ಅರ್ಜುನ್ ಸರ್ಜಾ ಮಗಳು ಐಶ್ವರ್ಯ ನಿಶ್ಚಿತಾರ್ಥ!! ಭರ್ಜರಿಯಾಗಿ ನೆರವೇರಿದ ನಿಶ್ಚಿತಾರ್ಥಕ್ಕೆ ಮೇಘನಾ ರಾಜ್ ಬಂದಿಲ್ಲ ಯಾಕೆ? ಇಲ್ಲಿದೆ ನೋಡಿ ಕಾರಣ!!!

Arjun Sarja Daughter Engagement : ಅಕ್ಟೋಬರ್ 27ರಂದು ನಡೆದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅವರ ನಿಶ್ಚಿತಾರ್ಥ ಬಹಳ ವಿಜೃಂಭಣೆಯಿಂದ ಚೆನ್ನೈನಲ್ಲಿ ನೆರವೇರಿತು. ಈ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಅವರ ಕುಟುಂಬದ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅವರು ತಮ್ಮ ಬಾಲ್ಯದ ಗೆಳೆಯನನ್ನೇ ವರಿಸಿ ಮದುವೆಯಾಗುತ್ತಿದ್ದಾರೆ.

ಐಶ್ವರ್ಯ ಅವರು ತಮಿಳಿನ ಜನಪ್ರಿಯ ನಟ ಅವರ ಸೊಸೆಯಾಗುತ್ತಿದ್ದಾರೆ. ಉಮಾಪತಿ ರಾಮಯ್ಯ ಅವರ ಕೈಹಿಡಿದು ತಂಬಿ ರಾಮಯ್ಯ ಅವರ ಸೊಸೆಯಾಗಿ ಹೋಗುತ್ತಿದ್ದಾರೆ. ಇನ್ನು ತಂಬಿ ರಾಮಯ್ಯ ಅವರ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ ಜನಪ್ರಿಯ ಪೋಷಕ ನಟ ಮತ್ತು ಹಾಸ್ಯ ನಟ ಆಗಿರುವ ಇವರು ಹಲವಾರು ವರ್ಷಗಳಿಂದ ಸಿನೆಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಹಾಗೆ ಒಳ್ಳೆಯ ಹೆಸರನ್ನು ಕೂಡ ಗಳಿಸಿದ್ದಾರೆ.

ಐಶ್ವರ್ಯ ಹಾಗೂ ಉಮಾಪತಿ ರಾಮಯ್ಯ ಅವರು ಬಾಲ್ಯದ ಸ್ನೇಹಿತರಾಗಿದ್ದು, ಈಗ ಸಪ್ತಪದಿ ತುಳಿಯುವ ನಿರ್ಧಾರವನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಕ್ಟೋಬರ್ 27ರಂದು ಚೆನ್ನೈನಲ್ಲಿ ಅದ್ದೂರಿಯಾಗಿ ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆಯನ್ನು ಕೂಡ ಏರಲಿರುವ ಈ ಜೋಡಿಗಳು ತಮ್ಮ ಪ್ರೀತಿಯನ್ನು ನಿಶ್ಚಿತಾರ್ಥದ ಮೂಲಕ ಜನತೆಗೆ ತಿಳಿಸಿದ್ದಾರೆ.

2013ರಲ್ಲಿ ಸಿನಿಮಾರಂಗಕ್ಕೆ ಪಾಧಾರ್ಪಣೆ ಮಾಡಿದ ಐಶ್ವರ್ಯ ಅವರು 2018 ರಲ್ಲಿ ತಮ್ಮ ಸಿನಿಮಾ ನಟನೆಯನ್ನು ಕೊನೆಗೊಳಿಸಿದ್ದಾರೆ.ಕನ್ನಡ ಸಿನಿಮಾ ಪ್ರೇಮ ಬರಹದ ಮೂಲಕ 2018 ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು, ತಮ್ಮ ತಂದೆಯ ನಿರ್ದೇಶನದಲ್ಲೇ ತಮ್ಮ ನಟನೆಯನ್ನು ಕೊನೆಗೊಳಿಸಿದ್ದಾರೆ. ಸಿನಿಮಾ ರಂಗವು ಅಷ್ಟಾಗಿ ಐಶ್ವರ್ಯ ಅವರಿಗೆ ಒಗ್ಗಿ ಬರಲಿಲ್ಲದ ಕಾರಣ, ತಮ್ಮ ನಟನೆಯನ್ನು ಕೊನೆಗೊಳಿಸಿ, ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಇಷ್ಟೆಲ್ಲ ವಿಜೃಂಭಣೆಯ ನಿಶ್ಚಿತಾರ್ಥ ನೆರವೇರಿದ್ರೂ ಕೂಡ ಮೇಘನಾ ರಾಜ್ ಮಾತ್ರ ಕ್ಯಾಮೆರಾ ಕಣ್ಣಿಗೆ ಎಲ್ಲೆಲ್ಲೂ ಕಾಣಿಸಲಿಲ್ಲ. ಮೇಘನಾ ರಾಜ್ ವರ ಪ್ರತಿಯೊಂದು ಕ್ಷಣದಲೂ ಪ್ರತಿಯೊಂದು ನೋವನ್ನು ಅರ್ಜುನ್ ಸರ್ಜಾ ಅವರು ಬೆನ್ನ ಹಿಂದೆ ನಿಂತು ಧೈರ್ಯ ತುಂಬಿದವರು. ಆದರೆ ಅವರ ಮಗಳ ಮದುವೆ ನಿಶ್ಚಿತಾರ್ಥಕ್ಕೆ ಮೇಘನಾ ಅವರು ಹೋಗಿಲ್ಲವಾ ಎಂಬುದು ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಎಂಬಂತೆ ಮೇಘನಾ ರಾಜ್ ಅವರ ತಮಿಳು ಸಿನಿಮಾ ಬಿಡುಗಡೆಯಾಗುತ್ತಿದ್ದು, ಅದರ ಪ್ರಮೋಷನ್ ಅಲ್ಲಿ ಮೇಘನಾ ಅವರು ಬಿಸಿಯಾಗಿದ್ದಾರೆ ಎಂದು ಕೇಳಿ ಬರುತ್ತಿದೆ.

ಆದ್ದರಿಂದ ಅವರು ಈ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಕೆಲವು ವರದಿಗಳ ಮೂಲಕ ತಿಳಿದು ಬಂದಿದೆ. ಅದೇನೇ ಇರಲಿ ಇತ್ತ ಐಶ್ವರ್ಯ ಎಂಗೇಜ್ಮೆಂಟ್ ಅಂತು ಭರ್ಜರಿಯಾಗಿ ನಡೆದು ಹೋಗಿದೆ. ಅರ್ಜುನ್ ಸರ್ಜಾ ಕುಟುಂಬದ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ಇನ್ನು ಮದುವೆಯು ಕೂಡ ವಿಜೃಂಭಣೆಯಿಂದ ಚೆನ್ನೈನಲ್ಲಿ ನೆರವೇರಲಿದೆ ಎಂದು ಸುದ್ದಿಯ ಮೂಲಗಳು ತಿಳಿಸಿವೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *