Anushka Shetty Marriage: ಖ್ಯಾತ ನಟಿಯಾಗಿರುವ ಅನುಷ್ಕಾ ಶೆಟ್ಟಿಯವರ ನಟನೆ ಹಾಗೂ ಬ್ಯೂಟಿಗೆ ತಲೆಬಾಗಲೇ ಬೇಕು. ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ, ಕಳೆದ 15 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿದ್ದು ಸಾಕಷ್ಟು ಬೇಡಿಕೆಯಿದೆ. ಬಾಹುಬಲಿ ಚಿತ್ರದಲ್ಲಿ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡ ಮೇಲೆ ಅನುಷ್ಕಾ ಶೆಟ್ಟಿ ಅವರ ಬೇಡಿಕೆ ಹೆಚ್ಚಾಯಿತು. ತದನಂತರದಲ್ಲಿ ಅರುಂಧತಿ ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಗಳಿಸಿಕೊಂಡರು.
2018ರಲ್ಲಿ ತೆರೆಕಂಡ ‘ಭಾಗಮತಿ’ ಕೂಡ ಮಹಿಳಾ ಪ್ರಧಾನ ಸಿನಿಮಾವಾಗಿತ್ತು. ಆದಾದ ಬಳಿಕ ನಿಶ್ಯಬ್ಧಂನಲ್ಲೂ ಅನುಷ್ಕಾ ಪಾತ್ರವೇ ಎಲ್ಲರ ಗಮನ ಸೆಳೆಯಿತು. ಇನ್ನು, ನಟಿ ಅನುಷ್ಕಾ ಶೆಟ್ಟಿಯವರು ಮದುವೆ ವಿಚಾರವಾಗಿ ಸುದ್ದಿಯಾಗಿದ್ದರು. ಈ ಹಿಂದೆ, ಪ್ರಭಾಸ್ ಹಾಗೂ ಅನುಷ್ಕಾ ಸಿನಿ ಪರದೆಯಲ್ಲಿ ಬೆಸ್ಟ್ ಜೋಡಿಯಾಗಿ ಕಾಣಿಸಿಕೊಂಡವರು.
ಕಳೆದ ವರ್ಷ ಅನುಷ್ಕಾ ಶೆಟ್ಟಿ ಸಂದರ್ಶನವೊಂದರಲ್ಲಿ ಪ್ರಭಾಸ್ ಜೊತೆಗಿನ ಸಂಬಂಧದ ಕುರಿತಾಗಿ ಪ್ರಶ್ನೆ ಕೇಳಿದಾಗ ಸ್ವಷ್ಟ ಉತ್ತರ ಹೇಳುವ ಮೂಲಕ ತೆರೆ ಎಳೆದಿದ್ದರು. ’15 ವರ್ಷಗಳಿಂದ ನಾನು ಪ್ರಭಾಸ್ ಒಳ್ಳೆಯ ಸ್ನೇಹಿತರು. ನಾನು ಮಧ್ಯರಾತ್ರಿ 3 ಗಂಟೆಗೆ ಕರೆ ಮಾಡಿದರೂ ಅವರು ಪೋನ್ ತೆಗೆಯುತ್ತಾರೆ. ಇಷ್ಟು ಗಾಢವಾದ ಸ್ನೇಹ ನಮ್ಮ ನಡುವೆ ಇದೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಪ್ರೇಮ ಸಂಬಂಧ ಇತ್ತು ಅಂತಾದರೆ ಅದು ಇಷ್ಟೊತ್ತಿಗೆ ಬಹಿರಂಗವಾಗುತ್ತಿತ್ತು. ಆದರೆ ನಮ್ಮಿಬ್ಬರ ನಡುವೆ ಅಂತಹದ್ದೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಇತ್ತೀಚೆಗಷ್ಟೇ ಅನುಷ್ಕಾ ಶೆಟ್ಟಿಯವರ ಮದುವೆ ದಿನಾಂಕ ಕೂಡ ಪ್ರಕಟವಾಗಲಿದೆ ಎನ್ನುವ ಸುದ್ದಿ ತೆಲುಗು ಸಿನಿಮಾರಂಗದಲ್ಲಿ ಹರಿದಾಡಿತ್ತು. ಅನುಷ್ಕಾ ಶೆಟ್ಟಿ ಸಿನಿಮಾರಂಗದವರನ್ನು ಮದುವೆಯಾಗುತ್ತಿಲ್ಲವಂತೆ, ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ ಎನ್ನಲಾಗಿತ್ತು. ಅಂದಹಾಗೆ, ಅನುಷ್ಕಾ ಶೆಟ್ಟಿ ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರೆ.

ನಟಿ ಮದುವೆಯಾಗಲಿರುವ ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ ಮಾಡುತ್ತಿದ್ದಾರೆ. ಅದರ ಜೊತೆಗೆ, ಅನುಷ್ಕಾ ಶೆಟ್ಟಿ ಮದುವೆ ಇದೇ ವರ್ಷದಲ್ಲಿ ನೆರವೇರಲಿದೆ. ಮದುವೆಗೆ ಸಿದ್ಧತೆಯನ್ನು ಕೂಡ ಕುಟುಂಬಸ್ಥರು ಶುರು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಧಿಕೃತ ಮಾಹಿತಿ ಬಿದ್ದಿರಲಿಲ್ಲ.
ಗಂಡ ಇದ್ದರೂ, ಪ್ರಿಯಕರನ ಜೊತೆ ಲವ್ವಿ ಡವ್ವಿ! ಕಬ್ಬಿನ ಗದ್ದೆಯಲ್ಲಿ ನಡೆದದ್ದನ್ನು ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು! ಕಬ್ಬಿನ ಗದ್ದೆಯ ರಹಸ್ಯ ನೋಡಿ!!
ನಟಿ ಅನುಷ್ಕಾ ಶೆಟ್ಟಿಯವರು ಈ ವರ್ಷವೇ ವೈವಾಹಿಕ ಜೀವನಕ್ಕೆ ಕಾಲಿಡುವುದು ನಿಜಾನಾ ಎಂದು ಕಾದು ನೋಡಬೇಕು. ಆದರೆ ಇವರು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರೂ ಮುಂದಿನ ಪ್ರಾಜೆಕ್ಟ್ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ನಡುವೆ ನಟಿಯೂ ಯಾರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ವಿಚಾರವನ್ನು ಅವರ ಅಭಿಮಾನಿಗಳಲ್ಲಿ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಈ ಕುರಿತಾಗಿ ಅಧಿಕೃತ ಮಾಹಿತಿಯೊಂದು ಹೊರ ಬೀಳಬೇಕು.