ಅಕ್ಕನ ಗಂಡನ ಜೊತೆ ಪ್ರೀತಿಯಲ್ಲಿ ಬಿದ್ದ ಮಹಿಳೆ. ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಾವನ ಜೊತೆ ಪಲಾಯನ ಮಾಡಿದ ಹೆಂಡ್ತಿ. ಕೊನೆಗೆ ಏನಾಯ್ತು!!

Aishwarya and sanjith : ಸಮಾಜದಲ್ಲಿ ಜನರು ವಿದ್ಯಾವಂತರಾಗುತ್ತಿದ್ದಂತೆ ಯೋಚಿಸುವುದನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಏನನ್ನು ಮಾಡಿದರೆ ಏನಾಗುತ್ತದೆ ಎಂದು ಯೋಚಿಸುವುದರ ಗೋಜಿಗೆ ಹೋಗದೇ ಒಂದರ ಮೇಲೆ ಒಂದು ತಪ್ಪು ಮಾಡುತ್ತಲೇ ಇದ್ದಾರೆ. ವಿದ್ಯಾವಂತ ಹಾಗೂ ಹಣದ ಹಿಂದೆ ಹೋಗುತ್ತಿದ್ದಂತೆ ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ.

ಹೀಗಾಗಿ ಇತ್ತೀಚೆಗೆ ದಿನಗಳಲ್ಲಿ ಯಾರು ಊಹೆ ಮಾಡಲು ಸಾಧ್ಯವಲ್ಲದ ಪ್ರಕರಣಗಳ ಹೆಚ್ಚಾಗಿ ನಡೆಯುತ್ತಿದೆ. ಈ ಹಿಂದೆ ಮಕ್ಕಳನ್ನು ಬಿಟ್ಟು ಅಕ್ಕನ ಗಂಡನ ಜೋತೆ ಪರಾರಿಯಾಗಿದ್ದ ಮಹಿಳೆ ಮತ್ತು ಆಕೆಯ ಬಾವನನ್ನು ಪೊಲೀಸರು ಬಂಧಿಸಿದ್ದರು. ಹೌದು, ಕೊಲ್ಲಂ ಮುಂಡಕ್ಕಲ್ ಮೂಲದ ಐಶ್ವರ್ಯ (28) ಮತ್ತು ಆಕೆಯ ಸಹೋದರಿಯ ಪತಿ ಚಾಲಾ ಮೂಲದ ಸಂಜಿತ್ (36) ಅವರನ್ನು ಮಧುರೈ ಪೊಲೀಸರು ಬಂಧಿಸಿದ್ದರು.

ಸಂಜಿತ್‌ಗೆ ಇಬ್ಬರು ಮಕ್ಕಳಿದ್ದು, ಐಶ್ವರ್ಯಾ ಅವರಿಗೆ ಒಂದು ಮಗುವಿದೆ. ಮಕ್ಕಳನ್ನು ಬಿಟ್ಟು ಹೋಗಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಇಬ್ಬರನ್ನೂ ರಿಮಾಂಡ್ ಮಾಡಲಾಗಿತ್ತು. ಪೊಲೀಸರ ಪ್ರಕಾರ, ಐಶ್ವರ್ಯಾ ನಾಪತ್ತೆಯಾದ ನಂತರ ಪತಿ ಎರವಿಪುರಂ ಪೊಲೀಸ್ ಠಾಣೆಯಲ್ಲಿ ಮತ್ತು ಸಂಬಂಧಿಕರುಕೊಲ್ಲಂ ಪಶ್ಚಿಮ ಪೊಲೀಸರಿಗೆ ದೂರು ನೀಡಿದ್ದರು.

ಇದರ ಬೆನ್ನಲ್ಲೇ ಪಶ್ಚಿಮ ಪೊಲೀಸರು ಸೈಬರ್ ಸೆಲ್ ಸಹಾಯದಿಂದ ತನಿಖೆ ಕೈಗೊಂಡಿದ್ದರು. ನಕಲಿ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ಇಬ್ಬರೂ ರೈಲಿನಲ್ಲಿ ಮಧುರೈಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿತ್ತು. ರೈಲ್ವೆ ಪೊಲೀಸರು ಅವರ ಫೋಟೋಗಳನ್ನು ಕಳುಹಿಸಿದ ನಂತರ ಐಶ್ವರ್ಯಾ ಮತ್ತು ಸಂಜಿತ್ ಅನ್ನು ಗುರುತಿಸಲಾಗಿತ್ತು.

ಇದರೊಂದಿಗೆ ಕೊಲ್ಲಂ ಎಸಿಪಿ ಟಿಬಿ ವಿಜಯನ್ ನಿರ್ದೇಶನದಂತೆ ಪಶ್ಚಿಮ ಪೊಲೀಸರು ಮಧುರೈಗೆ ತೆರಳಿದ್ದರು. ಇಬ್ಬರನ್ನೂ ಕೊಲ್ಲಂಗೆ ಕರೆದೊಯ್ದು ಎರವಿಪುರಂ ಪೊಲೀಸರಿಗೆ ಒಪ್ಪಿಸಲಾಗಿತ್ತು. ಒಟ್ಟಿನಲ್ಲಿ ಹೆತ್ತ ತಾಯಿ ಮಕ್ಕಳನ್ನು ಬಿಟ್ಟು ಪ್ರಿಯಕರ ಜೊತೆಗೆ ಪರಾರಿಯಾಗಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *