Anant ambani marriage cost : ಶ್ರೀಮಂತರ ಪಟ್ಟಿಯಲ್ಲಿ ಸೇರಿರುವ ಮುಖೇಶ್ ಅಂಬಾನಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೌದು, ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿಯವರ ಕಿರಿಯ ಮಗ ಅನಂತ್ ಅಂಬಾನಿಯ ಮದುವೆ ಸಮಾರಂಭವು ಸದ್ಯದಲ್ಲೇ ನಡೆಯಲಿದೆ. ರಾಧಿಕಾ ಮಾರ್ಚೆಂಟ್ ಅವರ ಜೊತೆಗೆ ಅನಂತ ಅಂಬಾನಿಯು ಕಳೆದ ಡಿಸೆಂಬರ್ 29ರಂದು ರಾಜಸ್ಥಾನದ ಶ್ರೀನಾಥ್ ಜಿ ದೇವಸ್ಥಾನದಲ್ಲಿ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದರು.
ಶ್ರೀಮಂತರ ಮನೆಯ ಮದುವೆ ಎಂದರೆ ಕೇಳುವುದೇ ಬೇಡ. ಒಂದು ಕೈ ಮೇಲೆನೇ ಇರುತ್ತದೆ. ಮುಖೇಶ್ ಅಂಬಾನಿಯವರ ಹಿರಿಮಗ ಆಕಾಶ್ ಅವರು ಮಾರ್ಚ್ 9, 2019ರಂದು ಹಣದ ಲೆಕ್ಕವೇ ಇಲ್ಲದಂತೆ ಖರ್ಚು ಮಾಡಿ, ಸಾವಿರಾರು ಸಂಖ್ಯೆಯ ಜನರ ಮಧ್ಯೆ ವಿವಾಹವಾಗಿದ್ದರು. ರಾಧಾಕೃಷ್ಣ ಮಾದರಿಯಲ್ಲಿ ಆಕಾಶ್ ಅಂಬಾನಿಯವರ ಮದುವೆಯೂ ನಡೆದಿತ್ತು.
ಅತಿಥಿಗಳು ಆಗಮಿಸುವ ಹಾದಿಯಿಂದ ಹಿಡಿದು ಕೃಷ್ಣನ ವಿಗ್ರಹದವರೆಗೂ ಹೂಗಳಿಂದಲೇ ಅಲಂಕೃತವಾಗಿದ್ದು ಕೋಟಿ ಕೋಟಿ ಹಣವನ್ನು ಮದುವೆಗಾಗಿ ಖರ್ಚು ಮಾಡಲಾಗಿತ್ತು. ಸಿನಿಮಾ ರಂಗದವರು, ಕ್ರಿಕೆಟ್ ಆಟಗಾರರು, ರಾಜಕೀಯ ರಂಗದವರು ಸೇರಿದಂತೆ ಗೂಗಲ್ ಸಿಇಓ ಸುಂದರ ಪಿಚೈ ಕೂಡ ಮದುವೆಗೆ ಆಗಮಿಸಿದ್ದರು. ಇನ್ನು, ಮುಖೇಶ್ ಅಂಬಾನಿಯವರ ಮಗಳಾದ ಇಶಾ ಅಂಬಾನಿಯವರ ಮದುವೆಯು ಕೂಡ ಅದ್ದೂರಿಯಾಗಿಯೇ ನಡೆದಿತ್ತು.
