ಆಸ್ತಿಯ ಕಾರಣಕ್ಕೆ ಹೆತ್ತ ತಂದೆ ತಾಯಿಯ ಕಥೆ ಮು-ಗಿಸಿದ ಮಗ, ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಕಣ್ಣೀರ ಕಥೆ!!

ಆಸ್ತಿಗಾಗಿ ಅಣ್ಣ ತಮ್ಮಂದಿರು ಹಾಗೂ ಕುಟುಂಬಗಳ ನಡುವೆ ಜ-ಗಳಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಆಸ್ತಿಯ ಜ-ಗಳಗಳು ಕೋರ್ಟ್ ಮೆಟ್ಟಿಲೇರಿರುವ ಪ್ರಕರಣಗಳಿಗೇನು ಕಡಿಮೆಯಿಲ್ಲ. ಅದಲ್ಲದೇ ಕೆಲವೊಮ್ಮೆ ಆಸ್ತಿ ವಿಚಾರಕ್ಕಾಗಿ ನಾನಾ ರೀತಿಯ ಅನಾಹುತಗಳು ನಡೆದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧ ದಂಪತಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ (Banglore Rural District) ಯ ಸೂಲಿಬೆಲೆ ಗ್ರಾಮ (Sulibele Grama) ದಲ್ಲಿ ನಡೆದಿದೆ.

ಮೃ-ತ ಪಟ್ಟ ವ್ಯಕ್ತಿಗಳನ್ನು 70 ವರ್ಷದ ರಾಮಕೃಷ್ಣಪ್ಪ (Ramakrishanappa) ಹಾಗೂ ಅವರ ಪತ್ನಿ 65 ವರ್ಷದ ಮುನಿರಾಮಕ್ಕ (Muniramakka) ಎನ್ನಲಾಗಿದೆ. ತಮ್ಮ ಆಸ್ತಿಯನ್ನು ಹೆಣ್ಣುಮಕ್ಕಳಿಗೂ ಹಂಚಲು ನಿರ್ಧರಿಸಿದ್ದಾನೆ. ಹೀಗಾಗಿ ಈ ದಂಪತಿಗಳನ್ನು ಮಗ ನರಸಿಂಹನೇ ಪ್ರಾ-ಣಕ್ಕೆ ಕು-ತ್ತು ತಂದಿದ್ದಾನೆ ಎನ್ನಲಾಗಿದೆ.ಹೌದು, ಈ ರಾಮಕೃಷ್ಣಪ್ಪ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಮಗನು 17 ವರ್ಷಗಳ ಹಿಂದೆ ಮದುವೆಯಾಗಿದ್ದು, ಆ ಬಳಿಕ ಮನೆ ಬಿಟ್ಟು ಬೇರೆ ಹೋಗಿದ್ದನು.

ಹೀಗಾಗಿ ಈ ದಂಪತಿಗಳಿಬ್ಬರು ಮಾತ್ರ ಸೂಲಿಬೆಲೆಯ ಮನೆಯಲ್ಲಿ ವಾಸವಿದ್ದರು. ಆಸ್ತಿಯ ವಿಚಾರವಾಗಿ ಈ ದಂಪತಿಗಳನ್ನು ಮಗ ನರಸಿಂಹನೇ ಕ-ತ್ತು ಹಿಸುಕಿ ಕೊ-ಲೆ ಮಾಡಿದ್ದಾನೆ. ಈ ದಂಪತಿಗಳ ಹೆಣ್ಣುಮಕ್ಕಳು ಮನೆಗೆ ಕರೆ ಮಾಡಿದಾಗ ದಂಪತಿಗಳು ಫೋನ್ ಗೆ ಎತ್ತಲಿಲ್ಲ. ಈ ವೇಳೆಯಲ್ಲಿ ತಮ್ಮ ತಂದೆ ತಾಯಿಯೂ ಕೊ-ಲೆಯಾಗಿರುವುದು ಹೆಣ್ಣು ಮಕ್ಕಳಿಗೆ ತಿಳಿದಿದೆ.

ಈ ದಂಪತಿಯ ಪುತ್ರಿಯರಲ್ಲಿ ಒಬ್ಬಾಕೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೂರು ನೀಡಿದ್ದು, ದೂರಿನಡಿಯಲ್ಲಿ ಪೊಲೀಸರು ಶಂಕಿತ ನರಸಿಂಹನನ್ನು ವ-ಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ (Mallikarjuna Baladandi) ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ ಬಾಲದಂಡಿ, “ವಾಲ್ಮೀಕಿ ನಗರದ ಮನೆಯೊಂದರಲ್ಲಿ ವೃದ್ಧ ದಂಪತಿಯ ಕೊ-ಲೆಯ ಬಗ್ಗೆ ನಮಗೆ ದೂರು ಬಂದಿದೆ. ಅವರ ಮಗ ಕಳೆದ 18 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಒಬ್ಬರು ದೂರು ದಾಖಲಿಸಿದ್ದಾರೆ’ ಎಂದು ತಿಳಿಸಿದ್ದಾರೆ. ತಂದೆ ತಾಯಿಯನ್ನೇ ಆಸ್ತಿಯ ಸಂಬಂಧ ಕೊ-ಲೆ ಮಾಡಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *