ಅಮೆರಿಕಾದಲ್ಲಿ ನಿರ್ಮಾಣವಾಯ್ತು ವಿಶ್ವದ ಎರಡನೇ ಅತೀ ದೊಡ್ಡ ಹಿಂದೂ ದೇವಾಲಯ!! ಏನಿದರ ವಿಶೇಷತೆಗಳು ಗೊತ್ತಾ? ಈ ಅದ್ಭುತ ದೇವಾಲಯ ಹೇಗಿದೆ ನೋಡಿ!! ಕಳೆದು ಹೋಗುತ್ತೀರಾ!!

ಭಾರತದ ಹೊರಗಡೆ ನಿರ್ಮಿಸಲಾಗಿರುವ ಈ ವಿಶ್ವದ ಎರಡನೇ ಅತಿದೊಡ್ಡ ಹಿಂದೂ ದೇವಾಲಯವು ಅಕ್ಟೋಬರ್ 8 ರಂದು ಅಮೆರಿಕಾದ ನ್ಯೂಜೆರ್ಸಿ (New Jersey)ಯಲ್ಲಿ ಉದ್ಘಾಟನೆಗೊಳ್ಳಲಿದ್ದು, ಈ ದೇವಾಲಯವು ಬಹಳ ವಿಶೇಷತೆಗಳಿಂದ ಕೂಡಿದೆ. ನ್ಯೂಜೆರ್ಸಿಯ ಟೈಮ್ಸ್ ಸ್ಕ್ವೇರ್‌ನಿಂದ ದಕ್ಷಿಣಕ್ಕೆ 90 ಕಿಮೀ ದೂರದಲ್ಲಿರುವ BAPS ಸ್ವಾಮಿನಾರಾಯಣ ಅಕ್ಷರಧಾಮ (BAPS Swami Narayana Aksharadhama) ವು 183-ಎಕರೆ ಜಾಗದಲ್ಲಿದೆ.

ಈ ದೇವಾಲಯವನ್ನು ನಿರ್ಮಿಸಲು ಸುಮಾರು 12 ವರ್ಷಗಳನ್ನು ತೆಗೆದುಕೊಂಡಿತು ಮತ್ತು ಅದರ ನಿರ್ಮಾಣವು 12,500 ಸ್ವಯಂಸೇವಕರನ್ನು ಒಳಗೊಂಡಿದ್ದು, ಈ ದೇವಾಲಯವು 255 ಅಡಿ x 345 ಅಡಿ x 191 ಅಡಿ ಅಳತೆಯನ್ನು ಹೊಂದಿದೆ ಮತ್ತು 183 ಎಕರೆಗಳಷ್ಟು ತನ್ನ ವ್ಯಾಪ್ತಿಯನ್ನು ಹೊಂದಿದೆ.ಹಿಂದೂ ಧರ್ಮಗ್ರಂಥಗಳ ಪ್ರಕಾರ ವಿನ್ಯಾಸಗೊಳಿಸಲಾಗಿರುವುದು ವಿಶೇಷ.

10,000 ಪ್ರತಿಮೆಗಳು ಮತ್ತು ಭಾರತೀಯ ಸಂಗೀತ ವಾದ್ಯಗಳ ಕೆತ್ತನೆಗಳು ಮತ್ತು ನೃತ್ಯ ಪ್ರಕಾರಗಳನ್ನು ಒಳಗೊಂಡಿದ್ದು, ಪ್ರಾಚೀನ ಭಾರತೀಯ ಸಂಸ್ಕೃತಿಯ ವಿನ್ಯಾಸ ಶೈಲಿ (Indian Culture) ಗಳನ್ನು ಸಾರಿ ಹೇಳುವಂತಿದೆ. ಇಲ್ಲಿ ಶಿಖರದಲ್ಲಿ, ಮಹಾಶಿಖರನ್ನು ಕಲಶ ಎಂದು ಕರೆಯಲಾಗುವ ಚಿನ್ನದ ಮಡಕೆಯಿಂದ ಅಲಂಕರಿಸಲಾಗಿದೆ. ಇದು ಸಂಪೂರ್ಣತೆ ಮತ್ತು ಶ್ರೇಷ್ಠತೆಯ ಅರ್ಥವನ್ನು ಸಂಕೇತಿಸುತ್ತದೆ. ಧ್ವಜವು ಎತ್ತರದಲ್ಲಿದೆ.

ದೇವಾಲಯದ ನಿರ್ಮಾಣಕ್ಕಾಗಿ ಸುಣ್ಣದ ಕಲ್ಲು, ಗ್ರಾನೈಟ್, ಗುಲಾಬಿ ಮರಳುಗಲ್ಲು ಮತ್ತು ಅಮೃತಶಿಲೆ ಸೇರಿದಂತೆ ಸುಮಾರು ಎರಡು ಮಿಲಿಯನ್ ಘನ ಅಡಿ ಕಲ್ಲುಗಳನ್ನು ಬಳಸಲಾಗಿದೆ. ಬಲ್ಗೇರಿಯಾ (Balgeria)ಮತ್ತು ಟರ್ಕಿ (Tarki) ಯಿಂದ ಸುಣ್ಣದ ಕಲ್ಲು ಸೇರಿದಂತೆ ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಿಂದ ಕಲ್ಲನ್ನು ತರಲಾಗಿದೆ.

ಗ್ರೀಸ್ (Greece), ಟರ್ಕಿ (Tarki) ಮತ್ತು ಇಟಲಿ (Itali)ಯಿಂದ ಮಾರ್ಬಲ್, ಭಾರತ (India)ಮತ್ತು ಚೀನಾ (China)ದಿಂದ ಗ್ರಾನೈಟ್, ಭಾರತದಿಂದ ಮರಳುಗಲ್ಲು ಮತ್ತು ಯುರೋಪ್ (Europe), ಏಷ್ಯಾ (Asia), ಲ್ಯಾಟಿನ್ (Latin), ಅಮೆರಿಕ (America) ದಿಂದ ಇತರ ಅಲಂಕಾರಿಕ ಕಲ್ಲುಗಳು ಬಳಸಲಾಗಿದೆ. ಅಕ್ಟೋಬರ್ 8 ರಂದು BAPS ಆಧ್ಯಾತ್ಮಿಕ ಮುಖ್ಯಸ್ಥ ಮಹಂತ್ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಉದ್ಘಾಟಿಸಲಾಗುವ ಈ ಅಕ್ಷರ ಧಾಮವು ಇದು ಅಕ್ಟೋಬರ್ 18 ರಿಂದ ಪ್ರವಾಸಿಗರಿಗಾಗಿ ತೆರೆದಿರುತ್ತದೆ.

Leave a Reply

Your email address will not be published. Required fields are marked *