ನಮಸ್ತೆ ಪ್ರೀತಿಯ ವೀಕ್ಷಕರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವ್ಯಕ್ತಿ ಅಲ್ಲದೆ ಇಡೀ ಪ್ರಪಂಚಕ್ಕೆ ಇವರು ನಡೆದು ಬಂದ ಜೀವನ ಶೈಲಿ ಎಲ್ಲರಿಗೂ ಮಾದರಿ ಜೀವನ ಮಾಡಿ ತೋರಿಸಿಕೊಟ್ಟು ಹೋದ ಮಹಾನ್ ಸಾಧಕ. ಇಂಹತ ಸಹೃದಯದ ವಕ್ತಿಯ ಬಗ್ಗೆ ಎಷ್ಟು ಹೇಳಿದರು ಎಷ್ಟು ಹೊಗಳಿದರು ಕಡಿಮೆ ಎನ್ನಬಹುದು. ಇವರ ಸ್ಟಾರ್ ಗಿರಿ ನೋಡಿ ಅಭಿಮಾನಿ ಆದವರಿಗಿಂತ ಅವರ ಹೆಲ್ಪಿಂಗ್ ನೇಚರ್ ನೋಡಿ ಅವರಿಗೆ ದಸರಾದವರೇ ಹೆಚ್ಚು ಎಂದು ಹೇಳಬಹುದು.
ಆದರೆ ಅಪ್ಪು ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ ಎನ್ನುವುದು ತುಂಬಾ ಬೇಸರದ ಸಂಗತಿ. ಅಷ್ಟೇ ಅಲ್ಲದೆ ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಅಥವಾ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಕೂಡ ಯಾರಿಗಾದರೂ ಉಡುಗೊರೆ ಕೊಡಬೇಕು ಎಂದು ಎನಿಸಿದರೆ ಮೊದಲು ನೆನಪಾಗುವುದೇ ಅಪ್ಪು ಅವರ ಫೋಟೋ ಪ್ರೇಮ್ ಕೊಡೋಣ ಎಂದು ಮತ್ತು ಸಿನೆಮಾ ಕ್ಷೇತ್ರಕ್ಕೆ ಸಂಬಂಧ ಪಟ್ಟ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಮೊದಲು ಅಪ್ಪು ಅವರಿಗೆ ಗೌರವ ಸಲ್ಲಿಸಿ ನಂತರ ಕಾರ್ಯಕ್ರಮ ಶುರು ಮಾಡುವುದು ಕಳೆದ 9 ತಿಂಗಳಿನಿಂದ ಕರ್ನಾಟಕದಲ್ಲಿ ಶುರುವಾಗಿದೆ.
ಯಾವುದೇ ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಅಲ್ಲಿ ಅಪ್ಪು ಫೋಟೋ ಇಡುತ್ತಾರೆ ಮತ್ತು ಯಾವುದೇ ಊರಿನ ಜಾತ್ರೆಗೆ ಹೋದರು ಕೂಡ ಅಲ್ಲಿ ದೇವರ ರಥವಣೆ ಮೆರವಣಿಗೆ ಜೊತೆ ಹಿಂದೆ ಅಪ್ಪು ಅವರ ಫೋಟೋ ಕೂಡ ಅಭಿಮಾನಿಗಳು ಹೊತ್ತು ತಿರುಗುತ್ತಾರೆ. ಹೀಗೆ ದಾಖಲೆ ಮಟ್ಟದಲ್ಲಿ ಅಂತ್ಯ ಸಂಸ್ಕಾರಕ್ಕೆ ಬಂದು ಹೊಸದೊಂದು ದಾಖಲೆ ಬರೆದ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ, ನೇತ್ರದಾನ, ಅನ್ನದಾನ, ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಇನ್ನೂ ಹಲವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ದಿನವನ್ನು ಕರುನಾಡಲ್ಲಿ ಹಬ್ಬವನ್ನಾಗಿ ಆಚರಿಸುತ್ತಾರೆ.

ಇಷ್ಟೆಲ್ಲಾ ಆದರೂ ಕೂಡ ನಾವು ವಾಸ್ತವಿಕೆಯನ್ನು ಒಪ್ಪಿಕೊಂಡು ಬದುಕಿನ ಸಾಗಿಸುತ್ತಿದ್ದರು ಕೂಡ ದಿನನಿತ್ಯದ ಚಟುವಟಿಕೆ ನಡುವೆ ಇನ್ನೂ ಮನದಲ್ಲಿ ಅಪ್ಪು ಇಲ್ಲ ಎನ್ನುವ ನೋವಿನ ನೆನಪು ಗಟ್ಟಿಯಾಗಿ ಹೆಪ್ಪುಗಟ್ಟಿದೆ. ಈಗಾಗಲೇ ಅಪ್ಪು ಅವರನ್ನು ಅಗಲಿಕೆಯ ಸಾ@ವಿಗೆ ಈಡು ಮಾಡಿದ ವಿಧಿಗೆ ಕೋಟ್ಯಂತರ ಜನರು ಶಾಪ ಹಾಕಿದ್ದಾರೆ.
ಅದರೆ ವಿಶೇಷವಾಗಿ ಇಲ್ಲೊಬ್ಬ ಭಕ್ತ ದೇವರ ದೇವರ ಬಿಳಿ ಪುನೀತ್ ರಾಜ್ ಕುಮಾರ್ ಅವರ ವಿಷಯವಾಗಿ ಹೊಸ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಈ ಘಟನೆ ಅಫ್ಜಲ್ ಪುರದಲ್ಲಿ ನಡೆದಿದೆ ಅಲ್ಲಿಯ ದೇವಸ್ಥಾನದಲ್ಲಿ ಹುಂಡಿಯ ಕಾಣಿಕೆಯ ಹಣದ ಏಣಿಕೆಯ ಕಾರ್ಯ ನಡೆಯುತ್ತಿತ್ತು. ಅಲ್ಲಿ ಒಂದು ಚೀಟಿಯು ಎಣಿಕೆ ಮಾಡುವ ಸಿಬ್ಬಂದಿಗೆ ಸಿಕ್ಕಿದೆ ಕುತೂಹಲದಿಂದ ಚೀಟಿಯನ್ನು ತೆರೆದು ಓದಿದಾಗ ಅಲ್ಲಿ ದೇವರ ಭಕ್ತರೊಬ್ಬರು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಅಗಿದ್ದು, ಮತ್ತೆ ಪುನೀತ್ ಅಣ್ಣನನ್ನು ಭೂಮಿ ಮೇಲೆ ಕಳಸಿ ಕೊಡು ದೇವರೇ ಎಂದು ಬರೆದು ತಮ್ಮ ಸಹಿಯನ್ನು ಕೂಡ ಮಾಡಿದ್ದಾರೆ.
ನಿಜವಾಗಿಯೂ ಇಂತಹ ಅಭಿಮಾನಿಗಳನ್ನು ಪಡೆದ ಅಭಿಮಾನಿಗಳ ದೇವರಾದ ಪುನೀತ್ ರಾಜ್ ಕುಮಾರ್ ಅವರೇ ಧನ್ಯರು ಎಂದು ಹೇಳಬಹುದು. ಈ ಪ್ರಕಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.