ವಿದೇಶದಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿರುವ ಆಶಿಶ್ ವಿದ್ಯಾರ್ಥಿ ಮತ್ತು ಹೆಂಡತಿ ರೂಪಾಲಿ. ಹೇಗೆ ಮಜಾ ಮಾಡುತ್ತಿದ್ದಾರೆ ನೋಡಿ!!

ಇತ್ತೀಚೆಗಷ್ಟೇ ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಆಶಿಶ್ ವಿದ್ಯಾರ್ಥಿ (Ashish Vidhyarthi) ಎರಡನೇ ವಿವಾಹವಾಗಿದ್ದು ಗೊತ್ತೇ ಇದೆ. ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂ (Assam) ಮೂಲದ ರೂಪಾಲಿ ಬರುವಾ (Roopali Baruvaa) ಅವರ ಜೊತೆಗೆ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಖಾಸಗಿ ಹೊಟೇಲ್‌ವೊಂದರಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಸದ್ಯಕ್ಕೆ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.

ಖ್ಯಾತ ಖಳ ನಟ ಆಶಿಶ್ ವಿದ್ಯಾರ್ಥಿ ಅವರು 60 ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದರು. ನಟ ಆಶಿಶ್ ವಿದ್ಯಾರ್ಥಿ ಕೈ ಹಿಡಿದಿರುವ ರೂಪಾಲಿ ಬರೋವಾ ಅವರು ಮೂಲತಃ ಅಸ್ಸಾಂ (Assam) ರಾಜ್ಯದವರು. ಇವರು ಕೋಲ್ಕತ್ತದಲ್ಲಿ ಹಲವಾರು ಫ್ಯಾಶನ್‌ ಮಳಿಗೆಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

 

View this post on Instagram

 

A post shared by Rupali Barua (@ru.pa.li.73)

ಆಶಿಶ್ ವಿದ್ಯಾರ್ಥಿ ದಂಪತಿಗಳು ಸಿಂಗಾಪುರ (Singapur) ಕ್ಕೆ ತೆರಳಿದ್ದು, ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರು ವಾಹನವೊಂದರಲ್ಲಿ ಸವಾರಿ ಮಾಡುವ ಫೋಟೋವನ್ನು ನಟ ಆಶಿಶ್‌ ವಿದ್ಯಾರ್ಥಿ ಹಂಚಿಕೊಂಡಿದ್ದು, “ಪ್ರಿಯ ದೋಸ್ತ್, ನಿಮ್ಮ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ‘ಆಲ್ ದಿ ಬೆಸ್ಟ್. ಮೇಡ್ ಫಾರ್ ಈಚ್ ಅದರ್’ ಎಂದರೆ, ಮತ್ತೊಬ್ಬರು ‘ಇಬ್ಬರು ಸದಾ ಖುಷಿಯಾಗಿರಿ’ ಎಂದಿದ್ದಾರೆ.

ಆಶಿಶ್ ವಿದ್ಯಾರ್ಥಿಯವರ ಮೊದಲ ಪತ್ನಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ರಾಜೋಶಿ ಬರುವಾ (Rajoshi Baruvaa). ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ (Artha Vidhyarti) ಎಂಬ ಮಗನಿದ್ದಾನೆ. ಆದರೆ ಅವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ ಇಬ್ಬರೂ ಬೇರೆ ಬೇರೆಯಾಗಿದ್ದರು. ಇತ್ತೀಚೆಗಷ್ಟೇ ನಟ ಆಶಿಶ್‌ ಮೊದಲ ಪತ್ನಿ ರಾಜೋಶಿಯಿಂದ ವಿಚ್ಚೇದನ ಪಡೆದ ಬಗ್ಗೆ ಹಾಗೂ ರೂಪಾಲಿ ಅವರನ್ನು ಭೇಟಿಯಾದ ಕುರಿತು ಮಾತನಾಡಿದ್ದರು.

“ಪಿಲೂ (ಮೊದಲ ಪತ್ನಿ) ಜೊತೆಗಿನ ನೆನಪಿನಿಂದ ಆಚೆ ಬಂದ ಬಳಿಕ ವ್ಲೋಗಿಂಗ್ ಅಸೈನ್‌ಮೆಂಟ್‌ವೊಂದರಲ್ಲಿ ನಾನು ರೂಪಾಲಿ ಅವರನ್ನು ಭೇಟಿಯಾದೆ. ಈ ಭೇಟಿ ಸ್ನೇಹಕ್ಕೆ ತಿರುಗಿತು. ನಾವು ಚಾಟಿಂಗ್‌ ಮಾಡುತ್ತ ಹೋದೆವು. ಅವರು ತಮ್ಮ ನೋವನ್ನು ಹಂಚಿಕೊಂಡರು. ಅವರ ಗಂಡ ತೀರಿ ಹೋಗಿ 5 ವರ್ಷಗಳು ಕಳೆದಿದೆ. ಮತ್ತೆ ಮದುವೆಯ ಬಗ್ಗೆ ಅವರು ಯೋಚನೆ ಮಾಡಿರಲಿಲ್ಲ. ಆದರೆ ನಮ್ಮಿಬ್ಬರ ನಡುವಿನ ಚಾಟಿಂಗ್‌ ನಮ್ಮನ್ನು ಹತ್ತಿರವಾಗಿಸಿತು. ಜೀವನವನ್ನು ಹೊಸದಾಗಿ ನೋಡುವ ಮತ್ತು ಮದುವೆಯಾಗುವ ಸಾಧ್ಯತೆಯ ಯೋಚನೆ ಮಾಡಿ ಮುಂದಿನ ಹೆಜ್ಜೆಯನ್ನು ಇಟ್ಟೆವು” ಎಂದಿದ್ದರು.

Leave a Reply

Your email address will not be published. Required fields are marked *