ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ಸಿಕ್ಕಿದ ಮೇಲೆ ಏನು ಮಾಡಬೇಕು ಗೊತ್ತಾ? ಮಂತ್ರಾಕ್ಷತೆಯಿದ್ದರೆ ಹೀಗೆ ಮಾಡಿ !!

ರಾಮ ಮಂದಿರದ (Ayodhya Ram Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಜನವರಿ 22 ರಂದು ಅಯೋಧ್ಯೆ (Ayodhye) ಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಭಕ್ತಾಧಿಗಳು ಆ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಶ್ರೀರಾಮನು ಅಭಿಜಿತ್‌ ಮುಹೂರ್ತದಲ್ಲಿ ಜನಿಸಿರುವ ಕಾರಣ, ಇದೇ ಜನವರಿ 22ರ ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ.

ಆ ಸಮಯದಲ್ಲಿಯೇ ರಾಮ ಮಂದಿರದಲ್ಲಿ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗುವುದು. ಕೊನೆಗೂ ರಾಮಮಂದಿರ ನಿರ್ಮಾಣದ ಕನಸು ನೆರವೇರುತ್ತಿದ್ದು, ಈ ಸಮಾರಂಭಕ್ಕೆ ಕೆಲವರಿಗಷ್ಟೇ ಆಹ್ವಾನವು ಬಂದಿದೆ. ಅದಲ್ಲದೇ, ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಮನೆಗೂ ತಲುಪಿದೆ. ಹಾಗಾದ್ರೆ ಈ ಮಂತ್ರಾಕ್ಷತೆಯನ್ನು ಏನು ಮಾಡಬೇಕು ಎನ್ನುವುದು ಸಹಜವಾದ ಪ್ರಶ್ನೆಯೊಂದು ಮೂಡಬಹುದು. ಆ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು.

ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆಯನ್ನು ಜನವರಿ 22ನೇ ತಾರಿಕಿನ ವರೆಗೆ ತಮ್ಮತಮ್ಮ ದೇವರ ಸ್ಟಾಂಡ್ ಲ್ಲಿ ಅಥವಾ ದೇವರಕೋಣೆಯಲ್ಲಿ ಇಡಬೇಕು. ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿರಬೇಕು. ಜನವರಿ 22 ರಂದು ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠೆಯ ಬಳಿಕ ಈ ಮಂತ್ರಾಕ್ಷತೆಗೆ ಶಕ್ತಿಯು ಪ್ರಾಪ್ತವಾಗಲಿದ್ದು ಆ ಬಳಿಕ ಮಂತ್ರಾಕ್ಷತೆಯನ್ನು ಈ ಕೆಳಗೆ ನೀಡಿದಂತೆ ಮಾಹಿತಿಯಂತೆ ಬಳಸಬಹುದು.

ಅನ್ನ ಮಾಡುವಾಗ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅದನ್ನು ಅನ್ನವನ್ನಾಗಿ ಮಾಡಿಕೊಂಡು ಸೇವಿಸಬಹುದು. ಇಲ್ಲದಿದ್ದರೆ ಪಾಯಸ ಮಾಡಿ ಸೇವಿಸಬಹುದು. ಅದಲ್ಲದೇ, ಮನೆಯವರೆಲ್ಲಾ ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದಾಗಿದೆ. ಹಣ ಹಾಗೂ ಚಿನ್ನ ಇಡುವ ಕಾಪಾಟಿನಲ್ಲಿ ಮಂತ್ರಾಕ್ಷತೆಯನ್ನು ಇಟ್ಟುಕೊಳ್ಳಬಹುದು.

ದೇವರ ಕೋಣೆಯಲ್ಲಿಯು ಈ ಮಂತ್ರಾಕ್ಷತೆಯನ್ನು ಇಟ್ಟುಕೊಳ್ಳಬಹುದು. ಇಲ್ಲವಾದರೆ ಈ ಮಂತ್ರಾಕ್ಷತೆಯನ್ನು ಬಟ್ಟೆಯಲ್ಲಿ ಸುತ್ತಿ ಮನೆಯ ಎದುರಿನ ಬಾಗಿಲಿನ ಮೇಲೆ ಕಟ್ಟಬಹುದು. ಈ ಮಂತ್ರಾಕ್ಷತೆಯನ್ನು ನೀಡುವಾಗ ರಾಮಮಂದಿರದ ಒಂದು ಚಿತ್ರ ಹಾಗೂ ಒಂದು ಕರಪತ್ರ ನೀಡಿದ್ದು, ಇದನ್ನು ದೇವರಕೋಣೆಯಲ್ಲಿ ಶ್ರದ್ಧ ಭಕ್ತಿಯಿಂದ ಇಟ್ಟುಕೊಂಡರೆ ಒಳ್ಳೆಯದು.

Leave a Reply

Your email address will not be published. Required fields are marked *