ಹಳ್ಳಿ ಹೈದಾ ಪ್ಯಾಟೆಗೆ ಬಂದ ಶೋ ಸ್ಪರ್ಧಿ ರಾಜೇಶ್ ಜೀವ ಕಳೆದುಕೊಂಡ ಘಟನೆಗೆ ಟ್ವಿಸ್ಟ್. ಸ್ಫೋಟಕ ಮಾಹಿತಿ ಹೊರ ಹಾಕಿದ ಐಶ್ವರ್ಯ!!

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಶೋಗಳು ಪ್ರಸಾರ ಕಂಡು ಹಳ್ಳಿ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನವನ್ನಂತೂ ಮಾಡಿದೆ. ಅಂತಹ ಶೋಗಳಲ್ಲಿ ಹಳ್ಳಿ ಹೈದಾ ಪ್ಯಾಟೆಗೆ ಬಂದ (Halli Haida Pyateg Banda) ರಿಯಾಲಿಟಿ ಶೋ ಕೂಡ ಒಂದು. ಹಳ್ಳಿ ಹೈದಾ ಪ್ಯಾಟೆಗೆ ಬಂದ ಸೀಸನ್ 1ರ ವಿನ್ನರ್ ರಾಜೇಶ್ ಮತ್ತು ಐಶ್ವರ್ಯ (Rajesh And Aishwarya) ಎಲ್ಲರಿಗೂ ಕೂಡ ಚಿರಪರಿಚಿತರು.

ಆದರೆ ಈ ಶೋನಿಂದ ಹೊರ ಬಂದ ಬಳಿಕ ತನ್ನ ಜೀವನವನ್ನೇ ಮುಗಿಸಿಕೊಂಡಿದ್ದ ಈ ರಾಜೇಶ್.ಆದರೆ ರಾಜೇಶ್ ಏಕಾಏಕಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಎಲ್ಲರಿಗೂ ಕೂಡ ಶಾ-ಕ್ ನೀಡಿತ್ತು. ಅದಲ್ಲದೇ ರಾಜೇಶ್ ಆ-ತ್ಮಹತ್ಯೆಗೆ ಐಶ್ವರ್ಯ ಕಾರಣ ಎಂದು ಸಾಕಷ್ಟು ಆರೋಪ ಗಳು ಕೇಳಿ ಬಂದಿದ್ದವು.

ಆದರೆ ಈ ಬಗ್ಗೆ ಐಶ್ವರ್ಯರವರು ಸ್ಪಷ್ಟನೆ ನೀಡಿದ್ದು, ಕನ್ನಡ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಹಳ್ಳಿ ಹೈದಾ ಪ್ಯಾಟೆಗೆ ಬಂದ ಖ್ಯಾತಿಯ ಐಶ್ವರ್ಯ, ‘ರಾಜೇಶ್ ತೀರಿಕೊಂಡ ಸಂದರ್ಭದಲ್ಲಿ ಮಾಧ್ಯಮದಿಂದ ನನಗೆ ಕರೆ ಬರುತ್ತೆ ರಾಜೇಶಾ ಬಿದ್ದು ಹೋಗಿದ್ದಾನೆ ಎಂದು. ನೋಡೋಕೆ ಸಣ್ಣ ಇದ್ರೂ ತುಂಬಾ ಗಟ್ಟಿಯಿದ್ದ. ಸಾಕಷ್ಟು ಜನ ಕರೆ ಮಾಡಿ ತೀ-ರಿಕೊಂಡಿದ್ದಾನೆ ಎಂದು ಹೇಳುತ್ತಾರೆ, ಆದರೆ ನಿಜ ಅಥವಾ ಸುಳ್ಳು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದುಕೊಂಡೆ” ಎಂದಿದ್ದಾರೆ.

“ಎಲ್ಲಾ ಮಾಧ್ಯಮದವರು ನನಗೆ ಕರೆ ಮಾಡುತ್ತಿದ್ದಾರೆ ಆಗ ಟಿವಿ ನೋಡುತ್ತೀನಿ ರಾಜೇಶ್ ಇನ್ನಿಲ್ಲ ಎಂದು ತೋರಿಸುತ್ತಿದ್ದಾರೆ. ಹಾಸ್ಟಿಟಲ್ ರಾಜೇಶ್‌ ವಿಡಿಯೋ ನೋಡಿ ಶಾಕ್ ಆಯ್ತು, ನಮ್ಮ ಸಿನಿಮಾ ನಿರ್ದೇಶಕರ ರಾಜೇಶ್ ಊರಿಗೆ ಹೋಗಿದ್ದೆ. ಟ್ರೋಫಿ ಗೆದ್ದ ಕ್ಷಣ ಬಂದಿದ್ದ ಜನಕ್ಕಿಂತ ಡಬಲ್ ಜನ ಬಂದಿದ್ದರು. ಸಾಕಷ್ಟು ಜನರು ನನಗೆ ಕೇಳುತ್ತಾರೆ ರಾಜೇಶ್ ಸೂಸೈಡ್ ಮಾಡಿಕೊಂಡಿದ್ದಕ್ಕೆ ನಾನು ಕಾರಣ ಅಲ್ಲ. ಬಳ್ಳೆಹಾಡಿ ಕಾಡಿನಿಂದ ಮೈಸೂರಿನಲ್ಲಿರುವ ಮನೆಗೆ ಶಿಫ್ಟ್‌ ಆಗಿದ್ದರು ಆಗಾಗ ನಾನು ಸಾಯುವೆ ಎಂದು ಪೋಷಕರಿಗೆ ಹೆದರಿಸುತ್ತಿದ್ದನಂತೆ. ಅವತ್ತು ಕೂಡ ಹೆದರಿಸಲು ಹೋಗಿದ್ದಾನೆ ಅಲ್ಲಿಂದ ಬಿದ್ದಿದ್ದರೂ ಕೈ ಕಾಲು ಮುರಿಯುತ್ತಿರಲಿಲ್ಲ ಎಂದಿದ್ದಾರೆ.

