Asha Sharath : ಮಗಳ ಅರಶಿಣ ಶಾಸ್ತ್ರ ಫೋಟೋ ಹಂಚಿಕೊಂಡ ಮಲಯಾಳಂನ ಖ್ಯಾತ ನಟಿ ಆಶಾ ಶರತ್, ಮೆಚ್ಚುಗೆ ಸೂಚಿಸಿದ ಫ್ಯಾನ್ಸ್!!

Asha Sharath : ಸಿನಿಮಾರಂಗದಲ್ಲಿ ಈಜಿ ಜಯಿಸುವುದು ಸುಲಭದ ಮಾತಲ್ಲ. ಏನೇ ಬಂದರೂ ಕೂಡ ಎದುರಿಸಿ ಮುನ್ನಡೆಯುವ ಧೈರ್ಯ ಇರಲೇಬೇಕು. ಈಗಾಗಲೇ ಈ ಸಿನಿಮಾರಂಗವು ಅನೇಕ ನಟ ನಟಿಯರಿಗೆ ಕರೆದು ಮಣೆ ಹಾಕಿದೆ. ಆದರೆ, ಕೆಲವರು ಅವಕಾಶಕ್ಕಾಗಿ ಕಾದು ಕುಳಿತರೆ ಇನ್ನು ಕೆಲವರು ಅವಕಾಶವಿದ್ದರೂ ಸಿನಿಮಾರಂಗದಿಂದ ದೂರ ಉಳಿದರು. ಈ ಸಿನಿ ಲೋಕದ ಬದುಕು ಒಂದೇ ರೀತಿ ಇರುವುದಿಲ್ಲ. ವೃತ್ತಿ ಜೀವನದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯವಾಗಿರುತ್ತದೆ.

ಇವತ್ತಿಗೂ ಕೂಡ ಕೆಲವು ನಟಿಯರು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಮಲಯಾಳಂ ನಟಿ ಆಶಾ ಶರತ್ (Asha Sharath)ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಕಿರುತೆರೆಯ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಇವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.ಮಲಯಾಳಂ ನಟಿ ಆಶಾ ಶರತ್ ಅವರ ಪುತ್ರಿ ಉತ್ತರಾ (Uattara) ಮಾರ್ಚ್ 18 ರಂದು ಬಹುಕಾಲದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮಗಳ ಮದುವೆಯ ಅರಶಿಣ ಶಾಸ್ತ್ರದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಲ್ಲರೂ ಹಳದಿ ಬಣ್ಣದ ಉಡುಗೆ ತೊಟ್ಟು ಮಿಂಚಿದ್ದು, ಕೆಲವು ನೆನಪುಗಳು ವಿಶೇಷವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಗಳಿಂದ ಲೈಕ್ಸ್ ಗಳು ಹರಿದು ಬಂದಿವೆ.ಮಲಯಾಳಂ ನಟಿ ಆಶಾ ಶರತ್ ಅವರ ಪುತ್ರಿ ಉತ್ತರಾ ಮಾರ್ಚ್ 18 ರಂದು ಬಹುಕಾಲದ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕೊಚ್ಚಿ (Kocchi) ಯಲ್ಲಿ ನಟಿ ಆಶಾ ಶರತ್ ಅವರ ಮಗಳ ಮದುವೆಯೂ ಅದ್ದೂರಿಯಾಗಿ ನಡೆದಿತ್ತು. ಕೊಚ್ಚಿಯಲ್ಲಿರುವ ಆಡ್ಲಕ್ಸ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹ ಸಮಾರಂಭದ ಫೋಟೋ ಹಾಗೂ ವಿಡಿಯೋಗಳು ಕೂಡ ವೈರಲ್ ಆಗಿತ್ತು. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವೀಡಿಯೊಗಳಲ್ಲಿ, ಆಶಾ ಶರತ್ ಅವರು ವರ ಮತ್ತು ಅವರ ಕುಟುಂಬಕ್ಕೆ ಭವ್ಯವಾದ ಸ್ವಾಗತವನ್ನು ನೀಡಿದ ನಂತರ ಮಗಳು ಉತ್ತರಾ ಅವರೊಂದಿಗೆ ಮದುವೆಯ ಮಂಟಪಕ್ಕೆ ಹೋಗಿರುವುದು ಹೈ ಲೈಟ್ ಆಗಿತ್ತು.

ಆಶಾ ಶರತ್ ಮಲಯಾಳಂ (Malayalam) ಧಾರಾವಾಹಿ ನಟಿ ಎರ್ನಾಕುಲನ್ನ ಪೆರುಂಬವೂರು (Ernkulanna Perumbavuru) ಮೂಲದವರು. ಅವರು ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿ ಶ್ರೀಮತಿ ಅವರ ಮಗಳಾಗಿ ಪೆರುಂಬವೂರಿನಲ್ಲಿ ಜನಿಸಿದರು. ಕಲಾಮಂಡಲಂ ಸುಮತಿ. ಚಿಕ್ಕ ವಯಸ್ಸಿನಲ್ಲಿ, ಆಶಾ ಅವರ ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ಖರೀದಿಸಿದರು. ಮೋಹಿನಿಯಾಟ್ಟಂ, ಕೂಚಿಪುಡಿ ಮತ್ತು ಭರತನಾಟ್ಯ ಸೇರಿದಂತೆ ಶಾಸ್ತ್ರೀಯ ನೃತ್ಯದ ಎಲ್ಲಾ ಪ್ರಕಾರಗಳಲ್ಲಿ ಅವರು ತರಬೇತಿ ಪಡೆದುಕೊಂಡರು.

ಕೊನೆಗೆ ಅವಕಾಶಗಳು ಸಿಕ್ಕೊಡನೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.’ಕುಂಕುಮಪೂವು’ (Kumkumapoovu) ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿಕೊಂಡ ಇವರು ಸಾಲು ಸಾಲುಅವಕಾಶಗಳನ್ನು ಪಡೆದುಕೊಂಡರು. ‘ಪ್ರೊಫೆಸರ್ ಜಯಂತಿ’ (Professor Jayanti) ಸೇರಿದಂತೆ ಇನ್ನಿತ್ತರ ಧಾರಾವಾಹಿಯಲ್ಲಿ ಜೊತೆಗೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು. ಈಗಾಗಲೇ ಶುಕ್ರವಾರ, ಕರ್ಮಯೋಧ, ಅರ್ಧನಾರಿ, ದೃಶ್ಯ, ಏಂಜಲ್ಸ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಆಶಾ ಶರತ್ ಅವರಿಗೆ ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *