ಸಿನಿಮಾ ಲೋಕವು ಅನೇಕರನ್ನು ಸೆಲೆಬ್ರಿಟಿಗಳನ್ನಾಗಿ ಮಾಡಿ ಬಿಟ್ಟಿದೆ. ಸಿನಿಮಾಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಸಂಖ್ಯೆಯ ಫ್ಯಾನ್ಸ್ ಬಳಗವನ್ನು ಸೃಷ್ಟಿಸಿಕೊಂಡಿರುವ ಸೆಲೆಬ್ರಿಟಿಗಳಿದ್ದಾರೆ. ಅಂತಹ ನಟಿಯರಲ್ಲಿ ಅನಸೂಯಾರವರು ಒಬ್ಬರು. ಆಗಾಗ ಹಾಟ್ ವಿಡಿಯೋ ಹಾಗೂ ಫೋಟೋ ಶೂಟ್ ಗಳ ಮೂಲಕ ಸುದ್ದಿಯಾಗುತ್ತಿರುವ ಇವರ ಗ್ಲಾಮರಸ್ ಬೆಡಗಿಗೆ ಸಾಕಷ್ಟು ಸಂಖ್ಯೆಯಲ್ಲಿ ಫಾಲ್ಲೋರ್ಸ್ ಇದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಅನಸೂಯಾರವರು ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಇದೀಗ ನಟ ವಿಜಯ್ ದೇವರ ಕೊಂಡರವರ ಅಭಿಮಾನಿಗಳು ಗರಂ ಆಗಿದ್ದಾರೆ. ನಿರೂಪಕಿ ಕಮ್ ನಟಿಯಾಗಿರುವ ಅನಸೂಯಾರವರು ವಿಜಯ್ ದೇವರಕೊಂಡ ಅವರ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ ಹಾಗೂ ಅನಸೂಯಾರವರ ನಡುವೆ ಭಿನ್ನಾಭಿಪ್ರಾಯವೊಂದು ಏರ್ಪಟ್ಟಿತ್ತು.
ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ವಿಜಯ್ ದೇವರಕೊಂಡ ಹೆಣ್ಣು ಮಕ್ಕಳಿಗೆ ಅವಮಾನ ಆಗುವ ರೀತಿ ಮಾತನಾಡಿದ್ದರು. ಇದೇ ವೇಳೆಯಲ್ಲಿ ನಿರೂಪಕಿ ಅನಸೂಯಾರವರು ಇದನ್ನು ವಿರೋಧಿಸಿದ್ದರು. ಅಂದಿನಿಂದ ಇವರಿಬ್ಬರ ನಡುವಿನ ಸಂಬಂಧ ಅಷ್ಟಕಷ್ಟೇ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡರವರ ಲೈಗರ್ ಸಿನಿಮಾ ತೆರೆ ಕಂಡಿತ್ತು. ಆದರೆ ಲೈಗರ್ ಸಿನಿಮಾ ಸೋತಿರುವುದಕ್ಕೆ ಸಿನಿಮಾ ತಂಡವು ಬೇಸರ ವ್ಯಕ್ತಪಡಿಸಿತ್ತು.
