ಬೋಲ್ಡ್ ಫೋಟೋ ಹಂಚಿಕೊಂಡ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಫೋಟೋ ನೋಡಿ ನೆಟ್ಟಿಗರು ಫಿದಾ

ತಮನ್ನಾ ಭಾಟಿಯಾ (Tammanna Bhatiya) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತವಾಗಿದೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡು ಬಾಲಿವುಡ್​ (Bollywood) ಎಂಟ್ರಿ ಕೊಟ್ಟು, ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದಲ್ಲ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ನಟಿ ತಮನ್ನಾ ಇದೀಗ ತಮ್ಮ ಉಡುಗೆ ವಿಚಾರವಾಗಿ ಸುದ್ದಿಯಾಗಿದ್ದಾರೆ.

ತಮನ್ನಾ ಭಾಟಿಯಾ ಅವರು ‘ಜೈಲರ್’ (Jailer) ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದು ಇದೀಗ ಬೋಲ್ಡ್​ ಆಗಿ ಫೋಟೋಶೂಟ್​ (Photo shoot) ಮಾಡಿಸಿ ಗಮನ ಸೆಳೆಯುತ್ತಿದ್ದಾರೆ. ಹೌದು, ಬಿಳಿ ಬಣ್ಣದ ಅಂಗಿ ತೊಟ್ಟು ಅದಕ್ಕೆ ಗ್ರೇ ಬಣ್ಣದ ಪ್ಯಾಂಟ್ ಹಾಕಿದ್ದಾರೆ. ಈ ಫೋಟೋದಲ್ಲಿ ನಟಿಯು ತನ್ನ ಎದೆಯ ಭಾಗವನ್ನು ಎಕ್ಸ್ ಪೋಸ್ ಮಾಡಿದ್ದಾರೆ.

ಸಿಂಪಲ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ನಟಿಯ ಈ ಫೋಟೋಗೆ ಆರು ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ. . ಅದಲ್ಲದೆ, ತಮನ್ನಾ ಅವರ ಬಾಯ್​​ಫ್ರೆಂಡ್, ವಿಜಯ್ ವರ್ಮಾ ಅವರು ಮಿಲ್ಕಿ ಬ್ಯೂಟಿ ಫೋಟೋ ಶೇರ್ ಮಾಡಿ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ್ದು, ಮಳೆಗಾಲದಲ್ಲಿ ಬಿಸಿ ಅಲೆಯೇ? ಎಂದು ಕೇಳಿದ್ದಾರೆ.

ಗರ್ಲ್​ಫ್ರೆಂಡ್ ಪೋಸ್ಟ್​ಗೆ ಕಮೆಂಟ್ ಮಾಡಿದ್ದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಂದೆರಡು ದಿನಗಳಿಂದ ನಟಿ ತಮನ್ನಾ ಉಂಗುರದ ವಿಚಾರವಾಗಿ ಸುದ್ದಿಯಾಗಿದ್ದರು. ತಮನ್ನಾ ಫೋಟೋವೊಂದನ್ನು ಶೇರ್ ಮಾಡಿದ್ದು ಅದರಲ್ಲಿ ಆಕೆ ಧರಿಸಿದ್ದ ಡೈಮಂಡ್ ಉಂಗುರ (Diamond Ring) ದ ವಸ್ತು ಎಲ್ಲರ ಗಮನ ಸೆಳೆದಿತ್ತು.

ಅದು ದುಬಾರಿ ಬೆಲೆಯ ವಜ್ರದುಂಗುರ, ಅದನ್ನು ಉಪಾಸನಾ (Upasanaa) ನೀಡಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿತ್ತು. ಕೊನೆಗೂ ಆ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ. ‘ಇಂಥದ್ದೊಂದು ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಬೇಸರವಾಗುತ್ತಿದೆ. ಅದು ವಜ್ರದ ಉಂಗುರ ಅಲ್ಲ, ಬದಲಾಗಿ ಅದು ಬಾಟಲ್ ಓಪನರ್. ಈ ಹಿಂದೆ ಓಪನರ್ ಇಟ್ಟುಕೊಂಡು ಶೂಟ್ ಮಾಡಿದ್ದೆವು. ಅದರ ಬೆಲೆ ನೀವೇ ಹೇಳಿ’ ಎಂದಿದ್ದಾರೆ ನಟಿ ತಮನ್ನಾ.

ಸದ್ಯಕ್ಕೆ ನಟಿ ತಮನ್ನಾ ಸಿನಿ ಕೆರಿಯರ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳಿದ್ದು ಜೀ ಕರ್ದಾ’ (Zee Karda) ಎಂಬ ವೆಬ್ ಸಿರೀಸ್ ನಲ್ಲೂ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ (Mega star Chiranjeevi) ಜೊತೆ ‘ಭೋಲಾ ಶಂಕರ್’ (Bhola Shankar) ಸಿನಿಮಾದಲ್ಲೂ ನಟಿಸಿದ್ದು, ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ರಜನಿಕಾಂತ್ (Rajanikanth) ಅವರ ಮುಂಬರುವ ಚಿತ್ರ ‘ಜೈಲರ್’ ನಲ್ಲಿಯೂ ತಮನ್ನಾ ನಟಿಸಿದ್ದು, ಸಿನಿಮಾ ತೆರೆಗೆ ಬರಲಿದೆ. ಇದರ ನಡುವೆ ನಟಿ ತಮನ್ನಾ ಅನೇಕ ವೆಬ್ ಸಿರೀಸ್ ಹಾಗೂ ಸಿನಿಮಾಗಳಿವೆ.

Leave a Reply

Your email address will not be published. Required fields are marked *