ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ, ನನ್ನ ಗಂಡನೇ ಕೆಳ್ಳಲ್ಲ, ನೀವ್ಯಾರು ಕೇಳೋಕೆ ಎಂದ ನಟಿ ಅನಸೂಯಾ ಭಾರದ್ವಾಜ್! ಕಾಮೆಂಟ್ ಮಾಡಿದವರಿಗೆ ಚಳಿ ಬಿಡಿಸಿದ ನಟಿ!!

ಫೋಟೋ ಹಾಗೂ ವಿಡಿಯೋಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟ ತೆಲುಗು ನಟಿ ಅನಸೂಯ ಭಾರಧ್ವಜ್ ಬಣ್ಣದ ಜಗತ್ತು ಎಷ್ಟು ಸುಂದರವೋ, ಇಲ್ಲಿ ಜೀವಿಸುವುದು ಅಷ್ಟೇ ಕಷ್ಟ ಕೂಡ. ಇಲ್ಲಿ ಸೆಲೆಬ್ರಿಟಿಗಳು ಏನು ಮಾಡಿದರೂ ಕೂಡ ಸುದ್ದಿಯಾಗುತ್ತಾರೆ. ಈ ಸಾಲಿಗೆ ತೆಲುಗು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಅನಸೂಯಾ ಭಾರಧ್ವಜ್ (Anasuya Bharadwaj) ಸೇರಿಕೊಳ್ಳುತ್ತಾರೆ.

ಫೋಟೋ, ವಿಡಿಯೋ ಹಾಗೂ ಫೋಟೋ ಶೂಟ್ ಮೂಲಕ ಪಡ್ಡೆ ಹೈಕಳ ಹೃದಯದಲ್ಲಿ ಝಲ್ ಎನ್ನುವಂತೆ ಮಾಡುವ ಈ ನಟಿಗೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲ್ಲೋರ್ಸ್ ಇದ್ದಾರೆ.ಇತ್ತೀಚೆಗಷ್ಟೇ ‘ಅರ್ಜುನ್ ರೆಡ್ಡಿ’ (Arjun Reddy) ಚಿತ್ರದಲ್ಲಿ ತಾಯಿ (Mother) ಬಗ್ಗೆ ಬೈಗುಳ ಇದ್ದು, ಈ ವಿಚಾರವಾಗಿ ನಟಿ ಅನಸೂಯಾ ಧ್ವನಿ ಎತ್ತುವ ಮೂಲಕ ವಿಜಯ್ ದೇವರಕೊಂಡ ವಿರುದ್ಧ ಕಿಡಿಕಾರುವ ಮೂಲಕ ಅವರ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೀಗಾಗಿ ವಿಜಯ್ ದೇವರಕೊಂಡ ಅಭಿಮಾನಿಗಳು ನಟಿ ಅನಸೂಯಾ ಅವರನ್ನು ಬಿಡುತ್ತಿಲ್ಲ. ಆಗಾಗ ಫೋಟೋ ಹಾಗೂ ವಿಡಿಯೋಗಳಿಗೆ ಕಾಮೆಂಟ್ ಮಾಡುವ ಮೂಲಕ ನಟಿಯನ್ನು ಕೆದಕುತ್ತಿದ್ದಾರೆ. ಇದೀಗ ನಟಿಯೂ ಮೌನ ಮುರಿದು ಖಡಕ್ ಆಗಿ ಎಚ್ಚರಿಕೆಯನ್ನು ನೀಡಿದ್ದಾರೆ.ನಟಿಯನ್ನು ಕೆಣಕುತ್ತಿರುವವರಿಗೆ ಉತ್ತರ ನೀಡಿದ್ದು, “ಎಲ್ಲರಿಗೂ ನಮಸ್ಕಾರ. ಕಳೆದ ಕೆಲವು ದಿನಗಳಿಂದ ನನ್ನ ಬಗ್ಗೆ ಸಾಕಷ್ಟು ಟ್ವೀಟ್‌ಗಳನ್ನು ನೋಡುತ್ತಿದ್ದೇನೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರಿಗೆ ಅಗೌರವ ತೋರಲು ನನ್ನ ಹೆಸರನ್ನು ಬಳಸಲಾಗುತ್ತಿದೆ.

ಇದನ್ನು ಮಾಡುತ್ತಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ಮೊದಲ ಟ್ವೀಟ್‌ನಲ್ಲಿ ಅನಸೂಯಾ ಹೇಳಿದ್ದಾರೆ. ಇದು ನನ್ನ ಹೆಸರಿಗೆ ಮಾನಹಾನಿ ಮಾಡುತ್ತಿದೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಿಂದ ಅನಗತ್ಯ ನೋವು ಉಂಟಾಗುತ್ತಿದೆ. ಇದು ನನ್ನ ಜೀವನ. ನನ್ನ ಇಷ್ಟದಂತೆ ಮುನ್ನಡೆಸುತ್ತಿದ್ದೇನೆ. ಅಲ್ಲದೆ ನಾನು ಯಾರ ಬಳಿಗೂ ಹೋಗಲು ಬಯಸುವುದಿಲ್ಲ.

ನನ್ನ ಬಲದಿಂದ ನಾನು ಬೆಳೆದಿದ್ದೇನೆ ಎಂದಿದ್ದಾರೆ ಅನಸೂಯಾ.”ಅದಲ್ಲದೇ, ಬಡಾಯಿ ಕೊಚ್ಚಿಕೊಳ್ಳಲು ನನ್ನ ಬಳಿ ಯಾವುದೇ ವಿಶೇಷ PR ತಂಡಗಳಿಲ್ಲ. ನನ್ನ ಬಗ್ಗೆ ನೀವು ಮೆಚ್ಚುಗೆ ಸೂಚಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಠ ನನ್ನಿಂದ ದೂರವಿರಿ. ಸಂಬಂಧವಿಲ್ಲದ ವಿಷಯಗಳಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ. ದಯವಿಟ್ಟು ಮನುಷ್ಯರಂತೆ ವರ್ತಿಸಿ. ನನಗೊಂದು ಕುಟುಂಬವಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.ಇತ್ತೀಚೆಗಷ್ಟೇ ನಟಿ ಅನಸೂಯಾರವರು ಪತಿ ಹಾಗೂ ಮಕ್ಕಳ ಜೊತೆಗೆ ಫಾರಿನ್ ಪ್ರವಾಸವನ್ನು ಎಂಜಾಯ್ ಮಾಡಿದ್ದರು.

ಅನಸೂಯಾ ವೆಕೇಷನ್ (Vacation) ನಲ್ಲಿ ಆನಿವರ್ಸರಿ ಸೆಲೆಬ್ರೇಶನ್ ಗೆಂದು ವಿದೇಶಕ್ಕೆ ಹಾರಿದ್ದರು. ಸಮುದ್ರ ತೀರದಲ್ಲಿ ಪತಿಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಅದಲ್ಲದೇ ಪತಿ ಜೊತೆಗೆ ರೋಮ್ಯಾನ್ಸ್ ಕೂಡ ಮಾಡಿದ್ದರು. ಇನ್ನೊಂದೆಡೆ ಬಿಳಿ ಬಣ್ಣದ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ನಟಿ ಅನಸೂಯಾರವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *