ಸಿನಿಮಾ ಎನ್ನುವುದು ಬಣ್ಣದ ಲೋಕ. ಆದರೆ ಇಲ್ಲಿ ನಟಿಸುವ ಕಲಾವಿದರು ಸಿನಿಮಾದಲ್ಲಿ ಹೇಗೆ ರಂಗಾಗಿ ಕಾಣಿಸಿಕೊಳ್ಳುತ್ತಾರೋ ತೆರೆಯ ಹಿಂದೆ ಕೂಡ ಅವರ ಜೀವನ ಇದೇ ರೀತಿ ಇರುವುದಿಲ್ಲ. ಕೆಲವರು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು, ಕಷ್ಟಗಳನ್ನು ನೋವುಗಳನ್ನು ಅನುಭವಿಸುತ್ತಿರುತ್ತಾರೆ. ಜನರು ಸಿನಿಮಾ ನೋಡಿ ಆಹಾ ಇವರ ಬದುಕು ಎಷ್ಟು ಬಣ್ಣದಿಂದ ಕೂಡಿರಬಹುದು ಎಷ್ಟು ಐಷಾರಾಮಿಯಾಗಿ ಇರಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಹಾಗಿಲ್ಲ.
ಅದೆಷ್ಟೋ ಹುಡುಗಿಯರು ಇಂದು ಬೇರೆ ಬೇರೆ ಕಾರಣಕ್ಕೆ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ. ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್, ಬಾಡಿ ಶೇಮಿಂಗ್ ಎಲ್ಲವನ್ನು ಅನುಭವಿಸುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕೆಲವು ನಟಿಯರು ತಮ್ಮ ವೈಯಕ್ತಿಕ ಜೀವನದಲ್ಲಿ ಗಂಡನಿಂದಲೂ ಅಥವಾ ಪ್ರೇಮಿಯಿಂದಲೂ ಸಾಕಷ್ಟು ಹಿಂ-ಸೆ ಅನುಭವಿಸುತ್ತಿದ್ದಾರೆ.
ಹಾಗೆ ತಾನು ಪ್ರೀತಿಸಿ ಜೊತೆಗಿದ್ದ ಹುಡುಗನಿಂದ ಮೋ-ಸ ಹೋಗಿ ಆತನಿಂದಲೇ ಸಾಕಷ್ಟು ಬಾರಿ ಚಿ-ತ್ರ- ಹಿಂ-ಸೆ ಅನುಭವಿಸಿದ ನಟಿ ಅನಿಕ ವಿಜಯ್ ವಿಕ್ರಮನ್. ಇನ್ಸ್ಟಾಗ್ರಾಮ್ ನಲ್ಲಿ ಇದೀಗ ತನ್ನ ಪ್ರಿಯಕರ ತನಗೆ ನೀಡಿದ ಚಿ-ತ್ರ-ಹಿಂ-ಸೆಯ ಹಲವಾರು ಫೋಟೋಗಳನ್ನು ಅನೇಕ ಶೇರ್ ಮಾಡಿದ್ದಾರೆ. ಇನ್ನು ಆತ ಎಷ್ಟು ತನಗೆ ಹಿಂ-ಸೆ ನೀಡಿದ್ದಾನೆ ಎಷ್ಟು ಮೋ-ಸ ಮಾಡಿದ್ದಾನೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಅನಿಕ ಪೋಸ್ಟ್ ನಲ್ಲಿ ಏನಿದೆ? ನಾನು ಅನುಪ್ ಒಳ್ಳೆಯ ಮನುಷ್ಯ ಎಂದು ನಂಬಿ ಆತನನ್ನು ಪ್ರೀತಿಸಿದೆ. ಆದರೆ ಆತನ ನನಗೆ ಮಾನಸಿಕವಾಗಿ ಹಿಂ-ಸೆ ಕೊಡುತ್ತಿದ್ದ ಕೊನೆಗೆ ದೈಹಿಕವಾಗಿಯೂ ಕೂಡ ನನ್ನ ಮೇಲೆ ಹ-ಲ್ಲೆ ಮಾಡಿದ್ದಾನೆ. ನಾನು ಈಗಾಗಲೇ ಎರಡು ಬಾರಿ ಆತನ ಮೇಲೆ ದೂರು ದಾಖಲಿಸಿದ್ದೇನೆ. ಮೊದಲನೆಯ ಬಾರಿ ನಾನು ದೂರುನೀಡಿದಾಗ ಚೆನ್ನೈನಲ್ಲಿ ನನ್ನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ.
ಇದು ನನ್ನ ತಪ್ಪು ಎಂಬುದಾಗಿ ಅತ್ತಿದ್ದ. ಹಾಗಾಗಿ ಮೊದಲ ಬಾರಿಗೆ ಆತನನ್ನು ಕ್ಷಮಿಸಿದೆ. ಎರಡನೇ ಬಾರಿ ಮತ್ತೆ ಆತನ ವಿರುದ್ಧ ದೂರು ದಾಖಲಿಸಿದರೆ ಆತ ಪೊಲೀಸರಿಗೆ ಹಣವನ್ನು ಕೊಟ್ಟು ಆತನ ಪರವಾಗಿ ಮಾತನಾಡುವಂತೆ ಮಾಡಿದ ನೀವಿಬ್ಬರೂ ಹೇಗಾದರು ನಿಮ್ಮ ಈ ಸಮಸ್ಯೆಯನ್ನು ಮಾತಿನಲ್ಲಿ ಪರಿಹರಿಸಿಕೊಳ್ಳಿ ಎಂದು ಪೊಲೀಸರು ನನಗೆ ಬುದ್ಧಿ ಹೇಳಿ ಹೊರಟು ಹೋಗಿದ್ದರು.
ಆತ ನನ್ನ ಮೊಬೈಲ್ ಕಸಿದುಕೊಂಡು ನಾನು ಯಾರಿಗೂ ಫೋನ್ ಮಾಡದಂತೆ ಮಾಡಿದ್ದ. ಅಲ್ಲದೆ ನಾನು ಇಲ್ಲದ ಸಂದರ್ಭದಲ್ಲಿ ನನ್ನ ವಾಟ್ಸಪ್ ಅನ್ನು ಅವನ ಲ್ಯಾಪ್ಟಾಪ್ ಗೆ ಲಿಂಕ್ ಮಾಡಿಕೊಂಡು ನನ್ನ ಮೆಸೇಜ್ ಚೆಕ್ ಮಾಡುತ್ತಿದ್ದ. ನಾನು ಹೈದರಾಬಾದ್ ನಲ್ಲಿ ಇರುವಾಗ ನನ್ನ ಮೇಲೆ ಹೀನಾಯವಾಗಿ ಹಲ್ಲೆ ಮಾಡಿದ ಈ ಮುಖ ಇಟ್ಟುಕೊಂಡು ಹೇಗೆ ನಟನೆ ಮಾಡ್ತಿಯೋ ನೋಡ್ತೇನೆ ಎಂದು ಹೇಳಿದ್ದ. ನನ್ನ ಪ್ರಜ್ಞೆ ತಪ್ಪಿಸಿದ್ದ.
ನಾನು ನೋವಿನಲ್ಲಿ ಇರುವಾಗಲೂ ಗೆಳೆಯರ ಜೊತೆಗೆ ಪಾರ್ಟಿ ಮಾಡುತ್ತಿದ್ದ ಆದ್ದರಿಂದ ದೂರಾಗಿ ಅವನ ವಿರುದ್ಧ ನ್ಯಾಯವನ್ನು ಪಡೆಯುವ ಹೋರಾಟದಲ್ಲಿ ನನ್ನ ಗೆಳೆಯರು ಕೂಡ ನನಗೆ ಮೋ-ಸ ಮಾಡಿದರು ಇದಕ್ಕೆಲ್ಲ ಕಾರಣ ಆತನಲ್ಲಿ ಇರುವ ಹಣ. ಈಗ ನಾನು ಅವನಿಂದ ದೂರಾಗಿದ್ದೇನೆ ಜೊತೆಗೆ ಅವನ ವಿರುದ್ಧ ಮತ್ತೆ ದೂರು ದಾಖಲಿಸಿದ್ದೇನೆ.ಆತ ಅಮೆರಿಕಕ್ಕೆ ಓಡಿ ಹೋಗಿದ್ದಾನೆ ಎನ್ನುವ ಸುದ್ದಿ ಇದೆ ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ಹಾಗೂ ನನ್ನ ಕುಟುಂಬದವರಿಗೆ ದಿನವೂ ಬೆದರಿಕೆ ಹಾಕುತ್ತಿದ್ದಾನೆ.
ಎಂಬುದಾಗಿ ನಟಿ ಅನಿಕ ವಿಜಯ್ ವಿಕ್ರಮನ್ ತಾನು ಅನುಭವಿಸಿದ ಚಿ-ತ್ರ ಹಿಂ-ಸೆಯನ್ನು ಹಾಗೂ ತಾನು ನಂಬಿ ಮೋ-ಸ ಹೋಗಿದ್ದನ್ನು ವಿವರಿಸಿದ್ದಾರೆ. ಅನುಪ ಎನ್ನುವ ವ್ಯಕ್ತಿಯ ಕರಾಳ ಮುಖದರ್ಶನ ಮಾಡಿಸಿದ್ದಾರೆ. ಇನ್ನು ಅನಿಕ ಅವರ ಪೋಸ್ಟ್ ನೋಡಿ ಸಾಕಷ್ಟು ಜನ ಕಂಬನಿ ಮಿಡಿದಿದ್ದಾರೆ. ಆತನಿಗೆ ಕಾನೂನು ಪ್ರಕಾರ ಯಾವ ಶಿಕ್ಷೆ ಕೊಡಬೇಕು ಅದನ್ನ ಕೊಡಿಸಲೇಬೇಕು ನಾವು ನಿಮ್ಮ ಜೊತೆಗೆ ಇರ್ತೀವಿ ಅಂತ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.