ಅಂದು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ದುಂಖದ ಮಡುವಿನಲ್ಲಿತ್ತು. Puneeth Rajkumar ಅಕ್ಟೋಬರ್ 29ರಂದು ಕರ್ನಾಟಕದ ಮುತ್ತು, ಅಭಿಮಾನಿಗಳ ಪಾಲಿನ ಅಪ್ಪು, ಸ್ಯಾಂಡಲ್ವುಡ್ನ ಪವರ್ ಒಂದು ಎಲ್ಲರನ್ನೂ ಬಿಟ್ಟು ಬಾರದ ಊರಿನತ್ತ ಪಯಣ ಬೆಳೆಸಿದ್ದರು. ಅಪ್ಪು ಇಲ್ಲದೇನೆ ಒಂದು ವರ್ಷ ಕಳೆದಿದೆ. ಇಂದಿಗೂ ಅವರನ್ನು ನೆನೆದು ಅದೆಷ್ಟೋ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಅಪ್ಪು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ಹೌದು, ದಿನಾಲೂ ವ್ಯಾಯಾಮ ಜಿಮ್ ಎಂದು ತೊಡಗಿಸಿಕೊಂಡವರು.
ಯಾವತ್ತೂ ಕೂಡ ಜಿಮ್ ವ್ಯಾಯಾಮವನ್ನು ಮಿಸ್ ಮಾಡಿಕೊಂಡವರಲ್ಲ. ಇಷ್ಟು ಒಳ್ಳೆಯ ಆರೋಗ್ಯ ಶೈಲಿ ರೂಪಿಸಿಕೊಂಡಿದ್ದ ಅಪ್ಪುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು. ಅದಲ್ಲದೆ, ಎಲ್ಲರೊಂದಿಗೆ ಸಾಮಾನ್ಯರಂತೆ ಇರುತ್ತಿದ್ದ ವ್ಯಕ್ತಿ, ಬೆಳೆದದ್ದು ಕೂಡ ಸಾಮಾನ್ಯರಂತೆ. ದೊಡ್ಮನೆಯ ಕೂಸಾಗಿದ್ದರೂ ಒಂದಷ್ಟು ಆದರ್ಶಗಳು, ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಕೊರತೆ ಇರದಂತೆ ಬದುಕುತ್ತಿದ್ದರು. Puneeth Rajkumar
ಮೂರು ವರ್ಷದ ಮಗುವಿರುವಾಗಲೇ ಬಾಲ ನಟನಾಗಿ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡರು. ತದನಂತರದಲ್ಲಿ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು, ಬೆಟ್ಟದ ಹೂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದುಕೊಂಡರು 2002 ರ ವೇಳೆ ನಾಯಕ ನಟನಾಗಿ ಅಪ್ಪು ಸಿನಿಮಾದ ಮೂಲಕ ಎಂಟ್ರಿ ಕೊಟ್ಟರು. ಆದಾದ ಬಳಿಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು. ನಟ, ನಿರ್ಮಾಪಕ, ನಿರೂಪಕ ಹಾಗೂ ಗಾಯಕರಾಗಿ ಗಮನ ಸೆಳೆದಿದ್ದರು.
ಆದರೆ ಪುನೀತ್ ರಾಜ್ ಕುಮಾರ್ ಅವರು ಕಾಲೇಜು ವಿದ್ಯಾಭ್ಯಾಸ ಮುಗಿಸಿ ತಮ್ಮದೇ ಆದ ಬಿಸಿನೆಸ್ ಶುರು ಮಾಡಿದ್ದರು. ಹೌದು, ಕಾಲೇಜು ಮುಗಿಯುತ್ತಿದ್ದಂತೆ ಪುನೀತ್ ಅವರು ಸಿನಿಮಾಗೆ ಕಾಲಿಡದೆ ಗ್ರಾನೈಟ್ ಬಿಸ್ನೆಸ್ ಗೆ ಕಾಲಿಡುತ್ತಾರೆ ಆದರೆ ದುರದೃಷ್ಟವಶಾತ್ ಪುನೀತ್ ಅವರಿಗೆ ಈ ವ್ಯಾಪಾರದಲ್ಲಿ ದೊಡ್ಡ ನಷ್ಟವಾಗುತ್ತದೆ. ನಂಬಿಕೆ ಇಟ್ಟು ಬಂಡವಾಳ ಹೂಡಿಕೆ ಮಾಡಿದ್ದ ಅಪ್ಪುವಿಗೆ ಮೋಸ ಮಾಡಿ ಬಿಡುತ್ತಾರೆ.

ಆದಾದ ಬಳಿಕ ಅಪ್ಪು ಬ್ಯುಸಿನೆಸ್ ಕುರಿತು ಯೋಚಿಸಿಯು ಇರಲಿಲ್ಲ. ಆದರೆ ಹಿಂದಿನ ವರ್ಷ ಅಪ್ಪು ಅವರು ದೊಡ್ಡ ಬಿಸಿನೆಸ್ ಮಾಡುವುದಕ್ಕೆ ತಯಾರಿ ನಡೆಸಿದ್ದರು. ಹೀಗಾಗಿ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಲಾಗಿತ್ತು. ಆದರೆ ಬ್ಯುಸಿನೆಸ್ ಮಾಡಬೇಕೆಂದುಕೊಂಡಿದ್ದ ಅಪ್ಪು ಇದೀಗ ನಮ್ಮೊಂದಿಗೆ ಇಲ್ಲ. ಪವರ್ ಸ್ಟಾರ್ ಪುನೀತ್ ಅವರು ಲಾಂಚ್ ಮಾಡಲು ಹೊರಟಿದ್ದ ಪ್ರಾಡಕ್ಟ್ ಪರ್ಫ್ಯೂಮ್. ಈ ಪರ್ಫ್ಯೂಮ್ ಕೇವಲ 100 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಪ್ಲಾನ್ ಇತ್ತು.
ಅಪ್ಪು ಇದ್ದಿದ್ದರೆ, ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಅಪ್ಪು ಅವರ ಹುಟ್ಟುಹಬ್ಬದ ದಿನ ಆ ಬ್ಯುಸಿನೆಸ್ ಲಾಂಜ್ ಆಗುತ್ತಿತ್ತು. ಅವರು ಲಾಂಚ್ ಮಾಡಲು ಹೊರಟಿದ್ದ ಪರ್ಫ್ಯೂಮ್ ಗೆ ಪವರ್ ಎಂದು ಹೆಸರು ಇಡಲಾಗಿತ್ತು. ಹೀಗಾಗಿ ಪುನೀತ್ ಅವರು ಶೇರ್ ಮತ್ತು ಇನ್ವೆಸ್ಟರ್ಸ್ ಗಳನ್ನು ಹುಡುಕಿದ್ದರು. ಆದರೆ ಆ ಕನಸು ನನಸಾಗಲೇ ಇಲ್ಲ. ಅಪ್ಪುವಿನ ಈ ಕನಸನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನನಸು ಮಾಡುತ್ತಾರೆ ಎಂದು ಕಾದುನೋಡಬೇಕು.