ಈಗಿನ ಲೈಫ್ ಸ್ಟೈಲ್ ನಿಂದಾಗಿ ಆರೋಗ್ಯವಂತರು ಸಿಗೋದೇ ಕಷ್ಟ. ಕೆಲ ವರ್ಗದ ಜನರು ಆರೋಗ್ಯ ಕೆಟ್ಟ ಮೇಲೆ ಆಸ್ಪತ್ರೆ ಅದು ಇದು ಅಂತ ತಿರುಗಾಡುತ್ತಾರೆ. ಆದರೆ ಆರೋಗ್ಯ ಕೆಡದಂತೆ ಜೀವನ ಮಾಡಿದರೆ ಯಾವುದಕ್ಕೂ ಭಯ ಪಡಬೇಕಾಗಿಲ್ಲ. ಆದರೆ ಸಿನಿಮಾ ಇಂಡಸ್ಟ್ರಿ ಯವರ ಬದುಕು ಹಾಗಲ್ಲ, ಅವರು ಅವರ ಆರೋಗ್ಯದ ಬಗ್ಗೆ ಸಿಕ್ಕಾ ಪಟ್ಟೆ ಕಾಳಜಿ ವಹಿಸಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಅವರಿಗೆ ಸಿನಿಮಾದಲ್ಲಿ ಭವಿಷ್ಯ ಇರೋದಿಲ್ಲ. ನಾವು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಿರುತ್ತೇವೆ.
ಹೆಚ್ಚಿನ ನಟಿಮಣಿಯರು ಜಿಮ್ ಗಳಲ್ಲಿ ವರ್ಕೌಟ್ ಮಾಡುತ್ತಾ, ಯೋಗ ಮಾಡುತ್ತಾ ತಮ್ಮ ಆರೋಗ್ಯ ಹಾಗೂ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅವರ ವರ್ಕೌಟ್ ನೋಡಿದರೆ ನಿಜಕ್ಕೂ ಅಚ್ಚರಿ ಆಗಿಬಿಡುತ್ತದೆ.ಇನ್ನು ಕೆಲವರು ಜಿಮ್‌ಗಳಿಗೆ ಹೋಗೋ ಕ್ಕಿಂತ ಯೋಗ ಮಾಡುತ್ತಾ ಆರೋಗ್ಯ ಹಾಗೂ ಮನಸ್ಸು ಎರಡನ್ನೂ ಸ್ಥಿಮಿತದಲ್ಲಿ ಇಟ್ಟು ಕೊಂಡಿರುತ್ತಾರೆ. ಬಾಲಿವುಡ್ ನಲ್ಲಿ ಶಿಲ್ಪಾ ಶೆಟ್ಟಿ ಈ ಯೋಗಸನದಲ್ಲಿ ಟಾಪ್ ನಲ್ಲಿದ್ದಾರೆ. ಇದೇ ರೀತಿ ಕನ್ನಡದ ನಟಿಯೊಬ್ಬರು ಶ್ಯಾನ್ ಅದ್ಭುತವಾಗಿ ಯೋಗ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ಹೌದು, ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ ಅದೇ ರೀತಿ ಶ್ಯಾನೆ ಟಾಪಾಗವ್ಳೆ ಹಾಡಿನ ಮೂಲಕ ಪಡ್ಡೆ ಹುಡುಗರ ಹಾಟ್ ಫೆವರಿಟ್ ಹೀರೋಯಿನ್ ಆದ ಅದಿತಿ ಪ್ರಭುದೇವ್ ಅವರು ನೋಡುಗರ ಎದೆ ಬಡಿತ ಹೆಚ್ಚಿಸುವಂತ ಯೋಗಸಾನದ ವಿಡಿಯೋ ಶೇರ್ ಮಾಡಿದ್ದಾರೆ.
ಅದು ಅವರ ಹಳೆಯ ವಿಡಿಯೋ ಆಗಿದ್ದು ಅದು ಡಿಲೀಟ್ ಆಗಿದ್ದ ಕಾರಣ ಮತ್ತೆ ಅಪ್ಲೋಡ್ ಮಾಡಿ, ಸೋಶಿಯಲ್ ಮೀಡಿಯಾವನ್ನೇ ಅಲ್ಲಾಡಿಸಿ ಬಿಟ್ಟಿದ್ದಾರೆ. ಹೌದು ಸುಮಾರು ಹತ್ತು ನಿಮಿಷ ಕ್ಕೂ ಹೆಚ್ಚು ಇರುವ ಆ ವಿಡಿಯೋದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ಬೇರೆ ಬೇರೆ ಯೋಗ ಭಂಗಿಗಳನ್ನು ತನ್ನ ದೇಹದಲ್ಲಿ ಮೂಳೆಯೇ ಇಲ್ಲವೆನ್ನುವಂತೆ ಮಾಡಿದ್ದಾರೆ.ಅದೇ ರೀತಿ ವ್ಯಾಯಾಮ ಕೂಡ ಮಾಡಿದ್ದಾರೆ. ಈ ಮೂಲಕ ತನ್ನ ದೈಹಿಕ ಸೌಂದರ್ಯದ ಗುಟ್ಟನ್ನು ಅಭಿಮಾನಿಗಳಿಗೆ ಹೇಳಿದ್ದಾರೆ. ಅದಿತಿ ಪ್ರಭುದೇವ್ ಅವರು ಕಿರುತೆರೆ ಭೂಮಿಕೆ ಇಂದ ಹಿರಿತೆರೆಗೆ ಕಾಲಿಟ್ಟವರು. ಗುಂಡ್ಯಾನ ಹೆಂಡ್ತಿ ಧಾರವಾಹಿ ನಂತರ ಅವರು ನಾಗಕನ್ನಿಕೆ ಧಾರವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಾಗಿಣಿಯಾಗಿ ನಟಿಸಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಇವರು ಅಜೇಯ ರಾವ್ ರ `ಧೈರ್ಯಂ’ ಚಿತ್ರದಿಂದ ಸಿನಿಪಯಣ ಆರಂಭಿಸಿ, ನಂತರ ಬಜಾರ್, ಸಿಂಗ, ತೋತಾಪುರಿ,ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಈ ಚೆಂದುಳ್ಳಿ ತನ್ನ ಯೋಗಾಸನದ ವಿಡಿಯೋ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ಅದಿತಿ ಪ್ರಭುದೇವ್ ಅವರ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.