Amitabh bachchan family : ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡಿದವರು. ವಯಸ್ಸು 80 ದಾಟಿದರೂ ಇಂದಿಗೂ ನಟನೆಯ ಬಗೆಗಿನ ಆಸಕ್ತಿಯೂ ಕೊಂಚವು ಕಡಿಮೆಯಾಗಿಲ್ಲ. ಹಿಂದಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಹೌದು, ಹಿಂದಿ ಚಿತ್ರರಂಗದ ದೊಡ್ಡ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ಅವರು 11 ಅಕ್ಟೋಬರ್ 1942 ರಲ್ಲಿ ಜನಿಸಿದ್ದಾರೆ.
ಅಲಹಾಬಾದ್ನಲ್ಲಿ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಮತ್ತು ಪ್ರಖ್ಯಾತ ಹಿಂದಿ ಕವಿ ಹರಿವಂಶ್ ರೈ ಬಚ್ಚನ್ ದಂಪತಿ ಪುತ್ರನಾಗಿ ಜನಿಸಿದರು. 1969ರಲ್ಲಿ ನಟನೆ ಮೂಲಕ ವೃತ್ತಿ ಜೀವನ ಆರಂಭಿಸಿದ ಇವರು ನಟನಷ್ಟೇ ಅಲ್ಲ, ಸಿನಿಮಾಗಳಿಗೆ ಹಾಡುಗಳನ್ನೂ ಹಾಡಿದ್ದಾರೆ. ಅನೇಕ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುವ ಮೂಲಕ ಅದರ ಯಶಸ್ಸಿಗೂ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
150ಕ್ಕೂ ಹೆಚ್ಚು ಜನರ ಜೊತೆ ಡಿಂಗ್ ಡಾಂಗ್ ಆಟ, ಮನೆಯಲ್ಲಿ ಸಿಕ್ಕಿದ್ದು 500 ಕಾಂ-ಡೋಮ್, ಈಗ ಈಕೆಯ ಪರಿಸ್ಥಿತಿ ಏನಾಗಿದೆ ನೋಡಿ!!
ಆದರೆ ಇದೀಗ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿದೆ. ಆದರೆ ಈ ಕುರಿತು ಶ್ವೇತಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮೂಲಗಳು ಇವರಿಬ್ಬರ ನಡುವೆ ಸರಿಯಿಲ್ಲ. ಹೀಗಾಗಿ ಅಮಿತಾಬ್ ಬಚ್ಚನ್ ತನ್ನ ಆಸ್ತಿಯನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೌದು, ಇತ್ತೀಚೆಗೆಷ್ಟೇ ಬಿಗ್ ಬಿ ತಮ್ಮ ಆಸ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಅದರ ಜೊತೆಗೆ ತನ್ನ ಆಸ್ತಿಯ ಮೇಲೆ ಕೇವಲ ಪುತ್ರ ಅಭಿಷೇಕ್ ಗೆ ಮಾತ್ರ ಹಕ್ಕಿರುವುದಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಅಮಿತಾಬ್ ಬಚ್ಚನ್ ಆಸ್ತಿಯನ್ನು ಎರಡು ಭಾಗಗಳಾಗಿ ಹಂಚಿಕೆ ಮಾಡಲಾಗಿದ್ದು, ಈ ಆಸ್ತಿ ಪುತ್ರ ಅಭಿಷೇಕ್ ಮತ್ತು ಪುತ್ರಿ ಶ್ವೇತಾ ಬಚ್ಚನ್ ಕೈಗೆ ಸೇರುತ್ತದೆ ಎನ್ನಲಾಗಿದೆ. ಈಗಾಗಲೇ ಮಾಧ್ಯಮ ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ಒಟ್ಟು ಆಸ್ತಿ 2800 ಕೋಟಿ ರೂಯಾಗಿದ್ದು, ಪುತ್ರಿ ಶ್ವೇತಾ ಮತ್ತು ಪುತ್ರ ಅಭಿಷೇಕ್ ಗೆ ಸಮ ಪಾಲು ಮಾಡಿದ್ದಾರೆ.
ಪುತ್ರಿ ಶ್ವೇತಾ ಮತ್ತು ಪುತ್ರ ಅಭಿಷೇಕ್ ಇಬ್ಬರಿಗೂ ತಲಾ ಒಂದು ಸಾವಿರದ ನಾಲ್ಕು ನೂರು ಕೋಟಿ ರೂಪಾಯಿಗಳು ಸಿಗಲಿದೆ.ಅಂದಹಾಗೆ, ತನ್ನ ಇಬ್ಬರೂ ಮಕ್ಕಳಿಗೂ ಕೂಡ 1400-1400 ಕೋಟಿ ಯಂತೆ ಹಂಚಿಕೆ ಮಾಡಿದ್ದಾರೆ. ಹೀಗಾಗಿ ತನ್ನ ಇಬ್ಬರೂ ಮಕ್ಕಳಿಗೂ ಆಸ್ತಿಯ ವಿಚಾರದಲ್ಲಿ ಯಾವುದೇ ಭೇದ ಮಾಡದೇ ಸಮವಾಗಿ ಹಂಚಿಕೆ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಅವರ ಬಳಿ ಈಗಾಗಲೇ ಸುಮಾರು 200 ರಿಂದ 300 ಕೋಟಿ ರೂಪಾಯಿಗಳ ಆಸ್ತಿ ಇದೆ.
ಈ ಹಿಂದೆ,ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋನಲ್ಲಿ ಶ್ವೇತಾ ಬಚ್ಚನ್ ಐಶ್ವರ್ಯ ರೈ ಬಗ್ಗೆ ಕೆಲವೊಂದು ವಿಷಯಗಳನ್ನು ಉಲ್ಲೇಖಿಸಿದ್ದರು. ಐಶ್ವರ್ಯ ಅವರ ಯಾವ ವಿಷಯ ನಿಮಗೆ ಇಷ್ಟವಾಗುವುದಿಲ್ಲ ಎನ್ನುವ ಪ್ರಶ್ನೆಗೆ ಶ್ವೇತಾ ‘ ಐಶ್ವರ್ಯ ಸಮಯಕ್ಕೆ ಸರಿಯಾಗಿ ಕಾಲ್ ಬ್ಯಾಕ್ ಮಾಡುವುದಿಲ್ಲ. ಅವರ ಟೈಮ್ ಮ್ಯಾನೇಜ್ ಮೆಂಟ್ ನನಗೆ ಇಷ್ಟವಿಲ್ಲ ಎಂದಿದ್ದರು.
ಇನ್ನೊಂದೆಡೆ ಸಮಾರಂಭವೊಂದರಲ್ಲಿ ಐಶ್ವರ್ಯ ಮತ್ತು ಶ್ವೇತಾ ಮುಖಾ ಮುಖಿಯಾದಾಗ, ಒಬ್ಬರನ್ನೊಬ್ಬರು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಕಂಡು ಬಂದಿತ್ತು. ತದನಂತರದಲ್ಲಿ ಬಿಗ್ ಬಿ ಕುಟುಂಬದಲ್ಲಿ ಅತ್ತೆ ನಾದಿನಿ ಸಂಬಂಧವು ಚೆನ್ನಾಗಿಲ್ಲ ಎನ್ನಲಾಗಿತ್ತು. ಹೀಗಾಗಿ ಬಿಗ್ ಬಿ ಆಸ್ತಿಯ ವಿಚಾರದಲ್ಲಿ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.