ಹದಿಹರೆಯರ ಹುಡುಗಿಯಂತೆ ಫಿಟ್ ಆಗಿರುವ 76 ವರ್ಷದ ಆಸ್ಟ್ರೇಲಿಯಾದ ಮಾಡೆಲ್ ಕ್ಯಾರೋಲಿನ್ ಹರ್ಟ್ಸ್, ಫಿಟ್ ನೆಸ್ ಸೂತ್ರ ರಿವೀಲ್ ಮಾಡಿದ ಮಾಡೆಲ್

ಸಿನಿಮಾರಂಗ ಹಾಗೂ ಮಾಡೆಲ್ ಗಳು ಎಂದ ಮೇಲೆ ಸಹಜವಾಗಿ ಫಿಟ್ ನೆಸ್ (Fitness) ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆಹಾರ ಪದ್ಧತಿ, ವರ್ಕ್ ಔಟ್, ಯೋಗ ಎಂದು ಸದಾ ತಮ್ಮ ದೇಹದ ಬಗ್ಗೆ ಕಾಳಜಿ ವಹಿಸುವವರನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ಆಸ್ಟ್ರೇಲಿಯಾದ ಮಾಡೆಲ್ ಕ್ಯಾರೋಲಿನ್ ಹರ್ಟ್ಜ್ (Australian model Caroline Hertz) ಎಂಬ 76 ವರ್ಷದ ಮಹಿಳೆಯು ಎಷ್ಟು ಫಿಟ್ ಆಗಿದ್ದಾರೆ ಎಂದರೆ ಯಾವ ಯುವತಿಯೂ ಕೂಡ ಕಡಿಮೆಯಿಲ್ಲ ಎನ್ನುವಂತೆ ತಮ್ಮ ದೇಹವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಹೌದು ಫಿಟ್ ನೆಸ್ ಮೂಲಕ ತಮ್ಮ ವಯಸ್ಸನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದಾರೆ ಎಂದೇಹೇಳಬಹುದು. ಜೀರೋ ಸೈಜ್ ಮೈಕಟ್ಟು, ಶೈನಿಂಗ್ ಚರ್ಮದ ಮೂಲಕ ಹದಿಹರೆಯದ ಯುವಕರನ್ನು ಕೂಡ ತನ್ನತ್ತ ಸೆಳೆಯುವ ತಾಕತ್ತು ಇದೆ ಎನ್ನುವುದನ್ನು ನಂಬಲು ಕಷ್ಟವಾದರೂ ಕೂಡ ಸತ್ಯ. ಈವರೆಗೂ ತಮ್ಮ ಆರೋಗ್ಯ ಹಾಗೂ ಫಿಟ್ ನೆಸ್ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದ ಇವರು ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ಇವರ ಸೌಂದರ್ಯದ ಗುಟ್ಟು ಎಂದರೆ ಅದುವೇ ಕಳೆದ ಕಳೆದ 36 ವರ್ಷಗಳಿಂದ ಸಕ್ಕರೆಯನ್ನು ಸೇವಿಸಿಲ್ಲ. 41ನೇ ವಯಸ್ಸಿನಲ್ಲಿ ಪ್ರಿ-ಡಯಾಬಿಟಿಕ್ ಕಾಯಿಲೆ ಇರುವುದು ಪತ್ತೆಯಾಗಿತ್ತು. ಆ ಬಳಿಕ ಸಕ್ಕರೆಯಿಂದ ತಯಾರಿಸಿದ ಯಾವುದೇ ವಸ್ತುವಿನಿಂದ ದೂರವಿದ್ದಾರೆ. ಆದರೆ ಸಿಹಿಗಾಗಿ ಈಕೆ ಸಕ್ಕರೆಯ ಬದಲಿಗೆ, ತನ್ನ ಆಹಾರದಲ್ಲಿ ಕ್ಸಿಲಿಟಾಲ್ ಬಳಸುತ್ತಾರಂತೆ ಎನ್ನಲಾಗಿದೆ.ಇನ್ನು, 45ನೇ ವಯಸ್ಸಿನಿಂದ ಬಾಸ್ಕೆಟ್ ಬಾಲ್ ಆಡುವುದು, ಯೋಗ ಮಾಡುತ್ತಿದ್ದಾರೆ.

ಜೊತೆಗೆ ಪ್ರತಿದಿನ 8 ಗಂಟೆ ನಿದ್ದೆ ಚೆನ್ನಾಗಿ ನಿದ್ದೆ ಮಾಡುತ್ತಾರೆರಂತೆ. ಈ ಮೂಲಕ ಅದಲ್ಲದೇ ತಮ್ಮ ಯೌವ್ವನದ ಗುಟ್ಟು ಬಿಚ್ಚಿಟ್ಟಿದ್ದಾರೆ. ಅದಲ್ಲದೇ 76 ವಯಸ್ಸಿನ ಹರ್ಟ್ಜ್​ ತಮ್ಮ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ’40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ತೂಕದ ಬಗ್ಗೆ ಹೆಚ್ಚು ಗಮನ ನೀಡಿ. ನಾವು ವಯಸ್ಸಾದಂತೆ ನಮ್ಮ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ.

ನಾವು ಆಹಾರದಲ್ಲಿ ನಿಯಂತ್ರಣವನ್ನು ಸಾಧಿಸಬೇಕು. ಆರೋಗ್ಯಕರ ಆಯ್ಕೆಗಳನ್ನು ಮಾಡಬೇಕು. ಅಲ್ಲದೇ ದೇಹ ಹಾಗೂ ಆರೋಗ್ಯಕ್ಕಾಗಿ ಸಾಕಷ್ಟು ಶ್ರಮ ಪಡಬೇಕು’ ಎಂದಿದ್ದಾರೆ. ಮಾಡೆಲ್ ಹರ್ಟ್ಜ್ ಅವರು ಸಕ್ಕರೆ ಬದಲಿಗೆ ಕ್ಸಿಲಿಟಾಲ್‌ ಬಳಸಲು ಸಲಹೆ ನೀಡುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಅದೇನೇ ಆದರೂ ಕೂಡ 76 ವಯಸ್ಸಿಗೆ ತಮ್ಮ ಗ್ಲಾಮರ್ ಅನ್ನು ಕಾಪಾಡಿಕೊಂಡು ಬಂದಿರುವುದು ಎಲ್ಲರಿಗೂ ಕೂಡ ಮಾದರಿಯಾಗುವ ವಿಚಾರವಾಗಿದೆ.

Leave a Reply

Your email address will not be published. Required fields are marked *