ಆದರೆ ನಿರೂಪಕಿ ಅನಸೂಯಾರವರು ಸೋಲನ್ನು ಸಂಭ್ರಮಿಸಿದ್ದರು. ಹೀಗಾಗಿ ಪೋಸ್ಟ್ ವೊಂದನ್ನು ಹಾಕಿದ್ದರು. ಈ ಪೋಸ್ಟ್ ನಲ್ಲಿ ಸಿನಿಮಾ ಸೋತಿದ್ದರ ಬಗ್ಗೆ ಬರೆದು ಕರ್ಮ ಮತ್ತೆ ಬರುತ್ತೆ ಎಂದಿದ್ದರು. ಅನಸೂಯಾರವರು ಮಾಡಿದ ಪೋಸ್ಟ್ ಗೆ ವವಿಜಯ್ ದೇವರಕೊಂಡ ಅಭಿಮಾನಿಗಳು ಗರಂ ಆಗಿದ್ದಾರೆ. ಅದರ ಜೊತೆಗೆ ನಿರೂಪಕಿ ಕಮ್ ನಟಿಗೆ ನಟನ ಫ್ಯಾನ್ಸ್ ಗಳ ವಾರ್ ಶುರುವಾಗಿದ್ದು, ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಟಿಯ ಪೋಸ್ಟ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದು, ಒಬ್ಬನು, ಒಂದು ದಿನಕ್ಕೆ ರೇಟ್ ಎಷ್ಟು ಎಂದು ಕೇಳಿದ್ದಾನೆ. ಈ ಕಾಮೆಂಟ್ ನೋಡಿ ಗರಂ ಆದ ನಟಿ ಅನಸೂಯಾ ಪ್ರತಿಕ್ರಿಯೆ ನೀಡಿದ್ದು, ” ನಿಮ್ಮ ಸಹೋದರಿ ಅಥವಾ ನೀವು ಮದುವೆಯಾಗಿದ್ದರೆ ನಿಮ್ಮ ಹೆಂಡತಿಬಳಿ ಒಂದು ದಿನಕ್ಕೆ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ಕೇಳಿ ಎಂದಿದ್ದಾರೆ. ನಟಿಯ ಈ ಪ್ರತಿಕ್ರಿಯೆ ನೋಡಿದ ಕೂಡಲೇ ಆತ ತಾನು ಮಾಡಿರುವ ಕಾಮೆಂಟ್ ಅನ್ನು ಡಿಲೀಟ್ ಮಾಡಿದ್ದಾನೆ.
ಅನುಸೂಯರವರು ಕೊಟ್ಟಿರುವ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಟಿ ಅನಸೂಯರವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಲೋಕದಲ್ಲಿ ತನ್ನ ನಟನಾ ಬದುಕು ಶುರು ಮಾಡಿದರು. ಈ ನಟನಾ ಬದುಕಿಗೆ ಎಂಟ್ರಿ ಕೊಡುವ ಮೊದಲು ಎಂಬಿಎಯಲ್ಲಿ ಎಚ್‌ಆರ್ ಪದವಿ ಪಡೆದುಕೊಂಡಿದ್ದ ಇವರು ಬ್ಯಾಂಕಿನಲ್ಲಿ ಟೆಲಿಕಾಲರ್ ಆಗಿ ಕೆಲಸದಲ್ಲಿದ್ದರು.
ಆ ಸಮಯದಲ್ಲಿ ಕಾಮಿಡಿ ಶೋವೊಂದನ್ನು ನಿರೂಪಣೆ ಮಾಡುವ ಅವಕಾಶವೊಂದು ಒದಗಿ ಬಂತು. ಹೀಗಾಗಿ 2013 ರಲ್ಲಿ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಜರ್ನಿಯನ್ನು ಆರಂಭ ಮಾಡಿದರು. ತದನಂತರದಲ್ಲಿ ನಟಿಯಾಗಿಯೂ ಕಾಣಿಸಿಕೊಂಡರು. ನಾಗಾ ಚಿತ್ರದಲ್ಲಿ ಎನ್ ಟಿಆರ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡರು. 2016 ರಲ್ಲಿ, ನಾಗಾರ್ಜುನ ಅಭಿನಯದ ಸೊಗ್ಗಾಡೆ ಚಿನ್ನಿ ನಯನ ನಾಗ್ ಕಿ ಮರಡಿಲು ಬಜ್ಜಿ ಪಾತ್ರದಲ್ಲಿ ನಿರ್ವಹಿಸಿದರು. ಈ ಹಿಂದೆ, ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲೂ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿರುವ ತೆಲುಗು ನಟಿ ಅನಸೂಯರವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆ ಬ್ಯುಸಿಯಾಗಿದ್ದಾರೆ.