Aditi prabhudeva rain dance : ಚಂದನವನದ ನಟಿ ಅದಿತಿ ಪ್ರಭುದೇವರವರಿಗೆ ಸಿನಿಮಾರಂಗದಲ್ಲಿ ಬೇಡಿಕೆಯ ನಟಿ. ಕಿರುತೆರೆಯ ಮೂಲಕ ಸಿನಿ ಬದುಕು ಆರಂಭಿಸಿ ಇಂದು ಬೆಳ್ಳಿತೆರೆಯಲ್ಲಿ ತನ್ನ ನಟನೆಯ ಮೂಲಕವೇ ಮಿಂಚುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅದಿತಿ ಪ್ರಭುದೇವರವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅದಿತಿ ಪ್ರಭುದೇವರವರು ಸಿನಿಮಾದ ಶೂಟಿಂಗ್, ಸಿನಿಮಾ ಪ್ರಮೋಷನ್‌ಗಳು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತ್ರಿಬಲ್ ರೈಡಿಂಗ್ ಸಿನಿಮಾ ತೆರೆ ಕಂಡಿದೆ. ಇನ್ನು ಅದಿತಿ ಪ್ರಭುದೇವರವರ ನಟನೆಯ ಜಮಾಲಿ ಗುಡ್ಡ ಇದೇ ಡಿಸೆಂಬರ್ 30 ಕ್ಕೆ ತೆರೆಗಪ್ಪಳಿಸಲಿದೆ.
ಇತ್ತೀಚೆಗಷ್ಟೇ ನಟಿ ಅದಿತಿಯವರು ನವೆಂಬರ್ 28 ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅದಿತಿಯವರ ಮದುವೆಗೆ ತಾರೆಯರು ಹಾಗೂ ರಾಜಕೀಯ ಗಣ್ಯರು ಆಗಮಿಸಿ ಶುಭಾಶಯ ತಿಳಿಸಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ತಮ್ಮನ ಮದುವೆಯಾಗಿ ಅದಿತಿ ಭಾಗಿಯಾಗಿದ್ದರು.

ಈ ಮದುವೆಯಲ್ಲಿ ಭಾಗಿಯಾದ ಅದಿತಿ ಪ್ರಭುದೇವರವರ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅದಿತಿ ಪ್ರಭುದೇವರವರು ತನ್ನ ತಮ್ಮ ಭರತ್ ಮದುವೆಯನ್ನು ಹಳ್ಳಿಯಲ್ಲೇ ಮಾಡಿದ್ದರು. ಈ ಮದುವೆಯಲ್ಲಿ ಅರಶಿಣ ಶಾಸ್ತ್ರಕ್ಕೆ ಸಿದ್ಧತೆ ಮಾಡಿರುವ ಅದಿತಿ ಮನೆ ಮಂದಿ ಮುಖಕ್ಕೆಲ್ಲಾ ಅರಶಿಣ ಹಚ್ಚಿದ್ದರು. ಇತ್ತ ಅದಿತಿ ಪತಿದೇವರು ಯಶಸ್ ಮಾತ್ರ ತನ್ನ ಮುದ್ದಿನ ಹೆಂಡತಿ ಮುಖಕ್ಕೆ ಅರಶಿಣ ಹಚ್ಚಿದ್ದರು.
ಅಷ್ಟೇ ಅಲ್ಲದೇ ವೀರಭದ್ರ ಸ್ವಾಮಿ ಗುಗ್ಗಳ ಪೂಜೆ ಮಾಡಿದ್ದರು. ಈ ಪೂಜೆಯಲ್ಲಿ ನವ ದಂಪತಿಗಳಾದ ಅದಿತಿ ಹಾಗು ಯಶಸ್ ಭಾಗಿಯಾಗಿ ಬೆಂಕಿಯ ಕಳಸ ಹೊತ್ತಿದ್ದರು. ತಮ್ಮನ ಮದುವೆಯಲ್ಲಿ ಅದಿತಿ ದಂಪತಿಗಳು ಭಾಗಿಯಾಗಿದ್ದು, ಈ ವಿಡಿಯೋ ವೈರಲ್ ಆಗಿ ದಿನದಲ್ಲಿ ಮಿಲಿಯನ್ ಗಟ್ಟಲೇ ವ್ಯೂಸ್ ಕಂಡಿತ್ತು.
ನಟಿ ಅದಿತಿ ಪ್ರಭುದೇವರವರ ‘ಗುಂಡ್ಯಾನ ಹೆಂಡತಿ’ ಎಂಬ ಕಿರುತೆರೆ ಸೀರಿಯಲ್ ನಿಂದ ನಟನೆಯ ಆರಂಭಿಸಿದ ಇವರು ಆದಾದ ನಂತರ ಸಿನಿ ಲೋಕಕ್ಕೆ ಕಾಲಿಟ್ಟ ನಂತರವೂ ನಾಗಕನ್ನಿಕೆ’ ಕಿರುತೆರೆ ಸಿರೀಯಲ್ ನಲ್ಲಿ ಶಿವಾನಿ ಪಾತ್ರ ಮಾಡಿ ಪ್ರೇಕ್ಷಕರ ಮನ ಗೆದ್ದರು. ಶಿವಾನಿ ಪಾತ್ರದ ಮೂಲಕ ಜನ ಮೆಚ್ಚುಗೆ ಗಳಿಸಿದರು.
ತದನಂತರದಲ್ಲಿ ಅಜೇಯ ರಾವ್‌ರ `ಧೈರ್ಯಂ’ ಚಿತ್ರದಿಂದ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. ಸಿನಿರಂಗದಲ್ಲಿ ಇವರ ಬ್ಯೂಟಿ ಹಾಗೂ ನಟನೆಗೆ ಸಖತ್ ಫಿದಾ ಆಗಿದ್ದಾರೆ ಅಭಿಮಾನಿಗಳು. ನಂತರ ಬಜಾರ್, ಸಿಂಗ, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿಂಗ ಸಿನಿಮಾದಲ್ಲಿ ಚಿರು ಜೊತೆ ನಟಿಸಿದ್ದ ಅದಿತಿ ಪ್ರಭುದೇವ, ಶಾನೆ ಟಾಪ್ ಆಗವಳೇ ಎಂಬ ಹಾಡು ತುಂಬಾ ಹಿಟ್ ಆಗಿದೆ. ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟಿ ಅದಿತಿ ಪ್ರಭುದೇವರವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.
https://youtu.be/SxKQUxCMDJw
ಈ ಹಿಂದೆಯಷ್ಟೇ ಸ್ಟಾರ್ ಸುವರ್ಣ ವಾಹಿನಿಯ ಡಾನ್ಸ್ ಡಾನ್ಸ್ ರಿಯಾಲಿಟಿ ಶೋನಲ್ಲಿ ನಟಿ ಅದಿತಿ ಪ್ರಭುದೇವರವರು ಅತಿಥಿಯಾಗಿ ಭಾಗಿಯಾಗಿದ್ದರು. ಈ ರಿಯಾಲಿಟಿ ಶೋ ನಿರೂಪಣೆಯ ಜವಾಬ್ದಾರಿಯನ್ನು ಶೈನ್ ಶೆಟ್ಟಿ ವಹಿಸಿದ್ದರು. ತೀರ್ಪುಗಾರರಾಗಿ ನಟಿ ಹರಿಪ್ರಿಯಾ, ನಟ ಪ್ರಜ್ವಲ್ ದೇವರಾಜ್ ಹಾಗೂ ಮಾಸ್ಟರ್ ಹರ್ಷ ತೀರ್ಪುಗಾರರಾಗಿದ್ದರು.
ಅತಿಥಿಯಾಗಿ ಶೋಗೆ ಬಂದಿದ್ದ ಅದಿತಿ ಪ್ರಭುದೇವರವರು ಕೆಂಪು ಬಣ್ಣದ ಸೀರೆ ಉಟ್ಟು ಹಾಟ್ ಆಗಿ ಸ್ಟೆಪ್ ಹಾಕಿದ್ದರು. ವೇದಿಕೆಯ ಮೇಲೆ ಮಳೆಯ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಹೀಗಾಗಿ ನಟಿ ಅದಿತಿಯವರು ಮೈಯನ್ನೆಲ್ಲಾ ಒದ್ದೆ ಮಾಡಿಕೊಂಡು ಡಾನ್ಸ್ ಮಾಡಿದ್ದರು. ನಟಿ ಅದಿತಿ ಪ್ರಭುದೇವರವರ ಹಾಟ್ ಡಾನ್ಸ್ ನೋಡಿ ಹರಿಪ್ರಿಯಾ ಹಾಗೂ ಪ್ರಜ್ವಲ್ ದೇವರಾಜ್ ಅವರು ಶಾಕ್ ಆಗಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು