ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಬೆನ್ನಲ್ಲೇ ಕೆಜಿಗಟ್ಟಲೇ ನೋಟನ್ನು ಹೊತ್ತೊಯ್ಯ್ದಆರ್ಯವರ್ಧನ್ ಗುರೂಜಿ.. ಪಡೆದ ಸಂಭಾವನೆ ಎಷ್ಟು ಗೊತ್ತಾ!!!

Aryavardhan guruji remuneration : ಬಿಗ್ ಬಾಸ್ ಸೀಸನ್ 9 ಕೊನೆಯ ಹಂತಕ್ಕೆ ತಲುಪಿದೆ. ಡಿಸೆಂಬರ್ 31 ಗ್ರ್ಯಾಂಡ್ ಫಿನಾಲೆ.  ಆದರೆ ಬಿಗ್​ಬಾಸ್​ ನಲ್ಲಿ ಮಿಡ್​ನೈಟ್​ ಎಲಿಮಿನೇಷನ್ ನಡೆದಿದ್ದು, ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಆಚೆ ಬಂದಿದ್ದಾರೆ. ಕೊನೆಯ ವಾರದಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಆರ್ಯವರ್ಧನ್​ ಗುರೂಜಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು.

‘ಆಟ ಚೆನ್ನಾಗಿ ಆಡಿದ್ದೀರಿ. ಎಲ್ಲರ ಜೊತೆ ಬೆರೆತಿದ್ದೀರಿ. ಈ ವಾರ ನೀವು ಇದ್ದ ರೀತಿ ಚೆನ್ನಾಗಿತ್ತು’ ಎಂದು ಕಿಚ್ಚ ಸುದೀಪ್​ ಹೇಳಿದ್ದರು. ಮೆಚ್ಚುಗೆ ಪಡೆದಿದ್ದಕ್ಕೆ ಆರ್ಯವರ್ಧನ್​ ಭಾವುಕರಾಗಿದ್ದರು.ಆದರೆ ಕೊನೆಗೂ ಫಿನಾಲೆಗೆ ಉಳಿಯಲು ಸಾಧ್ಯವಾಗಿಲ್ಲ.

ಪ್ಯಾಂಟ್ ಜಾರಿದ್ದನ್ನು ಗಮನಿಸದೆ ಗಡಿಬಿಡಿಯಲ್ಲಿ ಹೊರಬಂದ ನಟಿ ಜೆನಿಲಿಯಾ ಡಿಸೋಜಾ! ಕೊನೆಗೆ ವಿಡಿಯೋ ನೋಡಿ ಮುಜುಗರ ಪಟ್ಟ ನಟಿ!!

ಸಾಮಾನ್ಯವಾಗಿ ಪ್ರತಿ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಐದು ಜನ ಸ್ಪರ್ಧಿಗಳು ಮಾತ್ರ ಉಳಿಯುತ್ತಾರೆ. ಆದರೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಇರುವ ಕಾರಣ ರಾತ್ರಿ ಹೊಸ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ನಂಬರ್ ಜೊತೆ ಕಾಣಿಯಾಗುವ ಗೇಮ್ ‍ಪ್ಲ್ಯಾನ್ ಮಾಡಲಾಗಿತ್ತು.

Aryavardhan guruji remuneration biggboss
Aryavardhan guruji remuneration biggboss

ನಂಬರ್ 9 ರ ಜೊತೆ ಮುಳುಗುವ ಮತ್ತು ಅದರೊಂದಿಗೆ ಮತ್ತೆ ವಾಪಸ್ಸಾಗುವಂತೆ ಅದನ್ನು ಸಿದ್ಧಗೊಳಿಸಲಾಗಿತ್ತು. ಯಾವ ಸ್ಪರ್ಧಿ ನಂಬರ್ ಜೊತೆ ವಾಪಸ್ಸು ಬರುವುದಿಲ್ಲವೋ, ಅವರು ಎಲಿಮಿನೇಟ್ ಎಂದು ಘೋಷಿಸುವುದಾಗಿ ತಿಳಿಸಿತ್ತು. ಆ ನಂಬರ್ ಜೊತೆ ಆರ್ಯವರ್ಧನ್ ಗುರೂಜಿ ಬಂದಿಲ್ಲ. ಹೀಗಾಗಿ ಆರ್ಯವರ್ಧನ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

Aryavardhan guruji remuneration in  biggboss

ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಪಡೆಯುತ್ತಿದ್ದ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ.  ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತಿನ ಮೂಲಕ ಮೋಡಿ ಮಾಡುತ್ತಿದ್ದ ಆರ್ಯವರ್ಧನ್ ಗುರೂಜಿ ವಾರಕ್ಕೆ ಒಂದು ಲಕ್ಷ ದಿಂದ ಒಂದೂವರೆ ಲಕ್ಷ ರೂ ವರೆಗೆ ಸಂಭಾವನೆ ಪಡೆದಿದ್ದಾರು. ಆರ್ಯವರ್ಧನ್ ಗುರೂಜಿಯ ಬಿಗ್‌ ಬಾಸ್‌ ಮನೆಯಲ್ಲಿ ಹದಿನೈದು ವಾರಗಳ ಕಾಲ ಇದ್ದು, ಇಪ್ಪತ್ತೈದ ರಿಂದ ಮೂವತ್ತು ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಆರ್ಯವರ್ಧನ್​ ಗುರೂಜಿ ಅವರ ಮಾತುಗಳಿಂದ ಬಿಗ್​ ಬಾಸ್​ ಮನೆಯಲ್ಲಿ ಕಾಮಿಡಿ ವಾತಾವರಣ ಸೃಷ್ಟಿ ಆಗುತ್ತಿತ್ತು. ಹೆಚ್ಚು ಕಾಲ ಅವರು ಅಡುಗೆ ಮನೆಯಲ್ಲಿ ಇರುತ್ತಿದ್ದರು. ವೀಕೆಂಡ್​ ಸಂಚಿಕೆಗಳಲ್ಲಿ ಏನೇನೋ ಮಾತನಾಡಿ  ಎಲ್ಲರ ಗಮನ ಸೆಳೆದಿದ್ದರು. ಅದಲ್ಲದೇ ಪ್ರತಿ ಬಾರಿ ನಾಮಿನೇಟ್​ ಆದಾಗಲೂ ವೀಕ್ಷಕರ ವೋಟ್​ ಮೂಲಕ ಆರ್ಯವರ್ಧನ್​ ಗುರೂಜಿ ಸೇಫ್​ ಆಗುತ್ತಿದ್ದರು. ಆದರೆ ಕೊನೆ ಹಂತದಲ್ಲಿ ಎಲಿಮೀನೇಟ್ ಆದದ್ದು ಅಭಿಮಾನಿಗಳಿಗೆ ಬೇಸರ ತಂದಿದೆ. ಬಿಗ್ ಬಾಸ್ ಆಪ್ತರಾಗಿದ್ದ ರೂಪೇಶ್ ಶೆಟ್ಟಿ  ಆರ್ಯವರ್ಧನ್ ಅವರು ಎಲಿಮಿನೇಟ್ ಆಗಿರುವುದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸದ್ಯ 5 ಜನರು ಫಿನಾಲೆ ತಲುಪಿದ್ದು, ರೂಪೇಶ್​ ಶೆಟ್ಟಿ, ರೂಪೇಶ್​ ರಾಜಣ್ಣ, ರಾಕೇಶ್​ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್​ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ರೂಪೇಶ್​ ರಾಜಣ್ಣ ಮಾತ್ರ ಹೊಸಬರಾಗಿದ್ದು, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್​ ಅವರು ಈ ಹಿಂದಿನ ಸೀಸನ್​ಗಳಲ್ಲಿ ಭಾಗವಹಿಸಿದ್ದರು. ರಾಕೇಶ್​ ಅಡಿಗ ಮತ್ತು ರೂಪೇಶ್​ ಶೆಟ್ಟಿ ಅವರು ಒಟಿಟಿ ಸೀಸನ್​ನಿಂದ ಬಂದವರು. ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಪ್ರೇಕ್ಷಕ ವರ್ಗಕ್ಕಿದೆ.

Leave a Reply

Your email address will not be published. Required fields are marked *