“ಆದರೆ ಹಿಂದಿನ ದಿನ ಮನೆ ಮಾಲೀಕರು ಕಾಂಪೌಂಡ್‌ಗೆ ಶಾರ್ಪಾಗಿರುವ ಗ್ರಿಲ್ ಹಾಕಿಸಿದ್ದಾರೆ ಅದರ ಮೇಲೆ ಬಿದ್ದ ತಕ್ಷಣ ಆ ಕಂಬಿ ಅವನ ಹೊಟ್ಟೆಗೆ ಚುಚ್ಚಿ ಅಗಲಿರುವುದು. ರಾಜೇಶ್ ಸಾವಿಗೆ ಯಾರೂ ಕಾರಣವಲ್ಲ. ನನಗೆ ತುಂಬಾ ಜನ ಪ್ರೀತಿ ಕೊಡುತ್ತಾರೆ ಅದಕ್ಕೆ ಚಿರಋಣಿಯಾಗಿರುತ್ತೀನಿ ಆದರೆ ಅನೇಕರು ರಾಜೇಶ್ ಸಾವಿಗೆ ನನ್ನ ಹೆಸರು ಎಳೆಯುತ್ತಾರೆ. 90ರಿಂದ 100 ದಿನಗಳ ಕಾಲ ಹಳ್ಳಿ ಹೈದಾ ಪ್ಯಾಟೆಗೆ ಬಂದ ರಿಯಾಲಿಟಿ ಶೋ ನಡೆಯಿತ್ತು. ಫಿನಾಲೆ ದಿನ ನಮಗೆ ತಿಳಿಯಿತ್ತು ಜನರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಹುಟ್ಟಿದೆ” ಎಂದಿದ್ದಾರೆ ಐಶ್ವರ್ಯ .

“ಐಸು ರಾಜೇಶಾ ಅಂದ್ರೆ ಎಲ್ಲರಿಗೂ ತುಂಬಾನೇ ಇಷ್ಟ ಆಯ್ತು. ಏನ್ ರೀ ರಾಜೇಶ್‌ನ ಕರ್ಕೊಂಡು ಬಂದು ಸಾಯಿಸಿ ಬಿಟ್ರಿ ಎಂದು ಸುಲಭವಾಗಿ ಹೇಳುತ್ತಾರೆ. ಹೆದರಿಸಲು ರಾಜೇಶ್ ಹೋಗಿ ಸತ್ತಿರುವುದು ಅದಕ್ಕೆ ನಾನು ಕಾರಣ ಅಲ್ಲ. ಸಿಟಿಗೆ ರಾಜೇಶ್‌ನ ಕರೆದುಕೊಂಡು ಬಂದು ಸಾಯಿಸುವ ಉದ್ದೇಶ ಯಾರಿಗೂ ಇರಲಿಲ್ಲ. ಮಣ್ಣಿನ ಮನೆಯಲ್ಲಿರುವ ಹುಡುಗ ಸಿಟಿಗೆ ಬಂದು ಮನೆ ಖರೀದಿಸಿ ಹೊಸ ಗಾಡಿ ಖರೀಸಿದಿ ಜೀವನ ಚೆನ್ನಾಗಿ ನಡೆಸುತ್ತಿದ್ದ ” ಎಂದಿದ್ದಾರೆ ಐಶು.

“ಲಕ್ಷ ಲಕ್ಷ ಹಣ ಸಂಪಾದನೆ ಮಾಡುವಷ್ಟರ ಮಟ್ಟಕ್ಕೆ ಹೆಸರು ಮಾಡಿದ.ಸುಮಾರು ಮೂರ್ನಾಲ್ಕು ಸಿನಿಮಾಗಳಿಗೆ ಸಹಿ ಮಾಡಿ ಸಂಪಾದನೆ ಮಾಡಿದೆ. ಸೆಟ್‌ನಲ್ಲಿ ನೀರು ಬರುತ್ತಿರಲಿಲ್ಲ ಅಂದ್ರೆ ನೀರಿನ ಕೇಸ್‌ ತೆಗೆದುಕೊಂಡು ಬಂದು ಸ್ನಾನ ಮಾಡುತ್ತಿದ್ದ ಅಷ್ಟು ರಾಜನ ರೀತಿ ಜೀವನ ಮಾಡಿದ್ದಾನೆ” ಎಂದು ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *