ನಿರ್ದೇಶಕ ಸೀಮನ್ ವಿರುದ್ಧ ಆ-ರೋಪ ಮಾಡಿದ ನಟಿ ವಿಜಯಲಕ್ಷ್ಮೀ, ವಿಚಾರಣೆಗೆ ಹಾಜರಾಗಲಿರುವ ಸೀಮನ್

ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವಿಜಯಲಕ್ಷ್ಮಿ (Vijayalakshmi) ಅವರು ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳಿಂದ ನಟಿ ವಿಜಯಲಕ್ಷ್ಮೀ ರಾಜಕಾರಣಿ, ನಟ, ನಿರ್ದೇಶಕ ಸೀಮನ್​ (Siman) ವಿರುದ್ಧ ಏಳು ಬಾರಿ ಗ-ರ್ಭಪಾತ ಮಾಡಿಸಿರುವ ಗಂ-ಭೀರ ಆ-ರೋಪ ಮಾಡಿದ್ದಾರೆ.

ಈ ರೀತಿಯಲ್ಲಿ ಆ-ರೋಪ ಮಾಡಿ ಇದಾಗಲೇ ನಟಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ), ನಟ ಮತ್ತು ನಿರ್ದೇಶಕ ಸೀಮನ್​ ಅವರು ಮಂಗಳವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದರು. ಈ ವೇಳೆಯಲ್ಲಿ ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ (Veeralakshmi) ಅವರು ನಟಿಗೆ ಸಹಕಾರ ನೀಡಿದ್ದು, ನಟಿಯ ಪರವಾಗಿ ನಿಂತಿದ್ದರು.

ಈ ಬಗ್ಗೆ ಮಾತನಾಡಿದ್ದ ವೀರಲಕ್ಷ್ಮಿ, “ಕೆಲವು ವರ್ಷಗಳಿಂದ ನಾನು ವಿಜಯಲಕ್ಷ್ಮಿ ಪರ ನಿಂತು ಸೀಮನ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗ ತಮಿಳು ನಾಡು ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇರಿಸಿದ್ದೇನೆ. ಆತನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು” ಎಂದು ಹೇಳಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ್ದ ವಿಜಯ ಲಕ್ಷ್ಮಿಯವರು, “ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದರು. ಅವರ ಜೊತೆ ತಮಗೆ ಮದುವೆಯಾಗಿದ್ದು, ಏಳು ಬಾರಿ ಗ-ರ್ಭಪಾತ ಮಾಡಿಸಿದ್ದಾರೆ. 2008ರಲ್ಲಿ ಸೀಮನ್ ಹಾಗೂ ತಮಗೆ ಮದುವೆಯಾಗಿದೆ. ಸೀಮನ್ ತಮಗೆ ಮೋಸ ಮಾಡಿದಲ್ಲದೆ ಅವರ ಕಡೆಯವರಿಂದ ಬೆ-ದರಿಕೆ ಹಾಕಲಾಗುತ್ತಿದೆ”.

“ನಾನು ಸೀಮನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ಮಾಡುತ್ತಿಲ್ಲ ಆದರೆ ಅವರ ಕಡೆಯವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆ-ದರಿಕೆ ಬಂದರೂ ಹಿಂದೆ ಸರಿಯುವುದಿಲ್ಲ” ಎಂದಿದ್ದರು. ಸದ್ಯಕ್ಕೆ ನಟಿ ವಿಜಯಲಕ್ಷ್ಮಿಯವರು ಸೀಮನ್ ವಿರುದ್ಧ ಮಾಡಿರುವ ಆರೋಪವು ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *