ನಿರೂಪಣೆಯಲ್ಲಿ ಹೊಸ ದಾಖಲೆ ಬರೆದ ನಟಿ ಶ್ವೇತಾ ಚಂಗಪ್ಪ! ಅನುಶ್ರೀಯನ್ನು ಹಿಂದಿಕ್ಕಿದ ಶ್ವೇತಾ ಚೆಂಗಪ್ಪ ಪಡೆಯುತ್ತಿರುವ ಸಂಭಾವನೆ ಅದೆಷ್ಟು ಗೊತ್ತಾ?

ಕಿರುತೆರೆಯ ಖ್ಯಾತ ನಟಿ ಕಮ್ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಗುರುತಿಸಿಕೊಂಡಿದ್ದಾರೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ವೇತಾ ಚಂಗಪ್ಪ ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಶ್ವೇತಾ ಚೆಂಗಪ್ಪರವರು ಕಿರುತೆರೆಯಲ್ಲಿ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ನಿರೂಪಕಿ ಹಾಗೂ ನಟಿಯಾಗಿ ಕಿರುತೆರೆ ಲೋಕದಲ್ಲಿ ಅಭಿಮಾನಿಗಳ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ಇನ್ನು ಸುಮತಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.

ತದನಂತರದಲ್ಲಿ ಕಾದಂಬರಿ ಧಾರಾವಾಹಿಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದುಕೊಂಡರು. ಇನ್ನು, ಕೊಡಗಿನ ಸೋಮವಾರ ಪೇಟೆಯಲ್ಲಿ 1987 ಫೆಬ್ರವರಿ 9 ರಂದು ಹುಟ್ಟಿದ ಶ್ವೇತಾ ಚಂಗಪ್ಪ ಕಿರುತೆರೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೌದು, ಎಸ್. ನಾರಾಯಣ ನಿರ್ದೇಶನದ `ಸುಮತಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಇನ್ನು, 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ `ಕಾದಂಬರಿ’ ಸೀರಿಯಲ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇನ್ನು, ಈ ಟಿವಿ ಕನ್ನಡದಲ್ಲಿ ಪ್ರಸಾರವಾದ ಸುಕನ್ಯ ಮತ್ತು ಅರುಂಧತಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅದಲ್ಲದೇ, ನಟನೆ ಮಾತ್ರವಲ್ಲದೇ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದು, `ಯಾರಿಗುಂಟು ಯಾರಿಗಿಲ್ಲಾ’ ಎಂಬ ಕಾರ್ಯಕ್ರಮ ನಿರೂಪಿಸಿದರು. ಹೀಗೆ ನಿರೂಪಣೆಯಲ್ಲಿ ಶ್ವೇತಾ ಚಂಗಪ್ಪ ಅವರಿಗೆ ಅವಕಾಶಗಳು ಬಂದವು. ಜೀ ಕನ್ನಡದಲ್ಲಿ `ಕುಣಿಯೋಣ ಬಾರಾ’ ಎಂಬ ಚಿಣ್ಣರ ನೃತ್ಯ ಶೋ ಉತ್ತಮವಾಗಿ ನಿರೂಪಿಸಿದರು.

`ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್’ ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದರು. ಹೀಗೆ ಕಿರುತೆರೆ ಜರ್ನಿ ಸಾಗುತ್ತಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಂಗಿಗಾಗಿ’ ಚಿತ್ರದಲ್ಲಿ ದರ್ಶನ್ ಅವರ ತಂಗಿ ಪಾತ್ರದಲ್ಲಿ ನಟಿಸಿದರು, ಈ ಮೂಲಕ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟರು. ಅದಲ್ಲದೇ, ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ’ ಚಿತ್ರದಲ್ಲಿಯೂ ಕಾಣಿಸಿಕೊಂಡರು. ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಮುಂತಾದ ಚಿತ್ರಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡರು.

ಅದರ ಜೊತೆಗೆ, ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 2 ನೇ ಸೀಜನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಾಲ್ಕನೆ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಭಿಮಾನಿಗಳ ಹತ್ತಿರವಾದರು. ಇನ್ನು ಕಿರುತೆರೆ ಲೋಕದಲ್ಲಿ ಸೃಜನ್ ಲೋಕೇಶ್ ನಿರೂಪಣೆಯ `ಮಜಾಟಾಕೀಸ್’ ಕಾಮಿಡಿ ಶೋವು ಶ್ವೇತಾ ಚಂಗಪ್ಪ ಅವರಿಗೆ ನೇಮ್ ಫೇಮ್ ತಂದುಕೊಟ್ಟಿತು.

ಹೌದು ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರಧಾರಿಯಾಗಿ ಪ್ರೇಕ್ಷಕರಿಗೆ ಮನೋರಂಜಿಸುವಲ್ಲಿ ನೀಡಿದರು. ಇವರ ನಟನಾ ಬದುಕಿನಲ್ಲಿ ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ.`ಅರುಂಧತಿ’ ಸೀರಿಯಲ್‌ನಲ್ಲಿನ ನಟನೆಗಾಗಿ ಕರ್ನಾಟಕ ಸರಕಾರ ನೀಡುವ ಮಧ್ಯಂಸನ್ಮಾನ ಪ್ರಶಸ್ತಿಯೂ ಕೂಡ ಇವರಿಗೆ ಸಿಕ್ಕಿದೆ. ಇತ್ತೀಚೆಗಷ್ಟೇ ಜೋಡಿ ನಂಬರ್ ಆನ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದು, ಮತ್ತೆ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.

ಅಂದಹಾಗೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ‘ಜೋಡಿ ನಂ.1’ ಶೋಗೆ ಅವರು ನಿರೂಪಕಿಯಾಗಿ ಜವಾಬ್ದಾರಿ ಹೊತ್ತು ಕೊಂಡಿದ್ದರು. ನಟಿ ಶ್ವೇತಾ ಚೆಂಗಪ್ಪ, ಕಿರುತೆರೆಗೆ ಭರ್ಜರಿಯಾಗಿ ಮರಳಿದ್ದೇನೆ. ನೀವೆಲ್ಲರೂ ಈ ಕಾರ್ಯಕ್ರಮವನ್ನು ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮೆಲ್ಲರ ಕಮೆಂಟ್​ ಮತ್ತು ಮೆಸೇಜ್​ಗಾಗಿ ನಾನು ಕಾದಿದ್ದೇನೆ. ಓಪನಿಂಗ್​ ಸಂಚಿಕೆಯ ಶೂಟಿಂಗ್​ ಮಾಡಿದ ಅನುಭವ ಚೆನ್ನಾಗಿತ್ತು’ ಎಂದು ಪೋಸ್ಟ್​ ಮಾಡಿದ್ದರು.

ಮತ್ತೆ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ವೇತಾ ಚಂಗಪ್ಪರವರು ಅನುಶ್ರೀಯವರ ಸಂಭಾವನೆಯನ್ನು ಮೀರಿಸಿದ್ದಾರೆ ಎನ್ನಲಾಗಿತ್ತು. ಬಾರಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುವ ಮೂಲಕ ನಟಿ ಕಮ್ ನಿರೂಪಕಿ ಶ್ವೇತಾ ಚಂಗಪ್ಪ ಅನುಶ್ರೀಗೆ ಪೈಪೋಟಿ ನೀಡಿದ್ದರು. ಒಂದು ಎಪಿಸೋಡ್ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರು. ಇನ್ನು, ಶಿವಣ್ಣನವರ ನಟನೆಯ ವೇದ ಸಿನಿಮಾದಲ್ಲಿ ಶ್ವೇತಾ ಚಂಗಪ್ಪ ನಟಿಸಿದ್ದಾರೆ. ಹೀಗೆ ಸಾಲು ಸಾಲು ಅವಕಾಶಗಳನ್ನು ಪಡೆಯುತ್ತಿರುವ ಶ್ವೇತಾ ಚಂಗಪ್ಪರವರಿಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *