ಕನ್ಯಾರಾಶಿಯಲ್ಲಿ ಸೂರ್ಯನ ಸಂಚಾರ, ಈ ರಾಶಿಯವರಿಗೆ ತೊಂದರೆ ಕಟ್ಟಿಟ್ಟಬುತ್ತಿ, ಯಾವ ಯಾವ ರಾಶಿ ಗೆ ಸಂಕಷ್ಟ ನೋಡಿ!!

ರಾಶಿ ಚಕ್ರದಲ್ಲಿನ ಬದಲಾವಣೆಗಳು ಕೆಲವು ರಾಶಿಗೆ ಧನಾತ್ಮಕ ಪರಿಣಾಮ (Positive Effect) ವನ್ನು ಬೀರುತ್ತದೆ ಆದರೆ ಇದೀಗ ಗ್ರಹಗಳ ರಾಜನಾದ ಸೂರ್ಯ ದೇವ ಸೆಪ್ಟೆಂಬರ್ 17 ರಂದು ಮಧ್ಯಾಹ್ನ 01:42 ಕ್ಕೆ ಕನ್ಯಾರಾಶಿಯಲ್ಲಿ ಸಂಚರಿಸಲಿದ್ದಾನೆ. ಸೂರ್ಯ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 18 ರವರೆಗೆ ಕನ್ಯಾರಾಶಿಯಲ್ಲಿ ಚಲಿಸಲಿದ್ದು, ಸೂರ್ಯನ ರಾಶಿ ಬದಲಾವಣೆ (Changes) ಯಿಂದ 4 ರಾಶಿಗಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ. ತೊಂದರೆ (Problem) ಯೂ ಎದುರಾಗಲಿದ್ದು ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಮೇಷ ರಾಶಿ: ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆರಿಗೆ ಭಾರಿ ಸಂಕಷ್ಟಗಳು ಎದುರಾಗಲಿದೆ. ಈ ಒಂದು ತಿಂಗಳಲ್ಲಿ ನಿಮ್ಮ ಶತ್ರುಗಳು ತುಂಬಾ ಚುರುಕುಗೊಳ್ಳಲಿದ್ದು, ಮೇಲಿಂದ ಮೇಲೆ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಸಂಬಂಧ ಪಟ್ಟ ಮಾಹಿತಿಯನ್ನು ಗುಟ್ಟಾ ಗಿ ಇಡುವುದು ಉತ್ತಮ. ಆರೋಗ್ಯವು ಹದಗೆಡುವ ಸಾಧ್ಯತೆಯೂ ಅಧಿಕವಾಗಿದ್ದು ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಉತ್ತಮ. ಅದಲ್ಲದೇ ಆಹಾರ ಪದಾರ್ಥಗಳ ಸೇವನೆಯ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.

ತುಲಾ ರಾಶಿ : ಸೂರ್ಯನ ರಾಶಿ ಬದಲಾವಣೆಯಿಂದಾಗಿ ಎಲ್ಲಾ ರೀತಿಯ ಸಂಕಷ್ಟಗಳು ಎದುರಾಗಲಿದೆ. ಆರ್ಥಿಕ ದೃಷ್ಟಿಯಿಂದ ತುಲಾ ರಾಶಿಯ ಜನರಿಗೆ ಹಾನಿಯಾಗಬಹುದು. ಹೂಡಿಕೆ ಮಾಡುವ ಯೋಜನೆಯಿದ್ದರೆ ಹಿಂದೆ ಸರಿಯುವುದು ಒಳ್ಳೆಯದು. ಈ ವ್ಯವಹಾರಕ್ಕೆ ಸಂಬಂಧಿಸಿದ ಈ ರಾಶಿಯ ಜನರು ಯಾವುದೇ ದೊಡ್ಡ ಮಟ್ಟದಲ್ಲಿ ಬಂಡವಾಳವನ್ನು ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಹಣವನ್ನು ಸ್ವಲ್ಪ ಜಾಗರೂಕರಾಗಿ ಖರ್ಚು ಮಾಡುವುದನ್ನು ಕಲಿರಿ. ತಂದೆ ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ ರಾಶಿ : ಸೂರ್ಯನ ರಾಶಿ ಬದಲಾವಣೆಯು ಕುಂಭ ರಾಶಿಯವರಿಗೆಸಮಸ್ಯೆಗಳನ್ನುಸಮಸ್ಯೆಗಳನ್ನು ತರಬಹುದು. ಹೀಗಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಸೂರ್ಯನ ನಕಾರಾತ್ಮಕ ಪರಿಣಾಮವು ಈ ರಾಶಿಯವರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅದಲ್ಲದೇ ಸ್ನೇಹಿತರು ಅಥವಾ ಸಾಮಾಜದವರ ನಡುವೆ ಬಿರುಕು ಮೂಡಬಹುದು. ನೀವು ಏನೇ ಮಾತನಾಡಿದರೂ ಯಾರು ಕೂಡ ಕೇಳಿಸಿಕೊಳ್ಳುವುದಿಲ್ಲ. ಹೀಗಾಗಿ ಏನೇ ಮಾಡಲು ಹೋದರು ಕೂಡ ಸ್ವಲ್ಪ ಎಚ್ಚರವಿರಲಿ.

ಮೀನ ರಾಶಿ : ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಮೀನ ರಾಶಿಯವರ ವೈವಾಹಿಕ ಜೀವನಕ್ಕೆ ತೊಂದರೆಯನ್ನು ಉಂಟು ಮಾಡಬಹುದು. ಸಂಗಾತಿಗಳ ನಡುವೆ ಮನಸ್ತಾಪಗಳು ಎದುರಾಗಿ ಬಿರುಕು ಮೂಡುವ ಸಾಧ್ಯತೆಯೂ ಇದೆ. ಹೀಗಾಗಿ ನಡವಳಿಕೆ ಮತ್ತು ಮಾತಿನ ಮೇಲೆ ನಿಯಂತ್ರಣವನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ. ನಿಮ್ಮ ಗೌರವವು ಹಾಳಾಗುವ ಸನ್ನಿವೇಶಗಳು ಎದುರಾಗಬಹುದು.

Leave a Reply

Your email address will not be published. Required fields are marked *