟೆಯಲ್ಲಿಯೇ..??

ಈ ರೀತಿಯ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ, ಬಾದಾಮಿಯನ್ನು ನೀವು ಇಷ್ಟಪಡದಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ ಮತ್ತು ಆರೋಗ್ಯಕರ ರೀತಿಯಲ್ಲಿ ಬಾದಾಮಿಯನ್ನು ಸೇವಿಸಲು ಪ್ರಾರಂಭಿಸಿ.

ಬಾದಾಮಿಯಲ್ಲಿ ಎರಡು ವಿಧ. ಒಂದು ಸಿಹಿ ಮತ್ತೊಂದು ಕಹಿ; Types of badam

ಸಿಹಿ ಬಾದಾಮಿಯನ್ನು ತಿನ್ನಲು ಉಪಯೋಗಿಸಿದರೆ, ಕಹಿ ಬಾದಾಮಿಯಿಂದ ಎಣ್ಣೆಯನ್ನು ತೆಗೆಯುತ್ತಾರೆ. ಬಾದಾಮಿಯಲ್ಲಿ ಪ್ರೋಟೀನ್(Protein), ಒಮೇಗ ಮೂರು ಕೊಬ್ಬಿನ ಆಮ್ಲ, ಒಮೆಗಾ ಆರು ಕೊಬ್ಬಿನ ಆಮ್ಲ, ವಿಟಮಿನ್ ಇ, ಕ್ಯಾಲ್ಸಿಯಂ, ಸತು, ಫಾಸ್ಫರಸ್, ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಂಶಗಳು ಇರುತ್ತವೆ.

ಬಾದಾಮಿಯನ್ನು ಸೇವಿಸುವ ಉತ್ತಮ ಮಾರ್ಗವೆಂದರೆ ರಾತ್ರಿ ಬಾದಾಮಿಯನ್ನು ನೆನೆಸಿಟ್ಟು ಮುಂಜಾವಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದು. ಹೀಗೆ ಮಾಡುವುದರಿಂದ ಚರ್ಮವು ಸುಕ್ಕು ಗಟ್ಟುವುದು, ಬಿರುಕುಗೊಳ್ಳುವುದು ಹೀಗೆ ವಯಸ್ಸಾದಂತೆ ಮೂಡುವ ಲಕ್ಷಣಗಳನ್ನು ತಡೆಗಟ್ಟಬಹುದು.

ನೆನೆಸಿಟ್ಟ ಬಾದಾಮಿಯಲ್ಲಿ ಪ್ರೀ ಬಯೋಟಿಕ್ ಅಂಶಗಳಿರುವುದರಿಂದ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಿ ಹೊಟ್ಟೆ ಬಗೆಗಿನ ರೋಗಗಳಿಗೆ ಪ್ರತಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಅಲ್ಲದೇ ಜೀರ್ಣಾಂಗ ವ್ಯೂಹದಲ್ಲಿ ಸಲೀಸಾಗಿ ಸಾಗಿ ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನುಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಬಾದಾಮಿಯನ್ನು ಯಾವ ತರನಾಗಿ ತಿಂದರೆ ಆರೋಗ್ಯಕ್ಕೆ ಹೆಚ್ಚಿನ ಲಾಭ ದೊರೆಯುತ್ತದೆ?? Badam benefits in kannada

ಗರ್ಭಿಣಿಯರು ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುವುದರೊಂದಿಗೆ ಶಕ್ತಿಯನ್ನು ನೀಡುತ್ತದೆ. 2 ರಿಂದ 4 ನೆನಸಿಟ್ಟ ಬಾದಾಮಿಯ ಸೇವನೆಯಿಂದ ಮೆದುಳಿನ ನರಗಳು ಸರಿಯಾಗಿ ಕೆಲಸ ಮಾಡಿ ಚುರುಕುಗೊಳ್ಳುವುದರೊಂದಿಗೆ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ.

ನಾರಿನ ಅಂಶಗಳು ಅಡಕವಾಗಿರುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆಗೊಳಿಸುತ್ತದೆ. ನೆನಸಿಟ್ಟ ಬಾದಾಮಿಯು ಹಸಿವೆಯನ್ನು ಕಡಿಮೆಗೊಳಿಸಿ, ಹೊಟ್ಟೆ ತುಂಬುವಂತೆ ಮಾಡುವುದರಿಂದ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡಿರುವ ಬೊಜ್ಜು ನಿವಾರಣೆಗೆ ಸಹಕಾರಿಯಾಗಿದೆ.
ನೆನೆಸಿಟ್ಟ ಬಾದಾಮಿಯ ಸೇವನೆಯಿಂದಾಗುವ ಉಪಯೋಗಗಳನ್ನು ನಿಮ್ಮ ಆಪ್ತರಿಗೆ, ಈ ಬರಹವನ್ನು ಶೇರ್ ಮಾಡುವುದರ ಮೂಲಕ ತಿಳಿಸಿ.

Leave a Reply

Your email address will not be published. Required fields are marked *