ಭಾಗ್ಯಲಕ್ಷ್ಮಿ ಖ್ಯಾತಿಯ ನಟಿ ಸುಷ್ಮಾರಾವ್ ಅವರ ಪತಿ ಯಾರು ಗೊತ್ತಾ? ಇಲ್ಲಿದೆ ನೋಡಿ ನಿಜಕ್ಕೂ ನಂಬಲು ಸಾಧ್ಯ ಇಲ್ಲ!!

ಸಿನಿಮಾಲೋಕ ಹಾಗೂ ಕಿರುತೆರೆ ಲೋಕದಲ್ಲಿರುವವರ ಬದುಕು ಚೆನ್ನಾಗಿರು ತ್ತದೆ ಎಂದು ನಾವು ಅಂದುಕೊಂಡು ಬಿಡುತ್ತೇವೆ. ಆದರೆ ಅವರಿಗೂ ವೈಯುಕ್ತಿಕ ಬದುಕಿನಲ್ಲಿ ಏ-ರಿಳಿತಗಳು ಇದ್ದೆ ಇರುತ್ತವೆ. ತೆರೆ ಮೇಲೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾ ತೆರೆ ಹಿಂದಿನ ಬದುಕನ್ನು ಎಲ್ಲಿಯೂ ಬಿಚ್ಚಿಡುವುದಿಲ್ಲ. ಈ ವಿಚಾರದಲ್ಲೂ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಸುಷ್ಮಾ ರಾವ್ (Sushma Rao) ಕೂಡ ಹೊರತಾಗಿಲ್ಲ.

ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿಯರಲ್ಲಿ ಸುಷ್ಮಾ ಕೆ ರಾವ್ ಕೂಡ ಒಬ್ಬರು. ಚಿಕ್ಕಮಂಗಳೂರಿನ ಕೊಪ್ಪ (Chikkamanglore Koppa) ದವರಾದ ಸುಷ್ಮಾರವರು ನಿರೂಪಕಿ ಮಾತ್ರವಲ್ಲದೇ ನಟಿಯು ಕೂಡ. ನಟನೆಯ ಜೊತೆಗೆ ಭರತನಾಟ್ಯ ಕಲಾವಿದೆಯಾಗಿದ್ದು, ಈಗಾಗಲೇ ಗುಪ್ತಗಾಮಿನಿ (Guptagamini), ಯಾವ ಲೋಕದ ಮೈತ್ರಿ (Yava ಲೋಕದ Maitri) ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಪ್ರೀತಿ ಗಳಿಸಿಕೊಂಡಿದ್ದಾರೆ.

ಆದರೆ ಸದ್ಯಕ್ಕೆ ಬಹಳ ವರ್ಷಗಳ ನಂತರದಲ್ಲಿ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿಯ ಮೂಲಕ ಮತ್ತೆ ನಟನೆಗೆ ಮರಳಿದ್ದು ಭಾಗ್ಯಳ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಸಾಧನೆಗೈದಿರುವ ಇವರು ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಏ-ಳುಬೀಳುಗಳನ್ನು ಕಂಡಿದ್ದಾರೆ. ಅಂದಹಾಗೆ ಸುಷ್ಮಾ ರಾವ್ ಅವರಿಗೆ ಮದುವೆ ಯಾಗಿದ್ದು ಅವರ ಗಂಡ ಒಬ್ಬ ಹೆಸರಾಂತ ನಿರ್ದೇಶಕ (Famous Director) ರಾಗಿದ್ದಾರೆ.

ಅವರು ಬೇರೆ ಯಾರು ಅಲ್ಲ, ನಿರ್ದೇಶಕ ಪ್ರೀತಮ್ ಗುಬ್ಬಿ (Preetham Gubbi) ಯವರು. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ ಮುಂಗಾರು ಮಳೆ (Mungaru Male) ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2007ರಲ್ಲಿ ಸುಷ್ಮಾ ಮತ್ತು ಪ್ರೀತಮ್ ಗುಬ್ಬಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಪ್ರೀತಿಸಿ ಮದುವೆಯಾದರೂ ವೈವಾಹಿಕ ಜೀವನದಲ್ಲಿ ಬಿ-ರುಕು ಕಾಣಿಸಿಕೊಂಡಿತು.

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಒಬ್ಬರಿಗೊಬ್ಬರು ಸಮಯ ನೀಡಲಾಗದೇ ಭಿ-ನ್ನಾಭಿಪ್ರಾಯ ಶುರುವಾಯಿತು. ಕೊನೆಗೆ ಇಬ್ಬರೂ ದೂರವಾಗಿಯೇ ಬಿಟ್ಟರು. ಆದರೆ ನಟಿ ಸುಷ್ಮಾ ಮತ್ತು ಪ್ರೀತಂ ಗುಬ್ಬಿ ಇಂದಿಗೂ ಕೂಡ ಕೋರ್ಟು ಮೆಟ್ಟಿಲು ಏರಿಲ್ಲ. ಒಬ್ಬರಿಂದ ಒಬ್ಬರು ವಿ-ಚ್ಛೇದನ ಪಡೆದುಕೊಂಡಿಲ್ಲ.

ಅದಲ್ಲದೇ ಬಲ್ಲ ಮೂಲಗಳ ಪ್ರಕಾರವಾಗಿ ಪ್ರೀತಮ್ ಸುಷ್ಮಾ ಅವರಿಗೆ ಕಾ-ಟ ಕೊಡುತ್ತಿದ್ದರು, ಹೀಗಾಗಿ ಸುಷ್ಮಾರವರು ಅವರಿಂದ ದೂರವಾದರು ಎಂದು ಹೇಳಲಾಗಿದೆ. ಮತ್ತೊಂದು ಮಾಹಿತಿಗಳ ಪ್ರಕಾರ ಸ್ವತಃ ಸುಷ್ಮಾ ಅವರೇ ತನ್ನ ಪತಿಯನ್ನು ಬಿಟ್ಟು ಬಂದು ಒಂಟಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಅದೇನೇ ಇದ್ದರೂ ಕೂಡ ಸುಷ್ಮಾ ರಾವ್ ವೈವಾಹಿಕ ಜೀವನದಲ್ಲಿ ಆಗಿರುವ ಕಹಿ ಘಟನೆಯನ್ನು ಮರೆತು ಒಂಟಿಯಾಗಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *