Airhostess archana case twist : ಗಗನಸಖಿ ಆ-ತ್ಮ-ಹ-ತ್ಯೆ ಪ್ರಕರಣ : ಎತ್ತರದಿಂದ ತಳ್ಳಿಹಾಕಿ ಆ-ತ್ಮ-ಹ-ತ್ಯೆ ಎಂದು ಬಿಂಬಿಸಿದ ಟೆಕ್ಕಿ ಅರೆಸ್ಟ್..!ಬೆಂಗಳೂರಿನಲ್ಲಿ 28 ವರ್ಷದ ಅರ್ಚನಾ ಎಂಬ ಯುವತಿಯು ಮೃ-ತ-ಪಟ್ಟಿದ್ದಳು. ಆಕೆ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಈವರೆಗೆ ಗಗನಸಖಿ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು.
ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ಪ್ರಿಯಕರನೇ ಕಾರಣ ಎಂದು ಬಯಲಾಗಿದೆ. ಅಪಾರ್ಟ್ಮೆಂಟ್ ನಿಂದ ತ-ಳ್ಳಿ ಹಾಕಿ ನಂತರ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದಾನೆ ಎಂಬ ರೋಚಕ ಸಂಗತಿ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಅರ್ಚನಾ ಪ್ರೀತಿಸುತ್ತಿದ್ದಳು. ಆತನ ಹೆಸರು ಆದೇಶ್. ಮೂರು ವರ್ಷಗಳ ಹಿಂದೆ ಡೇಟಿಂಗ್ ಆಪ್ ಒಂದರ ಮೂಲಕ ಇಬ್ಬರು ಪರಿಚಿತರಾದರು. ಪರಿಚಯವಾದ ಬಳಿಕ ಒಬ್ಬರ ಬಗ್ಗೆ ಒಬ್ಬರು ತಿಳಿದುಕೊಳ್ಳುತ್ತಾ ದಿನವೂ ಮಾತನಾಡುತ್ತಾ ಸ್ನೇಹವು ಬೆಳೆದು, ಸಲುಗೆಯು ಹೆಚ್ಚಾಗಿ, ಪ್ರೀತಿಯಾಗಿ ಹೊರಹೊಮ್ಮಿತು.
ಬಳಿಕ ಆದೇಶ ತನ್ನ ಪ್ರಿಯತಮೆಯೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳಲು ನಿರ್ಧರಿಸಿ ಸರಿಯಾಗಿ ಮಾತುಕತೆ ನಡೆಸಲಿಲ್ಲ. ಬೇಸತ್ತ ಅರ್ಚನಾ ದುಬೈನಿಂದ ಗೆಳೆಯನೊಂದಿಗೆ ಸರಿಯಾಗಿ ಪ್ರೀತಿಯಿಂದ ಮೊದಲಿನಂತೆ ಮಾತನಾಡಲು ಕೋರಮಂಗಲದ ನಾಲ್ಕನೇ ಹಂತದ ಮನೆಗೆ ಆಗಮಿಸಿದ್ದಳು.
ರಾತ್ರಿ ಪ್ರತಿಷ್ಠಿತ ಹೋಟೆಲ್ ಪಬ್ಗಳಲ್ಲಿ ಇಬ್ಬರು ಸುತ್ತಾಡಿ ಬಂದಿದ್ದು, ಮದುವೆಯ ವಿಚಾರವಾಗಿ ಕೋರಮಂಗಲದ ನಾಲ್ಕನೇ ಹಂತದಲ್ಲಿರುವ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ಎದ್ದಿತ್ತಂತೆ. ಮರುದಿನ ಬೆಳಿಗ್ಗೆ ಆಕೆಯು ಅಪಾರ್ಟ್ಮೆಂಟ್ನ ಅಂಗಳದಲ್ಲಿ ಶ-ವ-ವಾಗಿ ಪತ್ತೆಯಾಗಿದ್ದಾಳೆ.
ಅರ್ಚನಾಳ ಪಾಲಕರು ಕೋರಮಂಗಲದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ, ಮದುವೆಯ ವಿಚಾರವಾಗಿ ಎದ್ದಿದ್ದ ಗಲಾಟೆಯು ವಿಪರೀತಕ್ಕೆ ಹೋಗಿದ್ದರಿಂದ ಆದೇಶ್ ಅರ್ಚನಾಳನ್ನು ಹಿಂದಕ್ಕೆ ತಳ್ಳಿದ್ದಾನೆ. ಆದೇಶ್ ತಳ್ಳಿದ್ದಕ್ಕಾಗಿ ಅರ್ಚನಾ ಅಪಾರ್ಟ್ಮೆಂಟ್ನ ಎತ್ತರದ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಇದು ಆ-ತ್ಮ-ಹ-ತ್ಯೆಯಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು ಆದೇಶ್ ನನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.