ರೆಬೆಲ್ ಸ್ಟಾರ್ ಪುತ್ರನ ಮದುವೆಯಲ್ಲಿ ಕಂಗೊಳಿಸಿದ ಕರುನಾಡ ಅತ್ತಿಗೆಯರು.. ಮೇಘನಾ ರಾಜ್ ಅಶ್ವಿನಿ ಅವರ ಸ್ನೇಹ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಶೇಷ ಫೋಟೋ..

ರೆಬೆಲ್‌ ಸ್ಟಾರ್‌ ಅಂಬರೀಶ್‌ ( Rebal Star Ambarish) ಮತ್ತು ಸುಮಲತಾ (Sumalatha) ಮುದ್ದಿನ ಸುಪುತ್ರ ನಟ ಅಭಿಷೇಕ್‌ (Abhishek) ಹಾಗೂ ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪ (Aviva Biddappa) ಮದುವೆ ಜೂನ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಒಕ್ಕಲಿಗ ಸಂಪ್ರದಾಯದಂತೆ ಬೆಂಗಳೂರಿನ ಚಾಮರವಜ್ರ (Chamaravajra) ದಲ್ಲಿ ಅಭಿ-ಅವಿವಾ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು.

ರೆಬೆಲ್ ಸ್ಟಾರ್ ಪುತ್ರನ ಮದುವೆಗೆ ನಟ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rock Line Vankatesh) ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಅದಲ್ಲದೇ, ನಟನ ಮದುವೆಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು (Venkayya Naydu), ತಮಿಳು ನಟ ರಜನಿಕಾಂತ್ ( Rajanikanth), ತೆಲುಗು ನಟ ಚಿರಂಜೀವಿ (Chiranjeevi), ಅನಿಲ್ ಕುಂಬ್ಳೆ (Anil Kumble), ನಟ ಮೋಹನ್ ಬಾಬು (Mohan Babu), ಸುಹಾಸಿನಿ (Suhasini) ಭಾಗವಹಿಸಿದ್ದರು.

ಅಷ್ಟೇ ಅಲ್ಲದೇ, ಕಿಚ್ಚ ಸುದೀಪ್ (Kiccha Sudeep), ರಾಕಿಂಗ್ ಸ್ಟಾರ್ ಯಶ್ (Rocking Star Yash) ದಂಪತಿಗಳು, ಮೇಘನಾ ರಾಜ್(Meghana Raj) ,ದರ್ಶನ್ ಪತ್ನಿ ವಿಜಯಲಕ್ಷ್ಮಿ , ನರೇಶ್ ಪವಿತ್ರ ಲೋಕೇಶ್, ನಟ ಡಿ ಬಾಸ್ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮಿ (Darshan wife Vijayalakshmi) ಸೇರಿದಂತೆ ಟಾಲಿವುಡ್, ಸ್ಯಾಂಡಲ್ ವುಡ್, ರಾಜಕೀಯ ಗಣ್ಯರು ಆಗಮಿಸಿ ನವಜೋಡಿಗೆ ಶುಭಾಶಯ ಕೋರಿದ್ದರು. ಅದಲ್ಲದೇ ಚಂದನವನದ ತಾರೆಯರು ಒಂದೇ ಫ್ರೇಮ್ ನಲ್ಲಿ ಸೆರೆ ಸಿಕ್ಕಿದ್ದರು. ಈ ಸ್ಯಾಂಡಲ್ ವುಡ್ ತಾರೆಯರ ಫೋಟೋಗಳು ವೈರಲ್ ಆಗಿವೆ.

ಅದಲ್ಲದೇ ನಿನ್ನೆ ಜೂನ್​ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ (Tripuravasi) ಯಲ್ಲಿ ಅದ್ದೂರಿಯಾಗಿ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ. ಸಿನಿಮಾರಂಗದ ಗಣ್ಯರು, ರರಾಜಕೀಯ ಗಣ್ಯರು ಸೇರಿದಂತೆ ಇನ್ನಿತ್ತರರು ಆಗಮಿಸಿದ್ದರು.

ಇದೇ ತಿಂಗಳ ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟ ಏರ್ಪಡು ಮಾಡಲಾಗಿದೆ. ಇಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳಿಗೆ ನಾನ್ ವೆಜ್ ಊಟದ ವ್ಯವಸ್ಥೆಯಿದ್ದು, ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ನಟ ಅಭಿಷೇಕ್ ಅಂಬರೀಶ್ ಅವರ ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

Leave a Reply

Your email address will not be published. Required fields are marked *