ಬೆಂಗಳೂರು ಹೈಟೆಕ್ ವೇ-ಶ್ಯಾವಾಟಿಕೆಯಲ್ಲಿ ನಟಿ ಯಮುನಾ ಹೆಸರು ಕೇಳಿಬಂದಿತ್ತು! ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಿ ಗೆದ್ದ ನಟಿ ಹೇಳಿದ್ದೇನು ನೋಡಿ!!

ಸಿನಿಮಾರಂಗ ಎಂದ ಮೇಲೆ ನಟ ನಟಿಯರ ಬದುಕು ಸಾಮಾನ್ಯರ ಬದುಕಿನಂತೆ ಇರುವುದಿಲ್ಲ. ಇಲ್ಲಿ ಗೊತ್ತೋ ಗೊತ್ತಿಲ್ಲದೇನೋ ಒಂದಷ್ಟು ಆರೋಪಗಳು ಕೇಳಿ ಬರುತ್ತವೆ. ಆ ಆರೋಪ ಗಳನ್ನೆಲ್ಲವನ್ನು ಎದುರಿಸಿ ಮತ್ತೆ ಈ ಬಣ್ಣದ ಬದುಕಿನಲ್ಲಿ ಬದುಕಬೇಕಾಗುತ್ತದೆ. ಈ ವಿಚಾರದಲ್ಲಿ ಬಂದರೆ ನಟಿ ಯಮುನಾರವರ ಬದುಕಿನಲ್ಲಿ ಆರೋಪಗಳಿಗೆ ಗುರಿಯಾಗಬೇಕಾಗಿತ್ತು.

ಹೌದು, ಯಮುನಾ ಕನ್ನಡ ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ಯಮುನಾ 1991 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೋಡದ ಮರೆಯಲ್ಲಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಆದಾದ ಬಳಿಕ ಮಾವನಿಗೆ ತಕ್ಕ ಅಳಿಯ, ಹೆಂಡತೀರೆ ಹುಷಾರು, ಕೆರಳಿದ ಸರ್ಪ, ಚಿನ್ನ, ಪ್ರೇಮಗೀತೆ, ಹಲೋ ಯಮ, ಶ್ರೀಮಂಜುನಾಥ, ಹಾಗೇ ಸುಮ್ಮನೆ, ನಾರಿಯ ಸೀರೆ ಕದ್ದ, ಕಂಠೀರವ, ಶಂಭೋ ಶಂಕರ, ದಿಲ್ ರಂಗೀಲ, ರಾಜ ಹಂಸ ಮುಂತಾದ ಸಿನಿಮಾಗಳಲ್ಲಿ ತನ್ನ ನಟನೆಯ ಮೂಲಕವೇ ಮೋಡಿ ಮಾಡಿದ್ದರು.

ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಅಲ್ಲಿಯೂ ಮಿಂಚಿದ್ದರು. ಹೀಗಿರುವಾಗ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರವಾದ ಯುಮುನಾರವರು ಅದಾದ ಕೆಲವು ವರ್ಷಗಳ ನಂತರ ಕನ್ನಡ ಮತ್ತು ತೆಲಗು ಸೀರಿಯಲ್ ಗಳಲ್ಲಿ ಕಾಣಿಸಿಕೊಂಡರು. ಬಣ್ಣದ ಬದುಕಿನಲ್ಲಿ ಪ್ರಖ್ಯಾತಿ ಗಳಿಸಿದ್ದ ನಟಿ ಯಮುನಾರವರನ್ನು 2011 ರಲ್ಲಿ ಇವರು ಒಂದು ಪಂಚತಾರಾ ಹೊಟೇಲ್ ನಲ್ಲಿ ವೇ-ಶ್ಯವಾಟಿಕೆ ಜಾ-ಲವನ್ನು ನೆಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ನಂತರದ ವಿಚಾರಣೆ ಬಳಿಕ ಕೋರ್ಟ್ ಇದೊಂದು ನಿರಾಧಾರ ಆರೋಪ ಎಂದು ಕೇಸ್ ನಿಂದ ಖುಲಾಸೆಗೊಳಿಸಿತು.

ಆ ಆರೋಪ ನಟಿ ಯಮುನಾಳ ಬದುಕಿಗೆ ಬಹುದೊಡ್ಡ ಮಟ್ಟಿಗೆ ಹೊಡೆತ ನೀಡಿತ್ತು. ಹೌದು ಜಾಮೀನಿನಿಂದ ಹೊರ ಬಂದ ಬಳಿಕ ಯಮುನಾ ಅನುಭವಿಸಿದ ಕಷ್ಟವಿದೆಯಲ್ಲ ಹೇಳಲು ಅಸಾಧ್ಯ. ಈ ಆರೋಪದ ಬಳಿಕ ಕುಟುಂಬದವರು ಕೂಡ ಈಕೆಯನ್ನು ಅನುಮಾನದಿಂದ ನೋಡಲು ಆರಂಭಿಸಿದ್ದರು. ಈ ಎಲ್ಲದರಿಂದಲೂ ದೂರ ಇರುವ ಸಲುವಾಗಿ ತಮಿಳು ನಾಡಿಗೆ ಹೊರಟು ಬಿಟ್ಟಿದ್ದರು. ಸಿನಿಮಾರಂಗದಲ್ಲಿ ನಟಿ ಯಮುನಾ ಪಾಲಿಗೆ ಅವಕಾಶಗಳೇ ಸಿಗುವುದಿಲ್ಲ.

ಮನೆಯವರೆಲ್ಲರೂ ನಟಿ ಯಮುನಾನವರು ಅನುಮಾನದಲ್ಲಿ ನೋಡಲು ಶುರು ಮಾಡಿದ್ದರು. ಕೊನೆಗೆ ಎಲ್ಲವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಆ-ತ್ಮಹ-ತ್ಯೆ ನಿರ್ಧಾರವನ್ನು ಮಾಡಿಬಿಟ್ಟಿದ್ದರು. ಅಂದು ಬದುಕಿನಲ್ಲಿ ನಡೆದ ಘಟನೆಗಳಿಂದ ನೊಂದಿರುವ ಯಮುನಾರವರನ್ನು ಇವತ್ತಿಗೂ ಸೋಶಿಯಲ್ ಮೀಡಿಯಾ ಮಂದಿ ಬಿಡುತ್ತಿಲ್ಲ. ಈ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಈ ಘಟನೆಯಲ್ಲಿ ನಾನು ನಿರಪರಾಧಿ ಎಂದು ಸಾಬೀತು ಮಾಡಿದ್ದರೂ, ಜನರು ಪದೆ ಪದೇ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದಿದ್ದಾರೆ.

” ಎಲ್ಲರಿಗೂ ನಮಸ್ಕಾರ. ಜೀವನದಲ್ಲಿ ನನ್ನನ್ನು ನಾನು ಎಷ್ಟು ಮೋಟಿವೇಟ್ ಮಾಡಿಕೊಂಡರೂ ಕಾಡುತ್ತಿರುವುದು ಒಂದೇ ನೋವು. ಇಷ್ಟು ವರ್ಷವಾದರೂ ಆ ನೋವು ನನ್ನಲ್ಲಿ ಉಳಿದು ಬಿಟ್ಟಿದೆ. ಪದೇ ಪದೇ ನೋವಾಗಲು ಕಾರಣ ಸೋಷಿಯಲ್ ಮೀಡಿಯಾ. ಬಹಳ ವರ್ಷಗಳ ಹಿಂದೆಯೇ ದೊಡ್ಡ ಸಮಸ್ಯೆಯೊಂದನ್ನು ಎದುರಿಸಿ ಅದರಿಂದ ಹೊರ ಬಂದು ನಿಶ್ಚಿಂತೆಯಿಂದ ಜೀವನ ನಡೆಸುತ್ತಿರುವೆ.

ಆ ಸಮಸ್ಯೆಯಲ್ಲಿ ಹೇಗೆ ಸಿಲುಕಿಕೊಂಡೆ ಎಂದು ಈಗಾಗಲೇ ಅನೇಕ ಸಂದರ್ಶನದಲ್ಲಿ ಹೇಳಿಕೊಂಡು, ನಾನಾ ರೀತಿಯಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಸ್ವತಃ ಕೋರ್ಟ್ ಕೂಡ ನನಗೆ ಕ್ಲೀನ್ ಚಿಟ್ ಕೊಟ್ಟಿದೆ. ನನ್ನನ್ನು ನ್ಯಾಯ ಗೆಲ್ಲಿಸಿದೆ. ನ್ಯಾಯಯುತವಾಗಿ ನಾನು ಗೆಲ್ಲುವು ಸಾಧಿಸಿರುವೆ. ಆದರೆ ಸಾಮಾಜಿಕ ಜಾಲತಾಣವನ್ನು ನಾನು ಕಂಟ್ರೋಲ್ ಮಾಡಲು ಆಗುತ್ತಿಲ್ಲ.

ಇಂದಿಗೂ ಅ ಘಟನೆ ಬಗ್ಗೆ ವಿವಿಧ ರೀತಿಯಲ್ಲಿ ಥಂಬ್‌ನೇಲ್‌ನ ಸೃಷ್ಟಿಸಿ, ಸಂಬಂಧ ಇಲ್ಲದ ರೀತಿಯಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅದಕ್ಕೆ ಸಂಬಂಧ ಪಟ್ಟ ಯಾವುದೇ ವಿಡಿಯೋ ನೋಡಲ್ಲ. ಅದರಲ್ಲಿ ಏನೋ ಇದೆ ಎಂದು ಜನರು ನೋಡಬಹುದು ಆದರೆ ನಾನು ಮುಟ್ಟುವುದಿಲ್ಲ. ವಿಡಿಯೋದಲ್ಲಿ ಏನೂ ಇಲ್ಲವಾದರೂ, ಥಂಬ್‌ನೇಲ್ಸ್‌ ಮಾತ್ರ ನನಗೆ ತುಂಬಾ ನೋವು ಕೊಡುತ್ತಿದೆ. ನಾನು ಕೂಡ ಮನುಷ್ಯಳೇ ಅಲ್ವಾ? ಆ ಥಂಬ್‌ನೇಲ್ಸ್‌ ನೋಡಿದರೆ ಏನೋ ಗೊತ್ತಿಲ್ಲದ ನೋವು ಅಗುತ್ತದೆ. ನಾನು ಸತ್ತರೂ ಜನರು ಆ ಒಂದು ಘಟನೆಯನ್ನು ಬಿಡುವುದಿಲ್ಲ ಅನಿಸುತ್ತದೆ,’ ಎಂದು ಮನಸ್ಸಿನ ನೋವನ್ನು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *