ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಡೆದ ಒಂದು ಘಟನೆ ಇದೀಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಏಳು ವರ್ಷದ ಆಕೃತಿ (07) ಎಂಬ ಹೆಣ್ಣು ಮಗಳು ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸಾ ವನ್ನಪ್ಪಿದ್ದಾಳೆ. ಈಕೆ ಸಾ ವನಪ್ಪಿದ ಕಾರಣ ಮತ್ತು ಕಸಲಿಗೆ ಆ ಮಧ್ಯರಾತ್ರಿ ನಡೆದ ಘಟನೆ ಕೇಳಿದರೆ ನಿಜಕ್ಕು ರಹಸ್ಯ ಅನಿಸುತ್ತೆ. ಅಷ್ಟಕ್ಕೂ ನಡೆದಿದ್ದೇನೋ ನಿಜಕ್ಕೂ ಆ ಹೆಣ್ಣು ಮಗಳಿಗೆ ಆಗಿದ್ದೇನು ತಿಳಿದುಕೊಳ್ಳೋಣ ಬನ್ನಿ..
ವಿನೋದ್ ಮತ್ತು ನಳಿನ ದಂಪತಿಯ (Couple) ಪುತ್ರಿ ಅಕೃತಿ ಮಧ್ಯರಾತ್ರಿ ಜೋರಾಗಿ ಹಠ ಮಾಡುತ್ತಿದ್ದಳು. ಮಗಳು ತುಂಬಾ ಹಠ ಮಾಡುತ್ತಿದ್ದಾಳೆ ಎಂದು ಆಕೆಯನ್ನು ಸಮಾಧಾನ ಮಾಡಲು ಪಕ್ಕದ ಮನೆ ಗೆ ಕಳುಹಿಸಿಕೊಟ್ಟರು. ಪಕ್ಕದ ಮನೆಯ ನಂಜುಂಡಪ್ಪ ಎಂಬುವರ ಮನೆಗೆ ಮಗಳನ್ನು ಪಾಲಕರು ಕಳುಹಿಸಿಕೊಟ್ಟರು. ಆ ದಿನ ರಾತ್ರಿ ಅವರ ಮಗಳು ಅಲ್ಲೇ ಊಟ ಮಾಡಿ ಮಲಗಿದಳು.. ಕಣ್ಣು ಮುಚ್ಚಿ ಆನಂದವಾಗಿ ನಿದ್ರೆ ಮಾಡುತ್ತಿದ್ದ ಮಗು ಎರಡು ಗಂಟೆಯ ಸುಮಾರಿಗೆ ಅಸ್ವಸ್ಥ ಳಾದಳು.
ನಂಜುಂಡಪ್ಪ ಆ ಬಾಲಕಿಯ ತಂದೆ ತಾಯಿಗೆ ಕರೆ ಮಾಡಿದರು. ಆ ಸಮಯದಲ್ಲಿ ಅವರು ನಿದ್ರೆ ಮಾಡುತ್ತಿದ್ದ ಕಾರಣ ಕರೆಯನ್ನು ಸ್ವೀಕರಿಸಿಲ್ಲ ಬಾಗಿಲು ತಟ್ಟಿದರು ಕೂಡ ಅವರು ಎಚ್ಚರವಾಗಿಲ್ಲ ಆದಕಾರಣ ನಂಜುಂಡಪ್ಪ ಅವರೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಬಾಲಕಿ ಸಾ ವನ್ನಪ್ಪಿದ್ದಾಳೆ.. ಇದೀಗ ಆಶ್ಚರ್ಯಕರ ಮತ್ತು ತುಂಬಾ ಅನುಮಾನ ಹುಟ್ಟಿಸುವ ವಿಷಯವೇನೆಂದರೆ, ನಂಜುಂಡಪ್ಪ ಅವರ ಮನೆಯ ವಿರುದ್ಧವೇ ಇದೀಗ ಬಾಲಕಿಯ ತಂದೆ ತಾಯಿ ದೂರು ದಾಖಲು ಮಾಡಿದ್ದಾರೆ.
ಆಶ್ಚರ್ಯಕರ ಸಂಗತಿ ಇನ್ನೇನೆಂದರೆ ಮಗಳಿಗೆ ಪಕ್ಕದ ಮನೆಯವರು ಹೆದರಿಸಿ, ಗದರಿಸಿ ಹೊಡೆದು ಅವಳನ್ನು ಉಸಿರುಗಟ್ಟಿಸಿ ಕೊ ಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಅಷ್ಟೇ ಅಲ್ಲದೆ ಬಾಲಕಿಯ ಕೈ ಮೇಲೆ ರ ಕ್ತ ಹೆಪ್ಪುಗಟ್ಟಿದ ಗಾಯಗಳು ಕೂಡ ಪತ್ತೆಯಾಗಿವೆ. ಪೊಲೀಸರು ಈಗ ಎಫ್ ಎಸ್ ಎಲ್ ಟೀಮ್ ಜೊತೆ ಪಕ್ಕದ ಮನೆಗೆ ಹೋಗಿ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೊಂದು ವಿಚಾರ ಏನೆಂದರೆ ಬಾಲಕಿಯ ವ್ಯಕ್ತಿತ್ತ ತುಂಬಾ ವಿಚಿತ್ರವಾಗಿತ್ತು.
ಈ ಏಳು ವರ್ಷದ ಆಕೃತಿಯೆಂಬ ಬಾಲಕಿ ಚಿಕ್ಕ ವಯಸ್ಸಿನಿಂದ ತುಂಬಾ ಹಠದ ಸ್ವಭಾವ ಬಟ್ಟೆ ಕಚ್ಚುವುದು ಉಗುರು ಕಚ್ಚುವುದು ಹಾಗೆ ತುಂಬಾ ಹಠಮಾರಿ ಹುಡುಗಿ ಆಗಿದ್ದಳು. ಇವಳ ಕಟವನ್ನು ಕಂಟ್ರೋಲ್ ಮಾಡಲಾಗದೆ ತಂದೆ ತಾಯಿ ಪಕ್ಕದ ಮನೆಗೆ ಈಕೆಯನ್ನು ಕಳಿಸಿಕೊಡುತ್ತಿದ್ದರು. ಇದೇ ಮೊದಲನೇ ಬಾರಿಯಲ್ಲ ಹಲವಾರು ಸಲ ಈಕೆಯನ್ನು ಪಕ್ಕದ ಮನೆಗೆ ಸಮಾಧಾನ ಮಾಡಲು ಕಳಿಸುತ್ತಿದ್ದರು. ಹಾಗೆ ನೋಡಿದರೆ ನಿತ್ಯ ಈ ಬಾಲಕಿ ಪಕ್ಕದ ಮನೆಗೆ ಹೋಗಿ ಬರುತ್ತಿದ್ದಳು ಆದರೆ ಈ ಬಾರಿ ಹೋದಾಗ ಈಕೆ ವಾಪಸ್ ಬರಲೇ ಇಲ್ಲ. ಇದೀಗ ನಂಜುಂಡಪ್ಪ ಮತ್ತು ಪತ್ನಿ ಅವರ ಮೇಲೆ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಒಂದು ಘಟನೆ ನೋಡಿದರೆ ನಮಗೆ ಹಲವಾರು ಪ್ರಶ್ನೆಗಳು ಮೂಡುತ್ತೆ ನಿಜಕ್ಕೂ ಅಪರಾಧಿ ಯಾರೆಂಬುದು ತನಿಕೆಯ ನಂತರವೇ ಹೊರಬೇಕಾಗಿದೆ..