Comments on nayantara : ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು ನಟಿ ನಯನಾತಾರಾ. ಈ ನಟಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ನಟಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಇತ್ತೀಚೆಗಷ್ಟೇ ಬಹುಕಾಲದಿಂದ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಮದುವೆಯಾದ ಕೆಲವೇ ದಿನಗಳಿಗೆ ಈ ಜೋಡಿಗೆ ತಲೆನೋವೊಂದು ಎದುರಾಗಿತ್ತು. ಈ ದಂಪತಿಗಳಿಗೆ ತಿರುಮಲ ತಿರುಪತಿ ಟ್ರಸ್ಟ್‌ನಿಂದ ನೋಟೀಸ್ ಕೂಡ ಜಾರಿಯಾಗಿತ್ತು. ಸದಾ ಸುದ್ದಿಯಲ್ಲಿದ್ದ ನಯನಾತಾರಾ ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಕನೆಕ್ಟ್’ ಸಿನಿಮಾ ಈ ವಾರ ರಿಲೀಸ್ ಆಗಿತ್ತು.
ಇಷ್ಟು ಚಿಕ್ಕ ವಯಸ್ಸಿಗೆ ನಟಿ ತಮನ್ನಾ ಬೆವರು ಸುರಿಸಿ ಸಂಪಾದಿಸಿದ ಬರೋಬ್ಬರಿ ಆಸ್ತಿ ಹಣ ಅದೆಷ್ಟು ಗೊತ್ತಾ? ನೀವು ಕನಸಲ್ಲೂ ಊಹಿಸಿ ಇರಲ್ಲ ನೋಡಿ!!
ಚಿತ್ರಕ್ಕೆ ಅಷ್ಟು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿಲ್ಲ. ಆದರೆ ‘ಕನೆಕ್ಟ್’ ಚಿತ್ರಕ್ಕಾಗಿ ಆ ನಿಯಮ ಮೀರಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಗುರುವಾರ ಸಂಜೆಯೇ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು. ಈ ವೇಳೆ ಪತಿ ವಿಘ್ನೇಶ್ ಜೊತೆ ನಯನತಾರಾ ಭಾಗಿಯಾಗಿದ್ದರು. ಈ ವೇಳೆ ಟೈಟ್ ಟೀ-ಶರ್ಟ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ದರು.

actress chinmayee reply to bad comments on nayantara dress :
ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋ ಸಖತ್ ವೈರಲ್ ಆಗಿದ್ದು, ನಟಿಯ ಉಡುಗೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಟಿಯ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ ಗರಂ ಆಗಿದ್ದು, ಈ ರೀತಿ ಕಾಮೆಂಟ್ ಮಾಡುತ್ತಿರುವವರು ತಾಯಿ ಎದೆ ಹಾಲು ಕುಡಿದು ಬೆಳೆದ್ರಾ? ಇಲ್ವಾ? ಎಂದು ಚಿನ್ಮಯಿ ಪ್ರಶ್ನೆ ಮಾಡಿದ್ದಾರೆ.
ಹೌದು, ಇಂತಹ ಗಂಡಸಿಗೆ ಹೆಣ್ಣು ಮಕ್ಕಳು ಇದ್ದರೆ ಪರಿಸ್ಥಿತಿ ಏನು? ಇಂತಹವರ ಕಾರಣಕ್ಕೆ ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಗಂಡ, ಗಂಡು ಮಕ್ಕಳ ಎದುರು ದುಪ್ಪಟ್ಟಾ ಹಾಕಿಕೊಳ್ಳುವಂತೆ ಹೇಳಿದರೂ ಅಚ್ಚರಿಪಡಬೇಕಿಲ್ಲ. ಇಂತಹ ಗಂಡಸರೆಲ್ಲಾ ಮಗಳನ್ನು, ಅಕ್ಕ, ತಂಗಿಯರನ್ನು ಇದೇ ರೀತಿಯಲ್ಲಿ ನೋಡುತ್ತಾರಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಕೆಟ್ಟ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ತೆಗೆದು ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು, ನಯನತಾರಾ ಪತಿ ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು. ಅಕ್ಟೋಬರ್ 9 ರ ಸಂಜೆ 6.30 ಕ್ಕೆ ತಾವು ಅವಳಿ ಮಕ್ಕಳಿಗೆ ಅಪ್ಪ ಅಮ್ಮ ಆಗಿರೋದಾಗಿ ಘೋಷಿಸಿದ್ದರು. ಈ ಬಗ್ಗೆ ಅವಳಿ ಗಂಡು ಮಕ್ಕಳ ಜೊತೆ ತಾವಿರೋ ಪೋಟೋವನ್ನು ಶೇರ್ ಮಾಡಿಕೊಂಡಿರುವ ವಿಘ್ನೇಶ್ ಶಿವನ್ ಮತ್ತು ನಯನತಾರಾ ವಿಸ್ಕೃತವಾದ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದರು.
ನಯನಾ ತಾರಾ ಹಾಗೂ ವಿಘ್ನೇಶ್ ಶಿವನ್ ಈ ಪೋಸ್ಟ್ ಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಮೂಲಗಳ ಮಾಹಿತಿ ಪ್ರಕಾರ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಗ್ನೇಶ್ ಶಿವನ್ ಮದುವೆಗೂ ಮುನ್ನವೇ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದರಂತೆ. ಕೊನೆಗೂ ವೈವಾಹಿಕ ಜೀವನಕ್ಕೆ ಬಳಿಕ ತಾಯ್ತನದ ಸುದ್ದಿ ನೀಡಿದ್ದರು. ಸದ್ಯಕ್ಕೆ ಖ್ಯಾತ ನಟಿ ನಯನಾತಾರಾ ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ.