Ananth Ambani: ದೇಶದಲ್ಲಿ ಶ್ರೀಮಂತರ ಪಟ್ಟಿ (Richest person) ಯಲ್ಲಿ ಎರಡನೇ ಸ್ಥಾನ (Second Plance) ದಲ್ಲಿ ಇರುವ ಮುಖೇಶ್ ಅಂಬಾನಿ (Mukesh ambani) ಹಾಗೂ ಅವರ ಪುತ್ರನ ಮದುವೆಯ ವಿಚಾರ ಇದೀಗ ಹೆಚ್ಚು ಸುದ್ದಿ ಆಗುತ್ತಿದೆ. ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Ananth Ambani) ರಾಧಿಕಾ ಮರ್ಚೆಂಟ್ (Radhika marchent) ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಹಾಗೂ ನೀತು ಅಂಬಾನಿ (Neeta Ambani) ಇಬ್ಬರು ನೃತ್ಯ ಮಾಡಿದ ಫೋಟೋಗಳು ಹಾಗೂ ನಿಶ್ಚಿತಾರ್ಥದ (Engagement) ಸಮಯದ ಮಧುರ ಕ್ಷಣಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿವೆ. ಅನಂತ ಅಂಬಾನಿ ಇದೀಗ ಮೊದಲಿಗಿಂತ ಇನ್ನಷ್ಟು ದಪ್ಪ (Increased weight) ಕಾಣುತ್ತಿದ್ದಾರೆ ಹಾಗಾಗಿ ಅವರು ಮತ್ತೆ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆಯೂ ಕೂಡ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.
ಹೌದು, ಅನಂತ ಅಂಬಾನಿ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ರಾಧಿಕಾ ಮರ್ಚೆಂಟ್ ಬಹಳ ಅದ್ಭುತವಾಗಿ ಕಂಗೊಳಿಸುತ್ತಾರೆ ದುಬಾರಿ ಸೂಟ್ ಧರಿಸಿದ್ದಾರೆ ಆದರೆ ಈ ಫೋಟೋದಲ್ಲಿ ಮಾತ್ರ ಅನಂತ್ ಅಂಬಾನಿ ತುಂಬಾನೇ ದಪ್ಪ ಕಾಣಿಸುತ್ತಿದ್ದಾರೆ. ಇದೀಗ ಅನಂತ್ ಅಂಬಾನಿ ಅವರ ತೂಕದ ಬಗ್ಗೆ ಭಾರವಾದ ಮಾತುಗಳು ಕೇಳಿ ಬರುತ್ತಿದೆ.
ಯಾಕೆ ಅಂತೀರಾ ಅನಂತ್ ಅಂಬಾನಿ ಮುಂಚೆ ತುಂಬಾನೇ ದಪ್ಪ ಇದ್ದರು. ಸುಮಾರು 208 ಕೆಜಿ ತೂಕ ಇದ್ದ ಅನಂತ ಅಂಬಾನಿ ನಂತರ ತಮ್ಮ ದೇಹದ ತೂಕವನ್ನು ಇಳಿಸಿಕೊಂಡ್ರು.ಹೌದು ಕೆಲವು ವರ್ಷಗಳ ಹಿಂದೆ 208 ಕೆಜಿ ತೂಕವಿದ್ದ ಅನಂತ ಅಂಬಾನಿ ತಮ್ಮ ತೂಕವನ್ನು 108 ಕೆಜಿಗೆ ಇಳಿಸಿಕೊಂಡಿದ್ದರು.
ಅಂದರೆ ಬರೋಬ್ಬರಿ ನೂರು ಕೆಜಿ ತೂಕವನ್ನು ಕಳೆದುಕೊಂಡು ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ಇದೀಗ ಅವರು ಮತ್ತೆ ದಪ್ಪ ಆಗಿದ್ದಾರೆ ಹಾಗಾಗಿ ಯಾವುದೇ ಡಯಟ್ಸ್ ಅಥವಾ ವ್ಯಾಯಾಮ ಮಾಡ್ತಾ ಇಲ್ವಾ ಅಂತ ಜನ ಪ್ರಶ್ನೆ ಮಾಡುತ್ತಿದ್ದರು. ಈ ಪ್ರಶ್ನೆಗಳಿಗೆ ತಾಯಿ ನೀತಾ ಅಂಬಾನಿ ಉತ್ತರ ನೀಡಿದ್ದಾರೆ.
ಅನಂತ್ ಅಂಬಾನಿ ಅವರಿಗೆ ಅಸ್ತಮಾ ಸಮಸ್ಯೆ ಇದೆ ಹಾಗಾಗಿ ಅವರು ಸ್ಟಿ’ರಾ’ಯ್ಡ್ ಅನ್ನು ಹೆಚ್ಚಾಗಿ ತೆಗೆದುಕೊಳ್ಳುವಂತಹ ಸಂದರ್ಭ ಇದೆ. ಇದರ ಪರಿಣಾಮವಾಗಿ ಅವರ ದೇಹದ ತೂಕ ಮತ್ತೆ ಹೆಚ್ಚಾಗಿದೆ ಎಂದು ನೀತ ಅಂಬಾನಿ ತಿಳಿಸಿದ್ದಾರೆ. ಈ ಹಿಂದೆ ತಾಯಿಯ ಸಪೋರ್ಟ್ ನಿಂದಾಗಿ ಸುಮಾರು 18 ತಿಂಗಳಗಳ ಕಾಲ ಕಷ್ಟಪಟ್ಟು ಆನಂದ್ ಅಂಬಾನಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು ಇದಕ್ಕಾಗಿ ಅವರು ಪ್ರತಿದಿನ ಐದರಿಂದ ಆರು ಗಂಟೆ ವ್ಯಾಯಾಮ, ಯೋಗ, ವಾಕ್ ಹಾಗೂ ಇತರ ಕ್ರಿಯಾತ್ಮಕ ತರಬೇತಿಗಳಲ್ಲಿ ಪಾಲ್ಗೊಂಡಿದ್ದರು. ಈ ಪರಿಶ್ರಮದ ಫಲವಾಗಿಯೇ ಅನಂತ ಅಂಬಾನಿ ಬಹಳ ತೂಕವನ್ನು ಕಳೆದುಕೊಂಡಿದ್ದರು.
ಇದೀಗ ಅನಂತ ಅಂಬಾನಿ ಅವರ ತೂಕ ಮತ್ತೆ ಹೆಚ್ಚಾಗಿದೆ. ಹಾಗಾಗಿ ಜನ ಈ ಬಗ್ಗೆ ಸಾಕಷ್ಟು ಮಾತುಗಳನ್ನು ಆಡುತ್ತಿದ್ದಾರೆ ಎಷ್ಟೇ ಹಣ ಇದ್ರೂ ಆರೋಗ್ಯವನ್ನು ಮಾತ್ರ ಕೊಂಡುಕೊಳ್ಳಲು ಸಾಧ್ಯವಿಲ್ಲ ಅಂತ ಅನಂತ್ ಅಂಬಾನಿ ಅವರನ್ನು ನೋಡಿ ಉದಾಹರಣೆ ನೀಡುತ್ತಿದ್ದಾರೆ. ಇನ್ನು ಅತಿಯಾದ ಔಷಧಿಯ ಪ್ರಭಾವದಿಂದ ಅನಂತ್ ಅಂಬಾನಿ ಅವರು ಸ್ಥೂಲಕಾಯ ದೇಹವನ್ನು ಹೊಂದಿರುವುದಕ್ಕೆ ಸಾಕಷ್ಟು ಜನ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ.