16 ನೇ ವಯಸ್ಸಿಗೆ ಮದುವೆ, 17 ಕ್ಕೆ ಅವಳಿ ಮಕ್ಕಳು, 18 ಕ್ಕೆ ಡೈವೋರ್ಸ್ ಆದರೆ ಇದೀಗ ಈ ನಟಿಯ ಕ ಬದುಕು ಹೇಗಿದೆ ನೋಡಿ ಅಚ್ಚರಿ ಪಡುತ್ತೀರಿ!!!

ಸಿನಿಮಾರಂಗದಲ್ಲಿರುವ ನಟ ನಟಿಯರು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತಿದ್ದರೂ ಕೂಡ ಕೆಲವೊಮ್ಮೆ ವೈಯಕ್ತಿಕ ಜೀವನ (Personal life) ದಲ್ಲಿ ಬದುಕಿನ ಬಗ್ಗೆ ಹೇಳಿಕೊಳ್ಳುವುದಿದೆ. ಇದೀಗ ಕಳೆದ 38 ವರ್ಷಗಳಿಂದ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ ಊರ್ವಸಿ ಧೋಲಕಿಯಾ (Urvashi Dholakia) ಅವರು ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು, ಊರ್ವಶಿ ಧೋಲಕಿಯಾರವರು ‘ಕೋಮೊಲಿಕಾ’ (Komolika) ಪಾತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ಇವರು, ದೇಖ್ ಭಾಯಿ ದೇಖ್, ಘರ್ ಏಕ್ ಮಂದೀರ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಿಂದಿ ಬಿಗ್​ಬಾಸ್ ಸೀಸನ್ -6 (Bigg Boss hindi sisan -6) ರಲ್ಲಿ ಸ್ಪರ್ಧಿಸಿ ವಿಜೇತರಾಗಿರುವ ಊರ್ವಸಿ ಧೋಲಕೀಯಾ ಅವರು ಇದೀಗ ಖ್ಯಾತ ಯೂಟ್ಯೂಬರ್ ಸಿದ್ಧಾರ್ಥ್ ಕಣ್ಣನ್​ (Siddarth Kannan) ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೈಯಕ್ತಿಕಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ನಟಿ ಊರ್ವಶಿ ಧೋಲಕಿಯಾ (Urvashi Dholakia) ರವರು, “ಆರನೇ ವಯಸ್ಸಿನಿಂದ ಕೆಲಸ ಮಾಡಲು ಶುರುಮಾಡಿದೆ. ನಾನು 16ನೇ ವಯಸ್ಸಿಗೆ ಮದುವೆಯಾದೆ. 17ನೇ ವಯಸ್ಸಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದೆ. 18 ವಯಸ್ಸಿಗೆ ಡಿವೋರ್ಸ್​ ಪಡೆದುಕೊಂಡೆ. ನನ್ನ ಮಕ್ಕಳು ಇದುವರೆಗೂ ಅಪ್ಪನ ಬಗ್ಗೆ ಕೇಳಿಲ್ಲ. ಮಾಜಿ ಪತಿ ಮಕ್ಕಳ ಬಗ್ಗೆ ಅಂದು ಸ್ವಲ್ಪವೂ ಕಾಳಜಿ ವಹಿಸಲಿಲ್ಲ.

16ನೇ ವಯಸ್ಸಿನಲ್ಲಿ ನಾನು ಗಾಢವಾದ ಕಲ್ಪನೆಯ ಪ್ರೀತಿಯಲ್ಲಿದ್ದೆ. ಅಂದಿನ ದಿನಮಾನದಲ್ಲಿ ಹೆಣ್ಮಕ್ಕಳಿಗೆ ಮದುವೆ ಅನ್ನೋದು ದೊಡ್ಡದಾಗಿತ್ತು. ನನ್ನ ತಾಯಿ ಹೇಳಿದರು, ನೀನು ಏನ್ ಮಾಡ್ತೀಯೋ ಗೊತ್ತಿಲ್ಲ. ಮೊದಲು ಮದುವೆ ಆಗಬೇಕು ಎಂದು ಹೇಳಿದ್ದರು. ಆಗ ನನಗೆ ವಯಸ್ಸು 16. ನನಗೆ ಪ್ರಬುದ್ಧತೆ ಇರಲಿಲ್ಲ. ನನ್ನ ಮಾಜಿ ಪತಿಯ ಬಗ್ಗೆ ಮದುವೆಗೂ ಮೊದಲು ಅಂದರೆ ಒಂದೂವರೆ ವರ್ಷಗಳ ಹಿಂದಷ್ಟೇ ನನಗೆ ತಿಳಿದಿತ್ತು.

ಮದುವೆ ನಂತರ ನನಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ. ಸಿಂಡ್ರೆಲ್ಲಾ ರೀತಿಯಲ್ಲಿ ಬದುಕಬೇಕು ಎಂದು ಕನಸು ಕಂಡಿದ್ದೆ. 16ನೇ ವಯಸ್ಸಿಗೆ ಮದುವೆ ಮಾಡಿಬಿಟ್ಟರು. 17ನೇ ವಯಸ್ಸಿಗೆ ಇಬ್ಬರು ಅವಳಿ ಮಕ್ಕಳು ಹಾಗೆಯೇ 18 ತುಂಬುವಷ್ಟರಲ್ಲಿ ನನಗೆ ಡಿವೋರ್ಸ್ ಆಯಿತು. ಅವರು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ನಮ್ಮಿಬ್ಬರ ಪ್ರೀತಿ ಅಲ್ಲಿಗೆ ಕೊನೆಗೊಂಡಿತ್ತು. ಆ ಸಮಯದಲ್ಲಿ ನನಗೆ ಹೆತ್ತವರಿಗಿಂತ ಹೆಚ್ಚಾಗಿ ಯಾರೂ ಬೆಂಬಲಿಸುವುದಿಲ್ಲ. ಆದರೆ ನನಗೆ ಅವರಿಗೆ ಹೊರೆಯಾಗಿರಲು ಇಷ್ಟ ಇರಲಿಲ್ಲ.

ನಾನು ಕೆಲಸಕ್ಕೆ ಮತ್ತೆ ಮರಳಿದೆ. ಈ ವೇಳೆ ಜನ ನನ್ನಿಂದ ಲಾಭ ಪಡೆಯಲು ಯತ್ನಿಸಿದರು. ಡಿ-ವೋರ್ಸ್ ಪಡೆದ ಬಳಿಕ ನಾನು ಮಾಜಿ ಪತಿಯೊಂದಿಗೆ ಯಾವತ್ತೂ ಮಾತನಾಡಲಿಲ್ಲ. ನನ್ನ ಮಕ್ಕಳಾದ ಧಂಜಾಜ್ ಮತ್ತು ಸಾಗರ್ ಧೋಲಾಕಿಯಾ ಕೂಡ ತಮ್ಮ ತಂದೆಯನ್ನು ಭೇಟಿಯಾಗಲಿಲ್ಲ. ಮಕ್ಕಳಿಗೆ ಅಪ್ಪನ ಬಗ್ಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಅವರಿಗೆ ನಾನು ಹಲವು ಬಾರಿ ಹೇಳಲು ಪ್ರಯತ್ನಿಸಿದ್ದೆ. ಆದರೆ ಅವರು ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ” ಎಂದಿದ್ದಾರೆ.

Leave a Reply

Your email address will not be published. Required fields are marked *