ಸಿನಿಮಾ ಲೋಕ ಈ ಬಣ್ಣದ ಲೋಕದ ಹೆಸರು ಕೇಳಿದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಸಹಜವಾಗಿ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುತ್ತಾರೆ. ಅದಲ್ಲದೇ ಸೆಲೆಬ್ರಿಟಿಗಳ ಎಂದ ಮೇಲೆ ಸಿನಿಮಾ ಹೊರತು ಪಡಿಸಿ ಇನ್ನಿತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಇತ್ತ ನಟ ನಟಿಯರ ಬದುಕಿನ ಬಗ್ಗೆ ಫ್ಯಾನ್ಸ್ ಗಳಿಗೂ ಕುತೂಹಲವಿರುತ್ತದೆ.
ಅದಲ್ಲದೇ , ಅಪಾರ ಸಂಖ್ಯೆಯ ಫ್ಯಾನ್ಸ್ ಗಳನ್ನು ಹುಟ್ಟಿಹಾಕಿಕೊಳ್ಳುವುದಲ್ಲದೇ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುವುದಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯರನ್ನು ಕಾಲೆಳೆಯುವುದು ಹೊಸದೇನಲ್ಲ ಬಿಡಿ. ಕೆಲವೊಮ್ಮೆ ನಟ ನಟಿಯರು ನೆಟ್ಟಿಗರ ಬಾಯಿಗೆ ಆಹಾರವಾಗುವುದಿದೆ. ಆದರೆ ನೆಟ್ಟಿಗರು ಏನೇ ಹೇಳಿದರೂ ಕೂಡ ಕೆಲವು ಬಾರಿ ಸೆಲೆಬ್ರಿಟಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ.
ಇನ್ನು ಕೆಲವರು ಖಡಕ್ ಆಗಿ ಉತ್ತರ ನೀಡುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸುತ್ತಾರೆ. ಇದೀಗ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ (Anupamaa Parameshwaran) ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ. ಸಿನಿಮಾರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪರಮೇಶ್ವರನ್ ಅವರು ಟ್ರೋಲಿಗರ ಟೀಕೆಗೆ ಗುರಿಯಾಗಿದ್ದಾರೆ. ಅಂದಹಾಗೆ, ಗ್ಲಾಮರಸ್ (Glamours) ಪಾತ್ರಗಳಿಂದ ದೂರ ಉಳಿದಿರುವ ನಟಿ ಅನುಪಮಾರವರನ್ನು ನೆಟ್ಟಿಗನು, ನೀವೂ ಹೀರೋಯಿನ್ ಮೆಟೀರಿಯಲ್ ಅಲ್ಲ ಎಂದಿದ್ದಾರೆ.
ಹೌದು, ನೀನು ದೊಡ್ಡ ನಾಯಕಿ ಅಂತೇನೂ ಅಲ್ಲ.. ಅದಕ್ಕೇ ದೊಡ್ಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತಿಲ್ಲ. ಅದರಲ್ಲೂ ನೀವು ಹೀರೋಯಿನ್ ಮೆಟೀರಿಯಲ್ ಅಲ್ಲ..” ಎಂದು ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ್ದು, ನಟಿ ಅನುಪಮಾರವರು ಗರಂ ಆಗಿದ್ದು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನ ಕಾಮೆಂಟ್‌ಗೆ ಅನುಪಮಾ ಪರಮೇಶ್ವರನ್ ಪ್ರತಿಕ್ರಿಯೆ ನೀಡಿದ್ದು, . “ನೀವು ಹೇಳಿದ್ದು ಸರಿ ಬ್ರೋ.. ನಾನು ಹೀರೋಯಿನ್ ಮೆಟೀರಿಯಲ್ ಅಲ್ಲ.. ಆದರೆ ಒಬ್ಬ ನಟಿ” ಎಂದು ಸ್ಮೈಲಿ ಎಮೋಜಿ ಯನ್ನು ಹಾಕಿದ್ದಾರೆ.
ಪ್ರೇಮಮ್ (Premam) ಸಿನಿಮಾದಲ್ಲಿ ನಟಿಸುವ ಬಣ್ಣದ ಲೋಕದ ಜರ್ನಿ ಶುರು ಮಾಡಿದ ನಟಿ ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನಬಹುದು. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳ ಸದಾ ಸುದ್ದಿಯಲ್ಲಿರುತ್ತಾರೆ ಈ ನಟಿ. ಸಿನಿ ಬದುಕಿನಲ್ಲಿಯೂ ಬ್ಯುಸಿಯಾಗಿರುವ ನಟಿ ಅನುಪಮಾರವರು ಇದೀಗ ಡಿಜೆ ಟಿಲ್ಲು (DJ Tillu) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.