ಹಿಂದೆ ನಡೆದ ಮದುವೆಯಂತೆ ಅನಂತ್ ಅಂಬಾನಿಯವರ ಮದುವೆಯನ್ನು ಅದ್ದೂರಿಯಾಗಿ ಮಾಡಲಿದ್ದಾರೆ. ಅನಂತ್ ಅಂಬಾನಿಯವರ ನಿಶ್ಚಿತಾರ್ಥದ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತಿದೆ. ಇದರ ಜೊತೆಗೆ ಮತ್ತೆ ತೂಕ ಹೆಚ್ಚಳಗೊಂಡ ಅನಂತ್ ಅಂಬಾನಿಯವರ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಹೀಗಾಗಿ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಆದರೆ, ತನ್ನ ಮಗನ ಅರೋಗ್ಯದ ಬಗ್ಗೆ ನೀತಾ ಅಂಬಾನಿ ಮಾಹಿತಿ ನೀಡಿದ್ದಾರೆ. 2016 ರಲ್ಲಿ 200 ಕೆಜಿಯಿಂದ 100 ಕೆಜಿಯಷ್ಟು ತೂಕ ಕಳೆದುಕೊಂಡಿದ್ದ ಅನಂತ್ ಅಂಬಾನಿ, ಈಗ ಮತ್ತೆ ಅದೇ ರೀತಿ ತೂಕ ಹೆಚ್ಚಾಗಿದೆ. ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು, ಈ ಕಾರಣದಿಂದ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾನೆ ಎಂದು ತಾಯಿ ನೀತಾ ಅಂಬಾನಿ ತಿಳಿಸಿದ್ದಾರೆ. ಅನಂತ್ ಆರೋಗ್ಯ ಸಮಸ್ಯೆ ಅಂದರೆ ಉಬ್ಬಸದಿಂದ ಬಳಲುತ್ತಿದ್ದರು,
ಆ ಸಮಯದಲ್ಲಿ ಸಾಕಷ್ಟು ಔಷದಿಗಳನ್ನು ನೀಡುತ್ತಿದ್ದ ಕಾರಣ, ಈ ಸ್ಟೀರಾಯ್ಡ್ ಗಳ ಅಡ್ಡ ಪರಿಣಾಮದಿಂದಾಗಿ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಆಸ್ತಮಾ ಚಿಕಿತ್ಸೆಯು ಬಹಳಷ್ಟು ತೂಕವನ್ನು ಹೆಚ್ಚಿಸಿತು. ಅನಂತ್ ಪ್ರತಿದಿನ ಐದು-ಆರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ ಮತ್ತು ಅವರ ವ್ಯಾಯಾಮದ ನಿಯಮವು 21 ಕಿಮೀ ನಡಿಗೆ ನಂತರ ಯೋಗ, ತೂಕ ತರಬೇತಿ, ಕ್ರಿಯಾತ್ಮಕ ತರಬೇತಿ ಮತ್ತು ಹೆಚ್ಚಿನ ತೀವ್ರತೆಯ ಕಾರ್ಡಿಯೋ ವ್ಯಾಯಾಮಗಳನ್ನು ಒಳಗೊಂಡಿದೆ.
ಸ್ಥೂಲಕಾಯತೆಯಿಂದ ವಿರುದ್ಧ ಹೋರಾಡುತ್ತಿದ್ದು, ಇಂತಹ ಸಮಸ್ಯೆಯನ್ನು ಹೊಂದಿರುವವರು ಸುತ್ತಮುತ್ತ ಅನೇಕರಿದ್ದಾರೆ. ಇದರಿಂದಾಗಿ ನಿಮ್ಮ ದೇಹದ ಕುರಿತು ಅಸಮಧಾನ ಇಟ್ಟುಕೊಳ್ಳದಿರಿ. ಇದು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಆದ್ದರಿಂದ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕುಟುಂಬ ತೂಕ ಕಳೆದುಕೊಳ್ಳಲು ಪ್ರೇರೇಪಿಸಬೇಕು ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯವರ ಮದುವೆಗೆ ಖರ್ಚು ಖರ್ಚು ಮಾಡಲಿರುವ ಒಟ್ಟು ಹಣವೆಷ್ಟು ಗೊತ್ತಾ?
ಇನ್ನು, ಅನಂತ್ ಅಂಬಾನಿಯ ಮದುವೆಯೂ ಸುಮಾರು 900 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ. ಅನಂತ್ ಅಂಬಾನಿ ಅವರ ಮದುವೆ ಗೆ 700 ಕೋಟಿ ಖರ್ಚು ಮಾಡಲಾಗಿತ್ತು. ಮದುವೆಯ ಸುಂದರ ಸಿಹಿ ಕ್ಷಣಗಳನ್ನು ಆನಂದಿಸಲು ಈಗಾಗಲೇ ಭರಪೂರ ಸಿದ್ಧತೆಗಳನ್ನು ಅಂಬಾನಿ ಕುಟುಂಬವು ನಡೆಸುತ್ತಿದೆಯಂತೆ. ಮುಕೇಶ್ ಅಂಬಾನಿ ಪುತ್ರದ ಮದುವೆಯ ಬಗ್ಗೆ ಸಾಕಷ್ಟು ಕುತೂಹಲವಿದೆ.