ಹೀರೋ ಗಳು ನನ್ನ ಜೋತೆ ರೊಮ್ಯಾಂಟಿಕ್​ ದೃಶ್ಯಗಳಲ್ಲಿ ಅಭಿನಯಿಸುವಾಗ ತುಂಬಾ ಕಷ್ಟ ಪಡುತ್ತಾರೆ ಎಂದು ಬೋಲ್ಡ್ ಮಾತನಾಡಿದ ನಟಿ ತಮನ್ನಾ ಭಾಟಿಯಾ, ನಟಿಯ ಹೇಳಿಕೆ ವೈರಲ್!

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ತಮನ್ನಾ (Tamannaha) ಕೂಡ ಒಬ್ಬರು. ದಕ್ಷಿಣ ಭಾರತ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿರುವ ತಮನ್ನಾನವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ತೆಲುಗು (Telug), ತಮಿಳು (Tamil), ಹಿಂದಿ (Hindi), ಕನ್ನಡ (Kannada) ಚಿತ್ರಗಳಲ್ಲಿ ನಟಿಸಿ ಸಿನಿ ಪ್ರಿಯರ ಫೇವರಿಟ್ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಅದಲ್ಲದೇ, ನಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳದೆ, ಐಟಂ ಹಾಡು (Item Song) ಗಳಲ್ಲಿಯೂ ಸೊಂಟ ಬಳುಕಿಸುತ್ತ ಪಡ್ಡೆ ಹೈಕಳ ನಿದ್ದೆ ಕದಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಇದೀಗ ಸಿನಿಮಾಗಳ ಕುರಿತಾಗಿ ಬೋಲ್ಡ್ ಹೇಳಿಕೆಯನ್ನು ನೀಡಿದ್ದು, ನಟಿಯ ಈ ಹೇಳಿಕೆಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಿನಿಮಾಗಳಲ್ಲಿನ ಇಂಟಿಮೇಟ್​ ದೃಶ್ಯಗಳ ಶೂಟಿಂಗ್ ಕುರಿತಂತೆ ಸಂದರ್ಶನವೊಂದರಲ್ಲಿ ಬೋಲ್ಡ್​ ಆಗಿ ಹೇಳಿಕೆ ನೀಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ನಟಿ ತಮನ್ನಾ ಭಾಟಿಯಾ, “ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಶೂಟಿಂಗ್​ ಸಂದರ್ಭದ ವೇಳೆ ಸಹ ನಟರ ಭಾವನೆಗಳ ಬಗ್ಗೆ ಮಾತನಾಡಿದ ತಮನ್ನಾ, “ನಟರು ಇಂಟಿಮೇಟ್ ದೃಶ್ಯಗಳನ್ನು ಮಾಡಲು ಹೆಚ್ಚು ಇಷ್ಟಪಡುವುದಿಲ್ಲ. ಹಲವರು ರೊಮ್ಯಾಂಟಿಕ್​ ದೃಶ್ಯಗಳನ್ನು ಶೂಟ್​ ಮಾಡುವ ವೇಳೆ ಹೀರೋಗಳು ಇಷ್ಟಪಡ್ತಾರೆ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ತಪ್ಪು. ಹೀರೋಗಳು ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಲು ಹೆಚ್ಚು ಇಷ್ಟಪಡುವುದಿಲ್ಲ” ಎಂದಿದ್ದಾರೆ.

“ಎಲ್ಲರ ಎದುರು ರೊಮ್ಯಾಂಟಿಕ್​ ಸೀನ್ಸ್ ಮಾಡುವುದು ಬಹಳ ಕಷ್ಟ. ಅದು ನಮಗೆ ಮಾತ್ರವಲ್ಲ, ಹೀರೋಗಳಿಗೂ ಬಹಳ ಕಷ್ಟ ಆಗುತ್ತೆ. ಇನ್ನು, ನಾಚಿಕೆ-ಮುಜುಗರ ಹೊಂದಿರುವ ಕೆಲ ನಟರಾದರೇ ಮಾತನಾಡಲು ಕೂಡ ಕಷ್ಟ ಪಡುತ್ತಾರೆ. ಕೆಲ ನಟರು ರೊಮ್ಯಾಟಿಂಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಕೂಡ ಇಷ್ಟ ಪಡುವುದಿಲ್ಲ” ಎಂದಿದ್ದಾರೆ. ನಟಿಯ ಈ ಬೋಲ್ಡ್ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

Leave a Reply

Your email address will not be published. Required fields are marked *