ತನ್ನ ಬಹುದಿನದ ಕನಸನ್ನು ನನಸಾಗಿಸಿಕೊಂಡ ಅಂಕಿತ ಜೈರಾಮ್, ವಿಶೇಷ ಪೋಸ್ಟ್ ಹಂಚಿಕೊಂಡು ಹೇಳಿದ್ದೇನು ನೋಡಿ!!

ಇದು ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಧಾರಾವಾಹಿಯಲ್ಲಿ ಕಾಣಿಸುವ ನಟಿಯರನ್ನು ಜನರು ಹೆಚ್ಚು ಫಾಲೋ ಮಾಡುತ್ತಾರೆ ಮತ್ತು ಇಷ್ಟಪಡುತ್ತಾರೆ. ಕೆಲವು ಬಾಲ ನಟಿಯರು ಕೂಡ ಯಾವ ಹೀರೋಯಿನ್ ಗೂ ಕಡಿಮೆ ಇಲ್ಲದ ರೀತಿಯಲ್ಲಿ ಫೇಮಸ್ ಆಗುತ್ತಿದ್ದಾರೆ. ಅಂಕಿತ ಜೈರಾಮ ಕೂಡ ಒಬ್ಬರು. ಈ ಪುಟ್ಟ ಪೂರಿ ಕನ್ನಡದ ಹೆಸರಾಂತ ಕಲಾವಿದರ ಜೊತೆಗೆ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಮಾತ್ರವಲ್ಲದೆ ಕನ್ನಡ ಕಿರುತೆರೆ ಲೋಕದಲ್ಲಿಯೂ ಕೂಡ ನೋಡಿ ಮಾಡಿದ್ದಾಳೆ.

ಪುಟಾಣಿ ಅಂಕಿತ ಜಯರಾಮ ಇತ್ತೀಚಿಗೆ ತನ್ನ ಕನಸು ಈಡೇರಿರುವ ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕನ್ನಡದ ಕ್ರಾಂತಿ ಮೊದಲದ ಸಿನಿಮಾಗಳಲ್ಲಿ ಅಭಿನಯಿಸಿರುವ ಅಂಕಿತ ಜಯರಾಮ್ ಫಾರಿನ್ ಶೂಟ್ ಕೂಡ ಮುಗಿಸಿ ಬಂದಿದ್ದಾರೆ. ಪುಟಾಣಿ ಅಂಕಿತ ಜೈರಾಮ್ ಇನ್ನೂ ಸ್ಕೂಲ್ನಲ್ಲಿ ಓದುತ್ತಿರುವ ಹುಡುಗಿ.

ಆದರೆ ಅವರಿಗೆ ಅವಕಾಶಗಳ ಮಳೆಯೇ ಸುರಿಯುತ್ತಿದ್ದು ಸರಿಯಾಗಿ ಶಾಲೆಗೆ ಹೋಗುವುದಕ್ಕೂ ಸಮಯ ಸಿಗುವುದಿಲ್ಲ ಎಂದು ಅಂಕಿತ ಅವರೇ ಹೇಳಿಕೊಂಡಿದ್ದಾರೆ. ಆದರೆ ಓದಿನಲ್ಲಿಯೂ ಕೂಡ ಚೂಟಿಯಾಗಿರುವ ಅಂಕಿತ ಓದು ಹಾಗೂ ನಟನೆ ಎರಡನ್ನು ಬಹಳ ಸಮಾನವಾಗಿ ನಿಭಾಯಿಸುತ್ತಿದ್ದಾರೆ.ಸದ್ಯ ಭೂಮಿಗೆ ಬಂದ ಭಗವಂತ ಎನ್ನುವ ಧಾರಾವಾಹಿಯಲ್ಲಿ ಅಂಕಿತ ಜಯರಾಮ ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಆಕ್ಟಿವ್ ಆಗಿರುವ ಅಂಕಿತ ಅವರು ಇತ್ತೀಚಿಗೆ ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಗೆ ಭೇಟಿ ನೀಡಿದ್ದು ಇಂದು ತನ್ನ ಕನಸು ನನಸಾಗಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಅಂಕಿತ ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಂ ಅವರ ಜೊತೆಗಿನ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.

ಅಂಕಿತ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಏನಿದೆ?ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಗೆ ಅಂಕಿತ ಭೇಟಿ ನೀಡಿದ್ದಾರೆ ಇದಕ್ಕೆ ಅವರನ್ನು ರವಿ ಸರ್ ಅವರ ಮಗ ವಿಕ್ರಂ ಅವರೇ ಕರೆದು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ. “ಸಾಮಾನ್ಯವಾಗಿ ರಾಜಾಜಿನಗರದ ಕಡೆ ಹೋದಾಗ್ಲೆಲ್ಲ ಇದು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮನೆ ಅಂತ ತೋರಿಸ್ತಾನೆ ಇದ್ದ ಪಪ್ಪ.

ನನಗೆ ಇವತ್ತು ಅವರ ಮನೆಗೆ ಬರ್ಬೇಕಂತೆ ಅಂತ ಪ್ರೀತಿಯ ಆಮಂತ್ರಣ ಸಿಕ್ಕಿದೆ ಅಂತ ಗೊತ್ತಾದಾಗ ಮನಸ್ಸಿಗೆ ಎಷ್ಟು ಖುಷಿಯಾಗ್ಬ್ಯಾಡ, ಅದರಲ್ಲೂ ಚಿತ್ರರಂಗದ ಎಷ್ಟೊ ಕಲಾವಿದರೂ ಈಶ್ವರಿ ಪ್ಫೋಡಕ್ಷನ್ ನ ಅನ್ನ ತಿಂದು ಬೆಳೆದಿದ್ದಿವಿ ಅಂತ ಹೇಳಿದ್ದನ್ನು ಕೇಳಿದ್ದೆ. ಇವತ್ತು ಅವರ ಮನೆಯಲ್ಲಿ ನಮಗೆ ಆ ಅವಕಾಶ ಕೊಟ್ಟ ತಾಯಿ ಈಶ್ವರಿ ಗೆ ಕೋಟಿ ನಮನ.

ನಿಮ್ಮ ಈ ಪ್ರೀತಿಯ ಆತಿಥ್ಯಕ್ಕೆ ನೀವು ತೋರಿದ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ವಿಕ್ರಂ ಅಣ್ಣ. ಕನಸೊಂದು ನನಸಾದ ಸುದಿನ, ಮಾಹಿತಿ ಅತಿ ಶೀಘ್ರದಲ್ಲಿ” ಎಂದು ಅಂಕಿತಾ ಪೋಸ್ಟ್ ಹಂಚಿಕೊಂಡಿದ್ದಾರೆ.ನಟ ವಿಕ್ರಂ ಅವರ ಜೊತೆಯಲ್ಲಿ ಸೆಲ್ಫೀ ಕೂಡ ತೆಗೆದುಕೊಂಡಿರುವ ಅಂಕಿತಾ ವಿಕ್ರಂ ಅವರ ಫ್ಯಾಮಿಲಿ ಜೊತೆಗೆ ಊಟ ಮಾಡಿದ್ದಾರೆ.

ಬಹುಶಃ ನಟ ವಿಕ್ರಂ ಅವರ ಹೊಸ ಪ್ರಾಜೆಕ್ಟ್ ನಲ್ಲಿ ಅಂಕಿತಾ ಕೂಡ ನಟಿಸುತ್ತಿರಬೇಕು ಎಂದು ಜನ ಕಮೆಂಟ್ ಮಾಡಿದ್ದಾರೆ. ಅಪ್ಪನ ಆಸೆಯಂತೆ ನಟನಾ ಜೀವನವನ್ನು ಅಂಕಿತಾ ಆರಂಭಿಸಿದ್ದಾರೆ. ಇವರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಸಿಗುವ ಅವಕಾಶಗಳನ್ನು ನೋಡಿದರೆ, ನಟನಾ ರಂಗದಲ್ಲಿ ಅಂಕಿತಾ ಅವರಿಗೆ ಉತ್ತಮ ಭವಿಷ್ಯವಿದೆ ಎನ್ನಬಹುದು.

Leave a Reply

Your email address will not be published. Required fields are marked *