ರಾಶಿಚಕ್ರದಲ್ಲಿ ಒಂದಷ್ಟು ಬದಲಾವಣೆ (Changes) ಗಳು ಆದಾಗ ಕೆಲವು ರಾಶಿಯವರಿಗೆ ಅದೃಷ್ಟವು ಕೈ ಹಿಡಿಯುತ್ತದೆ. ಹೀಗಾಗಿ ಆ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. 2023 ರ ಸೆಪ್ಟೆಂಬರ್ 4 (September 4) ರಂದು, ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸಿದ್ದು, ಗುರು ಮೇಷ ರಾಶಿಯಲ್ಲಿ ಹಿಮ್ಮುಖನಾಗಿ ಸಂಚಾರ ಪ್ರಾರಂಭ ಮಾಡಿದ್ದಾನೆ. ಗ್ರಹಗಳ ಸ್ಥಾನ ಬದಲಾವಣೆಯು ಅಮಲ ರಾಜ ಯೋಗವನ್ನು ತರುತ್ತದೆ.
ಅಮಲ ರಾಜ ಯೋಗ (Amala Raja Yoga) ವು ವಿವಿಧ ರಾಶಿಗಳಿಗೆ ಶುಭ ಸಮಯವನ್ನು ನೀಡುವುದರ ಜೊತೆಗೆ ಆರ್ಥಿಕವಾಗಿ, ವೃತ್ತಿಪರವಾಗಿ, ಶೈಕ್ಷಣಿಕವಾಗಿ ಶುಭದಾಯಕವಾಗಿರುತ್ತದೆ. ಹಾಗಾದರೆ ಅಮಲ ರಾಜಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಅದೃಷ್ಟ (Luck) ವು ಕೈ ಹಿಡಿಯಲಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಮೇಷ ರಾಶಿ: ಮೇಷ ರಾಶಿಯವರು ಈ ತಿಂಗಳು ಅಮಲ ರಾಜಯೋಗದಿಂದ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ. ವಿವಾಹಿತರಿಗೆ ಹೊಸ ಸಂಬಂಧಗಳು ಹುಟ್ಟಿಕೊಳ್ಳಲಿದ್ದು ಸಂಸಾರಜೀವನವು ಸುಖಕರವಾಗಿರುತ್ತದೆ. ಆದರೆ ಅತಿಯಾದ ಒತ್ತಡವನ್ನು ಕಡಿಮೆ ಮಾಡಿಕೊಂಡು ಅರೋಗ್ಯದ ಹೆಚ್ಚು ಗಮನ ಹರಿಸುವುದು ಒಳ್ಳೆಯದು.
ಮಿಥುನ ರಾಶಿ : ಈ ರಾಶಿಯವರಿಗೆ ಅಮಲ ರಾಜಯೋಗವು ಅದೃಷ್ಟವನ್ನು ತರಲಿದ್ದು, ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲಿದೆ. ತೊಂದರೆಯನ್ನುಂಟು ಮಾಡುವ ಕೆಲಸಗಳು ಪೂರ್ಣಗೊಳ್ಳಲಿದೆ. ಅದಲ್ಲದೇ ಎಲ್ಲಾ ಕ್ಷೇತ್ರದಲ್ಲಿಯು ಯಶಸ್ಸು ಕಾಣಲಿದ್ದಾರೆ. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಸದೃಢರಾಗಲಿದ್ದು, ಆರ್ಥಿಕ ಸ್ಥಿತಿಯು ಸುಧಾರಣೆಯಾಗುತ್ತದೆ.
ಸಿಂಹ ರಾಶಿ : ಈ ರಾಶಿಯವರಿಗೆ ಅಮಲ ರಾಜಯೋಗದಿಂದ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸುತ್ತದೆ. ಹಳೆಯ ಸ್ನೇಹಿತರ ಜೊತೆಗಿನ ಒಡನಾಟವು ಲಾಭವನ್ನು ತರಲಿದೆ. ವೃತ್ತಿ ಕ್ಷೇತ್ರದಲ್ಲಿ ತೊಡಗಿಕೊಂಡು ಉದ್ಯಮವನ್ನು ನಡೆಸುತ್ತಿರುವವರಿಗೆ ಲಾಭದಾಯಕವಾಗಿರಲಿದೆ. ಸಹೋದ್ಯೋಗಿಗಳಿಂದ ಸಲಹೆ ಪಡೆಯುವ ಕಡೆಗೆ ಗಮನ ಹರಿಸಿ. ಒಂದು ವೇಳೆ ಸಲಹೆ ನೀಡಲು ಬಂದರೆ ಖುಷಿಯಿಂದ ಸ್ವೀಕರಿಸುವುದು ಒಳ್ಳೆಯದು.