Anupama gowda remuneration : ಖ್ಯಾತ ನಿರೂಪಕಿಯಾದ ಅನುಪಮ ಗೌಡ ಅವರು ಬಿಗ್ ಬಾಸ್ ಸೀಸನ್ ೯ರ ಅನುಭವಿ ಸ್ಪರ್ಧಿಯಾಗಿ ಮನೆ ಒಳಗೆ ಕಾಲಿಟ್ಟಿದ್ದರು. ಬಿಗ್ ಬಾಸ್ ಸೀಸನ್ 5 (bigg boss kannada season 9) ರಲ್ಲಿಯೂ ಅಭ್ಯರ್ಥಿಯಾಗಿದ್ದ ಇವರು, ಉಳಿದ ಸ್ಪರ್ಧಿಗಳ ಜೊತೆ ಗಟ್ಟಿ ಎದುರಾಳಿಯಾಗಿ ಆಡಿದ್ದರು. ಸೀಸನ್ ಐದರ ಕೊನೆಯ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದರು. ಕೈ ಚಾಚಿದರೆ ತಾಕುವಷ್ಟು ಹತ್ತಿರದಲ್ಲಿದ್ದ ಗೆಲುವು ಕೊಂಚವೇ ಅಂತರದಲ್ಲಿ ತಪ್ಪಿಹೋಯಿತು.
ಸೀಸನ್ 5 ರಲ್ಲಿ ಎಡವಿದ ಸಣ್ಣಪುಟ್ಟ ತೊಡಕುಗಳನ್ನು ಅನುಪಮಾ ಗೌಡ ಅವರು ಸರಿಪಡಿಸಿಕೊಂಡು, ಬಿಗ್ ಬಾಸ್ ಸೀಸನ್ 9ರಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದ್ದರು. ನಟನೆ ಹಾಗೂ ನಿರೂಪಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅನುಪಮ ಗೌಡ ಅವರಿಂದ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯ ವಿಚಾರವಾಗಿ ಯಾವುದೇ ಕೊರತೆ ಕಾಣಲಿಲ್ಲ. ಅಡುಗೆ, ಉಳಿದ ಮನೆ ಕೆಲಸ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಅನುಪಮಾ ಗೌಡ ಅವರನ್ನು ಪ್ರೇಕ್ಷಕರು ಬಿಗ್ ಬಾಸ್ ಸೀಸನ್ 9ರ ವಿಜೇತರೆಂದೇ ಭಾವಿಸಿದ್ದರು.
ಮನೆಯ ಎಲ್ಲಾ ಸದಸ್ಯರೊಂದಿಗೆ ಚೆನ್ನಾಗಿ ಬೆರೆತು, ಪ್ರತಿಯೊಂದು ಟಾಸ್ಕ್ ಗಳಲ್ಲಿಯೂ ಎದುರಾಳಿ ತಂಡಗಳಿಗೆ ಅಥವಾ ಅಭ್ಯರ್ಥಿಗಳಿಗೆ ಭರ್ಜರಿ ಸ್ಪರ್ಧೆ ನೀಡಿ, ಅನುಪಮಾ ಗೌಡ ಎಂದರೆ ಟಫ್ ಕಂಟೆಸ್ಟೆಂಟ್ ಎಂದು ಹೇಳುವಂತೆ ಆಡಿದ್ದರು. ಅನುಪಮಾ ಗೌಡ ಅವರ ಬಿಗ್ ಬಾಸ್ 9ರ ಆಟವನ್ನು ಗಮನಿಸಿದ ಪ್ರೇಕ್ಷಕರು, ಅನುಪಮಾ ಅವರು ಬಹಳ ಕಲಿತುಕೊಂಡು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಗಟ್ಟಿಗಿತ್ತಿಯಾಗಿದ್ದು, ಫಿನಾಲೆಯಲ್ಲಿ ಅವರನ್ನು ಕಾಣುವ ನೀರಿಕ್ಷೆ ಇಟ್ಟುಕೊಂಡಿದ್ದರು. ಆದರೆ ಪ್ರೇಕ್ಷಕರ ನಿರೀಕ್ಷೆಯು ಸುಳ್ಳಾಗಿದ್ದು, ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.
ಬಿಗ್ ಬಾಸ್ ಪ್ರಿಯರು ಶನಿವಾರ ಹಾಗೂ ಭಾನುವಾರದ ಸುದೀಪವರೊಂದಿಗಿನ (kichcha sudeepa) ಮಾತು ಕಥೆಗಳನ್ನು ವೀಕ್ಷಿಸಲು ಉತ್ಸುಕರಾಗಿರುತ್ತಾರೆ. ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆಯು ಎಲ್ಲರಿಗೂ ಶಾಕ್ ನೀಡಿದ್ದು, ಪ್ರೇಕ್ಷಕರ ಲೆಕ್ಕಾಚಾರಗಳು ಏರಿಳಿತ ಕಂಡಿವೆ. ಬಿಗ್ ಬಾಸ್ ಸೀಸನ್ ೯ರ ಫಿನಾಲೆಯ ವೇದಿಕೆ ಮೇಲೆ ಅನುಪಮಾ ಗೌಡ ಕಾಣಿಸಿಕೊಳ್ಳುತ್ತಾರೆ ಎಂದು ಹಂಬಲಿಸಿದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅನುಪಮಾ ಅವರೇ ವಿಜೇತರು ಎಂಬಂತೆ ಬಿಂಬಿಸಿದ್ದರು..
ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದ್ದು ಅನುಪಮಾ ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.ಅಣ್ಣ ತಂಗಿ ದಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನುಪಮಾ ಗೌಡ ಅವರು ಅಕ್ಕ, ಚಿ ಸೌ ಸಾವಿತ್ರಿ ಧಾರವಾಹಿಗಳಲ್ಲಿಯೂ ಮಿಂಚಿದ್ದಾರೆ. ಪುಟ 109, ಆ ಕರಾಳ ರಾತ್ರಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದು ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಕಾರಿನ ಹೊರಮೈ ಸುತ್ತ ಸಗಣಿಯನ್ನು ಬಳಿದುಕೊಂಡು ಓಡಾಡುತ್ತಿರುವ ಮಹಿಳೆ…ಇದರ ಹಿಂದಿನ ರಹಸ್ಯ ತಿಳಿದರೆ ನೀವು ಅಚ್ಚರಿಪಡ್ತೀರಾ..!
ಇನ್ನು ಅನೇಕ ರಿಯಾಲಿಟಿ ಶೋ ಗಳನ್ನು ನಿರೂಪಣೆ ಮಾಡಿ ಗೆದ್ದಿರುವ ಅನುಪಮಾ ಗೌಡ ಅವರನ್ನು ಅವರ ಅಭಿಮಾನಿಗಳು ಕುಗ್ಗಿಸದೆ, ‘ನಿಮ್ಮನ್ನು ಹೊಸದಾಗಿ ಇನ್ನೊಂದು ಕಾರ್ಯಕ್ರಮದಲ್ಲಿ ನೋಡ ಬಯಸಿದ್ದೇವೆ; ನೀವು ಕಳೆದು ಬಂದಿರುವ ಜೀವನದ ಹಾದಿಯು ಮಾದರಿಯಾಗಿದೆ’ ಎನ್ನುತ್ತಾ ಪ್ರೋತ್ಸಾಹಿಸಿದ್ದಾರಂತೆ.
ಬಿಗ್ ಬಾಸ್ ಸೀಸನ್ 09ಕ್ಕೆ ಅನುಪಮಾ ಗೌಡ ಭರ್ಜರಿ ಯಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿಯಾದ್ರೂ ಬಿಗ್ ಬಾಸ್ ಗೆಲ್ಲಲೇಬೇಕು ಎಂಬ ಮಹದಾಸೆ ಹೊಂದಿದ್ದರು. ಆದರೆ ದುರದೃಷ್ಟವಶಾತ್ ಬಿಗ್ಬಾಸ್ ಟ್ರೋಫಿಗೆ ಮುತ್ತಿಕ್ಕುವ ಕನಸು ನನಸಾಗಲಿಲ್ಲ.ತುಂಬಾ ಟಫ್ ಫೈಟ್ ಕೊಟ್ಟು ಪ್ರತಿ ಗೇಮ್‌ನಲ್ಲೂ ಸೂಪರ್ ಅಗಿ ಸ್ಪರ್ಧಿಸುತ್ತಿದ್ದ ಅನುಪಮಾ ಗೌಡ ಹೊರ ಬಂದಿರುವುದು ಕೊಂಚ ಶಾಕಿಂಗ್ ವಿಚಾರವೇ. ಇನ್ನು ಇವರಿಗೆ ಪ್ರತಿ ವಾರಕ್ಕೆ ಸುಮಾರು ಎರಡು ಲಕ್ಷ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.