air hostess lifestyle :ವಿಮಾನ ಎಂದರೆ ಮಧ್ಯಮ ವರ್ಗದ ಜನರಿಗೆ ಕುತೂಹಲ ಹೆಚ್ಚು. ಹೀಗಾಗಿ ಜೀವಮಾನದಲ್ಲಿ ಒಮ್ಮೆಯಾದರೂ ಈ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ. ಇನ್ನು ಗಗನ ಸಖಿಯರು ಎಂದರೆ ಬಾಯಿಗೆ ಕೈ ಇಟ್ಟುಕೊಂಡು ಬಿಡುತ್ತಾರೆ. ಈ ವಿಮಾನದಲ್ಲಿ ಪ್ರಯಾಣಿಸಿರುವವರು ಗಗನಸಖಿಯರನ್ನು ನೋಡಿಯೇ ಇರುತ್ತೀರಾ. ಗಗನ ಸಖಿಯರ ಉಡುಗೆ ತೊಡುಗೆ, ಹಾವ ಭಾವ ಇವೆಲ್ಲಾ ಪ್ರಯಾಣಿಕರನ್ನು ಒಂಥರಾ ಆಕರ್ಷಿಸುತ್ತದೆ.
ಫ್ಲೈಟ್ ಅಟೆಂಡೆಂಟ್‌ಗಳು (flight appointment) ಅಥವಾ ವಿಮಾನ (airhostess) ಪರಿಚಾರಕರು ಎಂದೇ ಕರೆಯಲಾಗುವ ಇವರು ಕೆಲಸ ವಿಮಾನದಲ್ಲಿ ಪ್ರಯಾಣಿಸುವ ಕುಡುಕ ಪ್ಯಾಸೆಂಜರ್‌ನ್ನು ನಿಭಾಯಿಸುವುದರಿಂದ ಹಿಡಿದು ಜೆಟ್-ಲ್ಯಾಗ್ ಅನ್ನು ನಿಭಾಯಿಸುತ್ತಾರೆ ಕೂಡ. ವಿಮಾನವನ್ನು ಏರಿದ ಕೂಡಲೇ ನಗು ಮೊಗದಿಂದ ನಿಮ್ಮನ್ನು ಸ್ವಾಗತಿಸುವವರು ಈ ಗಗನ ಸಖಿಯರು. ಆದರೆ ವಿಮಾನದಲ್ಲಿ ಆರಾಮದಾಯಕವಾಗಿ ಆ ಕಡೆ ಈ ಕಡೆ ತೆರಳುತ್ತ ಪ್ರಯಾಣಿಕರ ಬೇಕು ಬೇಡಗಳನ್ನು ಕೇಳುವ ಗಗನ ಸಖಿಯರ ಕೆಲಸ ಎಷ್ಟು ಆರಾಮದಾಯಕ ಎಂದೆನಿಸಬಹುದು.
ಆದರೆ ಗಗನ ಸಖಿಯರು ಕೂಡ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಸಾಮಾನ್ಯವಾಗಿ ಕಂಪನಿಗಳಲ್ಲಿ 1 ವರ್ಷ ಅಥವಾ 2 ವರ್ಷದ ಅಗ್ರಿಮೆಂಟ್ ಇರುತ್ತದೆ ಮುಗಿದ ಕೂಡಲೇ ಬಿಡಬಹುದು. ಅಷ್ಟೇ ಅಲ್ಲದೇ ಸಣ್ಣ ವಿಷಯಕ್ಕೆ ರಾಜೀನಾಮೆ ಕೊಡುತ್ತೇವೆ ಎಂದರೆ ಕಂಪೆನಿಯಲ್ಲಿ ಸುಮ್ಮನೆ ಇರುತ್ತಾರೆ. ಆದರೆ ಗಗನಸಖಿಯರಿಗೆ ಈ ರೀತಿಯ ಆಯ್ಕೆ ಇರುವುದಿಲ್ಲ. ಕೆಲಸಕ್ಕೆ ಸೇರುವಾಗ ಇಷ್ಟು ವರ್ಷ ಕೆಲಸ ಮಾಡುತ್ತೇವೆ ಎಂದು ಅಗ್ರಿಮೆಂಟ್ ಮಾಡಬೇಕು ಮಧ್ಯದಲ್ಲಿ ಬಿಟ್ಟರೆ ಫೈನ್ ಕಟ್ಟಬೇಕು.

ಗಗನಸಖಿಯಾದವರು ಕೆಲಸಕ್ಕೆ ಸೇರಿದ 3ವರ್ಷ ಪ್ರೆ-ಗ್ನೆಂಟ್ ಆಗುವ ಹಾಗಿಲ್ಲ ಒಂದು ವೇಳೆ ಆದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಇನ್ನು ಮುಖ್ಯವಾಗಿ ಗಗನಸಖಿಯರ ಹಲ್ಲು ಯಾವಾಗಲೂ ಹೊಳೆಯುತ್ತಿರುತ್ತದೆ. ಹೌದು, ಇವರ ಹಲ್ಲು ಬಿಳಿ ಇದ್ದರೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಇವರು ತಿಂಗಳಿನಲ್ಲಿ 90ಗಂಟೆಗಳ ಕಾಲ ವಿಮಾನದಲ್ಲಿ ಕಾಲ ಕಳೆಯುತ್ತಾರೆ. ಸರಿಸುಮಾರು ನಾಲ್ಕು ದಿನ ವಿಮಾನದಲ್ಲೇ ಕಾಲ ಕಳೆಯುತ್ತಾರೆ. ಅದಲ್ಲದೆ ತನ್ನ ಬಾಡಿ ಫಿಟ್ ನೆಸ್ ಕಾಪಾಡಿ ಕೊಳ್ಳಬೇಕಾಗುತ್ತದೆ.
ಯಾವುದೇ ಕಾರಣಕ್ಕೂ ದಪ್ಪ ಆಗುವ ಹಾಗಿಲ್ಲ. ಅದರಲ್ಲಿ ಮೈ ಮೇಲೆ ಹುಟ್ಟುಮಚ್ಛೆ ಇದ್ದರೆ ಅಂತಹವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಗಗನ ಸಖಿ ಕೆಲಸಕ್ಕೆ ಸೇರುವ ಮುನ್ನ ಸ್ವಿಮ್ಮಿಂಗ್ ಬರಲೇಬೇಕು ಏಕೆಂದರೆ ವಿಮಾನ ನೀರಿನಲ್ಲಿ ಲ್ಯಾಂಡ್ ಆಗುವುದಿದ್ದರೆ ಸ್ವಿಮ್ಮಿಂಗ್ ಅಗತ್ಯವಾಗಿ ಬೇಕು. ಇಂಟರ್ ವ್ಯೂನಲ್ಲಿ ಸ್ವಿಮ್ಮಿಂಗ್ ಟೆಸ್ಟ್ ಮಾಡಲಾಗುತ್ತದೆ. ಅದರ ಜೊತೆಗೆ ಆರು ತಿಂಗಳಿಗೊಮ್ಮೆ ಹೆಲ್ತ್ ಚೆಕಪ್ ಮಾಡಿಕೊಳ್ಳಬೇಕು ಎಚ್. ಐ. ವಿ ಟೆಸ್ಟ್ ಕೂಡ ಮಾಡಿಸಬೇಕು. ಈ ಟೆಸ್ಟ್ ಬಳಿಕ ಯಾವುದಾದರೂ ಖಾಯಿಲೆ ಇದ್ದರೆ ಕೆಲಸದಿಂದ ತೆಗೆದುಹಾಕುತ್ತಾರೆ.
52 ವಯಸ್ಸಿನ ಮಹಿಳೆಯನ್ನ ಮದುವೆಯಾದ, 21 ವಯಸ್ಸಿನ ಯುವಕ! ಹೊಸ ಟ್ರೆಂಡ್ ಗೆ ನಾಂದಿ ಹಾಡಿದ ಯುವಕ, ಬೆಚ್ಚಿಬಿದ್ದ ಯುವತಿಯರು!!
ಚೀನಾದಲ್ಲಿ ಗಗನಸಖಿಯರಿಗೆ ತರಭೇತಿ ನೀಡುತ್ತಾರೆ ಹೇಗೆ ಮಾತನಾಡಬೇಕು ಎಷ್ಟು ಮಾತನಾಡಬೇಕು ಎಂದು ಹೇಳಿಕೊಡುತ್ತಾರೆಯಂತೆ. ಇನ್ಮು ಬಾಯಲ್ಲಿ ಕಡ್ಡಿ ತಲೆಯ ಮೇಲೆ ಪುಸ್ತಕ ಇಟ್ಟುಕೊಂಡು ಅದು ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು. ಯಾವರೀತಿ ನಿತ್ಕೊಳ್ಳಬೇಕು ನಿಂತುಕೊಂಡಾಗ ಎರಡು ಕಾಲಿನ ಮಧ್ಯೆ ಎಷ್ಟು ಗ್ಯಾಪ್ ಇರಬೇಕು ಎನ್ನುವುದು ತರಭೇತಿ ಯಲ್ಲಿ ಹೇಳಿಕೊಡಲಾಗುತ್ತದೆ. ಯಾವರೀತಿ ಕುತ್ಕೊಳ್ಳಬೇಕು ಎಂಬುದನ್ನು ತಿಳಿಸಲಾಗುತ್ತದೆ. ಗಗನ ಸಖಿಯರು ಶಿಫ್ಟ್ ಕೆಲಸ ಮಾಡುತ್ತಾರೆ.
ವಿಮಾನಪ್ರಯಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ. ವಿಮಾನದಲ್ಲಿ ಯಾರಿಗಾದರೂ ಕೂಡ ಹುಷಾರು ತಪ್ಪಿದ್ದರೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರಾಥಮಿಕ ಚಿಕಿತ್ಸೆಯ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಅದರ ಜೊತೆಗೆ ಗಗನ ಸಖಿಯರಿಗೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಕೊಡದೇ ರೀತಿಯಲ್ಲಿ ಸೆಲ್ಫ್ ಡಿಫೆನ್ಸ್ ತರಬೇತಿಯನ್ನು ಕೊಡಲಾಗುತ್ತದೆ. ಗಗನ ಸಖಿಯರ ಕೆಲಸಕ್ಕೆ ಭಾರತದಲ್ಲಿ ಅತೀ ಹೆಚ್ಚು ಸಂಬಳ ನೀಡಲಾಗುತ್ತದೆ. ಹೌದು 2 ರಿಂದ 20 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ.