ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಅವರಿಗೆ ರೆಬಲ್ ಸ್ಟಾರ್ ಅಂಬರೀಶ್ ಅವರ ಜೊತೆ ನಟಿಸಬೇಕು ಎಂದು ದೊಡ್ಡ ಆಸೆ ಇಟ್ಟುಕೊಂಡಿದ್ದರು. ಯಾವಾಗ ಅಂಬರೀಷ್ ಅವರ ಜೊತೆ ನಟಿಸಲು ಅವಕಾಶ ದೊರಕಿತು ಆಗ ಒಂದರ ಹಿಂದೆ ಒಂದರಂತೆ ಹಲವಾರು ಸಿನೆಮಾಗಳಲ್ಲಿ ಅಭಿನಯಿದಿದ್ದರು. ಹಾಗೆ ನೋಡಿದರೆ ಮಾಲಾಶ್ರೀ ಅವರು ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರ ಜೊತೆ ಯಾವುದೇ ಸಿನೆಮಾಗಳಲ್ಲಿಯೂ ಕೂಡ ತೆರೆ ಹಂಚಿಕೊಂಡಿಲ್ಲ.
ಅಂಬರೀಷ್ ಅವರು ಸಿನೆಮಾವನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಚಿತ್ರದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದರು. ಸಿನೆಮಾದ ಕಥೆಯ ಬಗ್ಗೆ, ನಾಯಕಿಯ ಬಗ್ಗೆ ತಮ್ಮ ಪಾತ್ರದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಂಡು ಸಿನೆಮಾವನ್ನು ಒಪ್ಪಿಕೊಳ್ಳುತ್ತಿದ್ದರು.
ಸಿನೆಮಾದಲ್ಲಿ ಮಾಲಾಶ್ರೀ ಪ್ರಮುಖ ನಾಯಕಿ ಎಂದು ಗೊತ್ತಾಗುತ್ತಿದ್ದಂತೆ ಅಂಬರೀಷ್ ಅವರು ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಮಾಲಾಶ್ರೀ ನಾಯಕಿ ಅಂದ ಮೇಲೆ ನಾನು ಯಾಕಪ್ಪ ಬೇಕು, ನಾಯಕರಿಗಿಂತ ಹೆಚ್ಚಿನ ಡಿಮ್ಯಾಂಡ್ ಈಗ ಮಾಲಾಶ್ರೀ ಅವರಿಗೆ ಇದೇ ಹಾಗೂ ದೊಡ್ಡ ಅಭಿಮಾನಿ ಬಳಗವು ಇದೆ. ಮಾಲಾಶ್ರೀ ಅವರಿಂದ ಸಿನೆಮಾ ಹಿಟ್ಟಾಯಿತು ಎಂದು ಹೇಳುತ್ತಾರೆ ಹೊರೆತು ನನ್ನಿಂದಲ್ಲ ಎಂದು ಯಾವಾಗಲು ರೆಬಲ್ ಸ್ಟಾರ್ ಅಂಬರೀಷ್ ಹಾಸ್ಯ ಮಾಡುತ್ತಿದ್ದರು.
ಇನ್ನು ಅಂಬರೀಷ್ ಅವರು ನಟಿ ಮಾಲಾಶ್ರೀ ಅವರಿಗೆ ನೀನು ಈ ಸಿನೆಮಾದಲ್ಲಿ ಇದ್ದೀಯ ಎಂದ ಮೇಲೆ ನನ್ನನ್ನು ಏಕೆ ಹಾಕಿಕೊಳ್ಳಬೇಕು ಮತ್ತು ನನಗೆಲ್ಲಿ ಪ್ರಾಮುಖ್ಯತೆ ದೊರೆಯುತ್ತದೆ ಎಂದು ಮಾಲಾಶ್ರೀ ಅವರಿಗೆ ಹೇಳುತ್ತಿದ್ದರು. ಈ ರೀತಿಯ ಮಾತನ್ನು ಕೇಳುತ್ತಿದ್ದ ಮಾಲಾಶ್ರೀ ಅವರು ನಕ್ಕು ಸುಮ್ಮನಾಗುತ್ತಿದ್ದರು. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಮಾಲಾಶ್ರೀ ಅವರಿಂದ ಸುನಿಲ್ ಹಾಗೂ ಶಶಿಕುಮಾರ್ ಹೀಗೆ ಹಲವಾರು ಹೊಸ ನಾಯಕರು ಸಾಕಷ್ಟು ಯಶಸ್ಸುನ್ನು ಪಡೆದುಕೊಂಡಿದ್ದಾರೆ.
ಮಾಲಾಶ್ರೀ ಅವರಿಗೆ ಅಂಬರೀಶ್ ಅವರ ಆಪ್ತಮಿತ್ರ ವಿಷ್ಣುವರ್ಧನ್ ಅವರ ಜೊತೆ ನಟಿಸದೆ ಇದ್ದದ್ದು ಇಂದಿಗೂ ಬೇಸರದ ಸಂಗತಿ. ಆದರೆ ಅಂಬರೀಶ್ ಅವರ ಜೊತೆ ಹೃದಯ ಹಾಡಿತು, ಸೋಲಿಲ್ಲದ ಸರದಾರ ಸಿನೆಮಾದಲ್ಲಿನ ಇವರಿಬ್ಬರ ಜೋಡಿ ಜನರಿಗೆ ಸಾಕಷ್ಟು ಮೋಡಿ ಮಾಡಿತ್ತು ಹಾಗೂ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗಿ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.