ಫೆಬ್ರವರಿ ತಿಂಗಳಲ್ಲಿ ಯಾವ ರಾಶಿಗೆ ಒಳ್ಳೆಯದಾಗಲಿದೆ ಯಾವ ರಾಶಿಗೆ ಕೆಟ್ಟದಾಗಿದೆ ನೋಡಿ ಸಂಪೂರ್ಣ ಮಾಹಿತಿ.

ಸ್ನೇಹಿತರೆ ಇವತ್ತಿನ ಈ ಲೇಖನಿಯ ಮೂಲಕ ನಾವು ಫೆಬ್ರವರಿ ತಿಂಗಳಲ್ಲಿ ಆಗುವಂತಹ ಗ್ರಹಗಳ ಬದಲಾವಣೆಯಿಂದಾಗಿ ಯಾವ ರಾಶಿಯವರಿಗೆ ಯಾವ ರೀತಿಯ ರಾಶಿ ಫಲ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಹಣಕಾಸಿನ ಸಹಾಯ ದೊರಕುವಂತಹ ಸಾಧ್ಯತೆ ಇರುತ್ತದೆ ಆದರೆ ಸರಿಯಾದ ದಿನಕ್ರಮವನ್ನು ಇಟ್ಟುಕೊಳ್ಳಿ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಿರುವಂತಹ ವಿದ್ಯಾರ್ಥಿಗಳಿಗೆ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ವೃಷಭ ರಾಶಿ: ಪ್ರಯಾಣ ಹಾಗೂ ಇನ್ನಿತರ ಕಾರ್ಯಗಳಿದ್ದಾಗಿ ವೃಷಭ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಹೆಚ್ಚಿನ ಹಣಕಾಸಿನ ಖರ್ಚು ಎದುರಾಗುವ ಸಾಧ್ಯತೆ ಇದೆ. ನಿಮ್ಮ ಆಸ್ತಿ ಹಾಗೂ ಭೂಮಿಯನ್ನು ಮಾರಾಟ ಮಾಡುವಾಗ ಸರಿಯಾದ ರೀತಿಯಲ್ಲಿ ಎಚ್ಚರಿಕೆ ವಹಿಸಿ. ಪ್ರೇಮಿಗಳಿಗೆ ಮದುವೆಯಾಗುವ ಅವಕಾಶ ಕೂಡಿ ಬರಲಿದೆ.

ಮಿಥುನ ರಾಶಿ: ಕುಟುಂಬ ಸದಸ್ಯರ ಬೆಂಬಲ ನಿಮಗೆ ಸಿಗೋದು ಅತ್ಯಂತ ವಿರಳವಾಗಲಿದೆ. ವೈವಾಹಿಕ ಜೀವನ ಸಂತೋಷದಿಂದ ಕೂಡಿರಲಿದೆ. ಮಿಥುನ ರಾಶಿಯ ಉದ್ಯಮಿಗಳಿಗೆ ಸ್ವಲ್ಪ ಸಮಯ ಕಷ್ಟವನ್ನು ತರಲಿದೆ.

ಕರ್ಕ ರಾಶಿ: ಕೆಲಸಕ್ಕಾಗಿ ದೂರದ ಪ್ರಯಾಣ ಮಾಡಬೇಕಾಗಿ ಬರಬಹುದು ಹಾಗೂ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದಾಗಿದೆ ಇದನ್ನು ನಿಯಂತ್ರಿಸಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಹುದ್ದೆ ಸಿಗುವ ಸಾಧ್ಯತೆ ಇದೆ. ಕೆಲವೊಂದು ಸಣ್ಣ ಸಮಸ್ಯೆಗಳನ್ನು ಹೊರತುಪಡಿಸಿ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿ ಸಾಗಿ ಬರಲಿದೆ.

ಸಿಂಹ ರಾಶಿ: ಹೇಳಿದ ಕೆಲಸವನ್ನು ಸಿಂಹ ರಾಶಿಯವರು ಸರಿಯಾದ ಸಮಯಕ್ಕೆ ಮಾಡಲಿದ್ದಾರೆ. ನೀವು ಜೀವನದಲ್ಲಿ ಸಾಧಿಸಲು ಹಾಕಿಕೊಂಡಿರುವಂತಹ ಯೋಜನೆಯನ್ನು ತಲುಪುವುದಕ್ಕೆ ನಿಮ್ಮ ಬಾಳ ಸಂಗಾತಿ ಸಹಾಯ ಮಾಡುತ್ತಾರೆ.

ಕನ್ಯಾ ರಾಶಿ: ಕೆಲಸಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮವನ್ನು ಮಾಡಬೇಕಾದ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವ ಸಾಧ್ಯತೆ ಇರುತ್ತದೆ ಹಾಗೂ ಹಿರಿಯವರ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿ ವಹಿಸಿ. ವ್ಯವಹಾರದಲ್ಲಿ ನಿಮಗೆ ಅಂದುಕೊಂಡಂತೆ ಲಾಭ ಸಿಗಬಹುದಾಗಿದೆ ಆದರೆ ಖರ್ಚನ್ನು ನಿಯಂತ್ರಿಸುವುದನ್ನು ಕಲಿತುಕೊಳ್ಳಿ.

ತುಲಾ ರಾಶಿ: ನೀಡಿರುವಂತಹ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸಿ ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಕಮಿಷನ್ ಕೆಲಸಗಳನ್ನು ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ವೈವಾಹಿಕ ಜೀವನದಲ್ಲಿ ಕೆಲವೊಂದು ಚಿಂತೆಗಳು ನಿಮ್ಮನ್ನು ಕಾಣಬಹುದು.

ವೃಶ್ಚಿಕ ರಾಶಿ: ಈ ಸಂದರ್ಭದಲ್ಲಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸ್ಥಿಮಿತವನ್ನು ಕಳೆದುಕೊಳ್ಳುವುದು. ನೀವು ನಿಮ್ಮ ಕೆಲಸದ ಮೇಲೆ ಫೋಕಸ್ ಮಾಡಿ ಯಾಕೆಂದರೆ ಜನ ನಿಮ್ಮ ಹೆಸರನ್ನು ಹಾಳು ಮಾಡುವ ಕೆಲಸವನ್ನು ಮಾಡಲಿದ್ದಾರೆ. ನಿಮ್ಮ ಕಷ್ಟದ ಸಂದರ್ಭದಲ್ಲಿ ನಿಮ್ಮ ಸಂಗಾತಿ ನಿಮ್ಮ ನೆರಳಿನಂತೆ ಹಿಂದೆ ನಿಲ್ಲಲಿದ್ದಾರೆ.

ಧನು ರಾಶಿ: ಕೆಲಸಕ್ಕೆ ಸಂಬಂಧಪಟ್ಟಂತೆ ನಿಮಗೆ ಫೆಬ್ರವರಿ ತಿಂಗಳಲ್ಲಿ ಸಾಕಷ್ಟು ಉತ್ತಮ ಅವಕಾಶಗಳಿವೆ. ಶತ್ರುಗಳಿಂದ ಆದಷ್ಟು ದೂರವಿರಿ. ಈ ಸಂದರ್ಭದಲ್ಲಿ ತಪ್ಪು ತಿಳುವಳಿಕೆಗಳಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ.

ಮಕರ ರಾಶಿ: ವಿದೇಶದಲ್ಲಿ ವ್ಯಾಪಾರವನ್ನು ಮಾಡುವಂತಹ ಮಕರ ರಾಶಿ ಅವರಿಗೆ ಲಾಭ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಕಾರಣದಿಂದಾಗಿ ಆಸ್ಪತ್ರೆ ಸುತ್ತಾಡಬೇಕಾಗಿ ಬರಬಹುದು. ಮಾಡುವಂತಹ ಕೆಲಸದಲ್ಲಿ ಅದೃಷ್ಟವೂ ಕೂಡ ನಿಮ್ಮ ಜೊತೆ ಇರಲಿದೆ.

ಕುಂಭ ರಾಶಿ: ತಿಂಗಳ ದ್ವಿತೀಯಾರ್ಧದಲ್ಲಿ ಕುಂಭ ರಾಶಿಯವರಿಗೆ ನಿರೀಕ್ಷಿತ ಫಲಗಳು ಎದುರಾಗಲಿವೆ. ಕಳೆದ ಸಾಕಷ್ಟು ಸಮಯಗಳಿಂದ ಏನನ್ನಾದರೂ ನೀವು ಖರೀದಿಸುವಂತಹ ಬಯಕೆಯನ್ನು ಹೊಂದಿದ್ದರೆ ಫೆಬ್ರವರಿ ತಿಂಗಳಲ್ಲಿ ಆ ಆಸೆಯನ್ನು ನೀವು ಪೂರೈಸಬಹುದಾಗಿದೆ.

ಮೀನ ರಾಶಿ: ಪತ್ರಿಕೋದ್ಯಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿರುವಂತಹ ಮೀನ ರಾಶಿಯ ವಿದ್ಯಾರ್ಥಿಗಳಿಗೆ ಅತಿ ಶೀಘ್ರದಲ್ಲಿ ನೀವು ಗುಡ್ ನ್ಯೂಸ್ ಕೇಳಬಹುದಾಗಿದೆ. ಈ ಸಮಯದಲ್ಲಿ ಪ್ರೀತಿಯ ವಿಚಾರದಲ್ಲಿ ಯಾವತ್ತೂ ಕೂಡ ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

Leave a Reply

Your email address will not be published. Required fields are marked *