Ananda jyoti and jeeva : ಮದುವೆಯ ಬಳಿಕ ಅನೈತಿಕ ಸಂಬಂಧವನ್ನು ಹೊಂದಿರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೈತಿಕ ಸಂಬಂಧದಿಂದಾಗಿ ತಾಯಿಯೇ ಮಗನನ್ನೇ ಬರ್ಬರವಾಗಿ ಜೀವ ತೆಗೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯೂ ವಿ.ಕುಚಂಪಟ್ಟಿ ಮಧುರೈ ಜಿಲ್ಲೆಯ ಡಿ.ಗಲ್ಲುಪಟ್ಟಿಗೆ ಸಮೀಪದಲ್ಲಿ ನಡೆದಿದೆ. ಈ ಊರಿನವರಾದ ರಾಮಕುಮಾರ್ ಆರು ವರ್ಷಗಳ ಹಿಂದೆ ಆನಂದಜ್ಯೋತಿ ಎಂಬ ಹುಡುಗಿಯನ್ನು ಮದುವೆಯಾಗಿದ್ದರು.
ದಂಪತಿಗೆ ಜೀವ ಎಂಬ ಪುತ್ರ ಹಾಗೂ ಲಾವಣ್ಯ ಎಂಬ ಪುತ್ರಿ ಇದ್ದಾರೆ. ರಾಮ್‌ಕುಮಾರ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಆನಂದಜ್ಯೋತಿ ವಿರುದುನಗರದ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದರು. ಅದರ ಘಟನೆ ನಡೆದ ದಿನ ಜೀವಾ ಶಾಲೆಗೆ ಹೋಗಿ ಮನೆಗೆ ಬಂದು ಮಲಗಿದ್ದನು. ಸಂಜೆಯ ನಂತರ ಆನಂದಜ್ಯೋತಿ ಮಲಗಿದ್ದ ಜೀವವನ್ನು ಎಬ್ಬಿಸಿದ್ದಾಳೆ. ಆಗ ಜೀವಾ ಏನು ಮಾತನಾಡುತ್ತಿರಲಿಲ್ಲ.
ಬೇರೊಬ್ಬರ ಗಂಡನ ಜೋತೆ ಸರಸ ಆಡುವುದನ್ನು ನಿಲ್ಲಿಸು ಎಂದು ಗಂಡ ಹೇಳಿದ್ದಕ್ಕೆ ಹೆಂಡತಿ ಕೊಪಿಸಿಕೊಂಡು ಹಾಸಿಗೆ ಮೇಲೆ ಮಲಗಿದ್ದ ಪುಟ್ಟ ಪಾಪು ಗೆ ಮಾಡಿದ್ದೇನು ನೋಡಿ!! ಇಷ್ಟೊಂದು ಕ್ರೂರ ಹೆಂಗಸರು ಇರುತ್ತಾರಾ!!!
ಕೊನೆಗೆ ಸಂಬಂಧಿಕರ ಸಹಾಯದಿಂದ ಜೀವನನ್ನು ವಿರುದುನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಉಸಿರು ನಿಂತು ಹಲವು ಗಂಟೆಗಳಾಗಿದ್ದು, ಕುತ್ತಿಗೆಯಲ್ಲಿ ಹಗ್ಗದ ಗುರುತು ಮತ್ತು ಉಗುರು ಗೀರು ಇದೆ ಎಂದು ಹೇಳಿದ್ದು, ಇದನ್ನು ಕೇಳಿರಾಮ್‌ಕುಮಾರ್ ಆಘಾತಗೊಂಡಿದ್ದಾನೆ.ಆ ವೇಳೆಯಲ್ಲಿ ರಾಮ್ ಕುಮಾರ್, ಪತ್ನಿ ಆನಂದ ಜ್ಯೋತಿಯ ಬಳಿ ಮಗನಿಗೆ ಏನಾಯಿತು ಎಂದು ಕೇಳಿದ್ದಾನೆ.

ಪತಿಗೆ ಉತ್ತರ ನೀಡಿದ ಆನಂದ ಜ್ಯೋತಿ, , ಜೀವಾ ಮಧ್ಯಾಹ್ನ ತನ್ನೊಂದಿಗೆ ಮಲಗಿದ್ದನು. ನಾನು ಹೊರಗೆ ಹೋಗಿ ಮನೆಗೆ ಬಂದಾಗ ಜೀವಾ ಏನು ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಪತ್ನಿಯ ಪ್ರತಿಕ್ರಿಯೆಯಿಂದ ಅನುಮಾನಗೊಂಡ ರಾಮ್‌ಕುಮಾರ್ ಪತ್ನಿ ಆನಂದ ಜ್ಯೋತಿ ಬಗ್ಗೆ ಅನುಮಾನವಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಣಿವಣ್ಣನ್ ಅವರು ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಆದರೆ ಈ ತನಿಖೆಯ ವೇಳೆ ಹಲವು ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ.ತನಿಖೆಯ ವೇಳೆ ”ಆನಂದ ಜ್ಯೋತಿ ಹಾಗೂ ರಾಮಕುಮಾರ್ ಅವರ ಸಂಬಂಧಿ ಮರುತುಪಾಂಡಿ ಅವರ ನಡುವೆ ಅನೈತಿಕ ಸಂಬಂಧವಿತ್ತು. ಗಂಡನಿಲ್ಲದ ವೇಳೆಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು.
ಎರಡು ದಿನಗಳ ಹಿಂದೆ ಇಬ್ಬರು ಭೇಟಿಯಾಗಿದ್ದನ್ನು ಮಗ ಜೀವಾ ನೋಡಿದ್ದಾನೆ. ಮಗ ಜೀವಾತನ್ನ ಪತಿ ರಾಮ್‌ಕುಮಾರ್‌ಗೆ ಹೇಳುತ್ತಾನೆ ಎಂದು ಆತಂಕಗೊಂಡಿದ್ದಾಳೆ ಆನಂದಜ್ಯೋತಿ. ಕೊನೆಗೆ ಪ್ರಿಯಕರ ಜೊತೆ ಸೇರಿ ಆನಂದ ಜ್ಯೋತಿಯೂ ಜೊತೆಗೆ ಮಲಗಿದ್ದ ಜೀವಾನ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾರೆ’’ ಎನ್ನುವ ಮಾಹಿತಿಯೂ ಹೊರಬಿದ್ದಿದೆ.
ಕೊನೆಗೆ ಆನಂದಜ್ಯೋತಿ ಅವರ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿ.ಛತ್ರಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆನಂದಜ್ಯೋತಿ ಹಾಗೂ ಮರುತುಪಾಂಡಿ ಎಂಬಿಬ್ಬರನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಕಾರಣಕ್ಕೆ ತಾಯಿಯೇ ಮಗನನ್ನೇ ಮುಗಿಸಿರುವ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ.