600 ವರ್ಷಕ್ಕೊಮ್ಮೆ ಹುಟ್ಟುವ ಜಾತಕದಲ್ಲಿ ಜನಿಸಿದ್ದಾರೆ ಐಶ್ವರ್ಯಾ ರೈ. ವಿಚ್ಛೇದನದ ಭವಿಷ್ಯ ನುಡಿದ ಜ್ಯೋತಿಷಿ , ಬಿಚ್ಚಿಟ್ಟ ಸತ್ಯವೇನು ಗೊತ್ತಾ?

ಐಶ್ವರ್ಯಾ ರೈ (Aishwarya Rai) ಬಚ್ಚನ್ ಮಾಜಿ ವಿಶ್ವ ಸುಂದರಿ, ಖ್ಯಾತ ಬಾಲಿವುಡ್ ನಟಿ. ಅದರಲ್ಲಿಯು ಇವರ ಸೌಂದರ್ಯಕ್ಕೆ ಯಾರೇ ಆಗಲಿ ಫಿದಾ ಆಗಲೇಬೇಕು. ಅಂತಹ ಚೆಲುವು ಐಶ್ವರ್ಯ ರೈಯವರದ್ದು. ಐಶ್ವರ್ಯ ಕೆಲವೊಂದು ಬಾರಿ ತಮ್ಮ ವೈಯಕ್ತಿಕ ಜೀವನದ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.

ಬಾಲಿವುಡ್ ನಲ್ಲಿ ಹೆಸರು ಸಂಪಾದನೆ ಮಾಡಿಕೊಂಡಿರುವ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರಿಬ್ಬರ ವಿ-ಚ್ಛೇದನದ ಸುದ್ದಿ ಹರಿದಾಡುತ್ತಿದ್ದು, ಅದಲ್ಲದೇ, ಐಶ್ವರ್ಯ ತನ್ನ ಬಚ್ಚನ್ ಅವರ ಮನೆಯನ್ನು ಬಿಟ್ಟು ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಅಭಿಷೇಕ್ ಬಚ್ಚನ್ (Abhishek Bacchan) ಅವರು ಸಂದರ್ಶನವೊಂದರಲ್ಲಿ ಪತ್ನಿ ಐಶ್ವರ್ಯಾ ರೈ ಅವರ ಬಗ್ಗೆ ಮಾತನಾಡುತ್ತಾ, “ಅವಳು ತಾಯಿಯಾದಾಗ ಅವಳ ವೃತ್ತಿಜೀವನದಲ್ಲಿ ಹಿನ್ನಡೆ ಕಂಡುಬಂತು. ಆದರೆ ಆಕೆ ಆರಾಧ್ಯಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದಳು. ಅವಳು ಸೂಪರ್ ಮಾಮ್. ಆರಾಧ್ಯ ಹುಟ್ಟಿದ ಕೂಡಲೇ ಆಕೆಯ ತೂಕ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ಏನೇನೋ ಬರೆಯಲು ಮುಂದಾದವು.

ಅಸಹ್ಯವಾದ ವಿಷಯಗಳನ್ನು ಬರೆಯಲಾಯಿತು. ಅದು ನನ್ನನ್ನು ನಿಜವಾಗಿಯೂ ಅಸಮಾಧಾನಗೊಳಿಸಿತು. ಆ ಸಮಯದಲ್ಲಿ ಆಕೆ ಜಿಮ್‌’ನಲ್ಲಿ ಒಂದು ದಿನವೂ ಕಳೆದಿರಲಿಲ್ಲ. ಮತ್ತಷ್ಟು ಮಾತನಾಡಿದ ಅಭಿಷೇಕ್ ಬಚ್ಚನ್, “ಜನರು ಐಶ್ವರ್ಯಾ ಅವರನ್ನು ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಉಲ್ಲೇಖಿಸುತ್ತಾರೆ. ಹೀಗಾಗಿ ಸ್ವೀಕರಿಸುವ ಪ್ರೀತಿಗೆ ಕೃತಜ್ಞರಾಗಿರಬೇಕು.

ಅಷ್ಟೇ ಅಲ್ಲ ಐಶ್ವರ್ಯಾ ಎಂದಿಗೂ ಯಾವುದರ ಬಗ್ಗೆಯೂ ಕಂಪ್ಲೈಟ್ ಮಾಡುವುದಿಲ್ಲ. ಯಾವಾಗಲೂ ದಯೆ ಮತ್ತು ಸಹಾನುಭೂತಿಯಿಂದ ಇರುತ್ತಾರೆ. ಅದು ನನಗೆ ಆಶ್ಚರ್ಯ ತಂದಿದೆ” ಎಂದಿದ್ದರು.ಆದರೆ ಇದೀಗ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಹದಿನಾರು ವರ್ಷದ ದಾಂಪತ್ಯ ಜೀವನದಲ್ಲಿ ಬಿ-ರುಕು ಮೂಡಿದ್ದು, ಈ ನಟಿ ಐಶ್ವರ್ಯ ರೈ ದಂಪತಿಗಳಾಗಲಿ ಅಥವಾ ಬಚ್ಚನ್ ಕುಟುಂಬವಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಮಂಗಳೂರಿನ ಮುಲ್ಕಿ (Manglore Mulki)ಯ ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ್ ಸ್ವಾಮಿ (Chandrashekhar Swami) ಯವರು ಐಶ್ವರ್ಯ-ಅಭಿಷೇಕ್ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು, “ಐಶ್ವರ್ಯಾ ಜಾತಕದಲ್ಲಿ ‘ಕುಜ ದೋಷ’ ಮತ್ತು ‘ರಾಜಯೋಗ’ (Rajayoga) ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ. ಈ ಕಾರಣದಿಂದಲೇ ವಿಶ್ವಸುಂದರಿ ಪಟ್ಟಕ್ಕೇರಿದ್ದಾರೆ. ಅದಲ್ಲದೇ, ದೇವರೇ ಇವರಿಬ್ಬರನ್ನು ಒಂದು ಮಾಡಿರೋದು. ಹೀಗಾಗಿ ಯಾರೂ ಕೂಡ ಈ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.

Leave a Reply

Your email address will not be published. Required fields are marked *