ಫ್ಯಾಮಿಲಿ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಕಾವೇರಿ ಅಲಿಯಾಸ್ ಸುಷ್ಮಾ ನಾಣಯ್ಯ, ಇಲ್ಲಿದೆ ನೋಡಿ ಮುದ್ದಾದ ಫೋಟೋಸ್!!

ಕನ್ನಡ ಕಿರುತೆರೆಯ ನಟಿ ಸುಷ್ಮಾ ನಾಣಯ್ಯ (Sushma Nanaiah) ಎಂದರೆ ಅಷ್ಟಾಗಿ ಯಾರಿಗೂ ಕೂಡ ನೆನಪಿಗೆ ಬರಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಅಮ್ಮನಾಗಿ ಅಂದರೆ ಕಾವೇರಿ (Kaveri) ಯಾಗಿ ಅಭಿನಯಿಸುತ್ತಿರುವವರು ಎಂದರೆ ಮಗನನ್ನು ಅತಿಯಾಗಿ ಪ್ರೀತಿಸುವ ಆಗಾಗ ಕೋಪ ಮಾಡಿಕೊಳ್ಳುವ ಮುಖವೊಂದು ಕಣ್ಣ ಮುಂದೆ ಬರುತ್ತದೆ.

ಕಾವೇರಿ ಪಾತ್ರದ ಮೂಲಕ ಎಲ್ಲರ ಮನಸ್ಸು ಗೆದ್ದಿರುವವರೇ ನಟಿ ಸುಷ್ಮಾ ನಾಣಯ್ಯ. ಆದರೆ ನಟಿ ಸುಷ್ಮಾ ನಾಣಯ್ಯರವರು ಸುದ್ದಿಯಾಗಿರುವುದು ತಮ್ಮ ಮುದ್ದಾದ ಕುಟುಂಬದ ಜೊತೆಗೆ ಫೋಟೋಶೂಟ್ (Photoshoot) ಮಾಡುವ ಮೂಲಕವಾಗಿ. ಸುಷ್ಮಾ ತಮ್ಮ ಪತಿ ಹಾಗೂ ಮುದ್ದಿನ ಮಗಳೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು, “ನಾನು ನನ್ನ ಮಗಳು ಮತ್ತು ಪತಿಯೊಡನೆ ಫೋಟೋಶೂಟ್ ಮಾಡಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದೆ. ಅದಕ್ಕಾಗಿ ನಾನು ಒರ್ವ ಅದ್ಭುತ ಫೋಟೋಗ್ರಾಫರ್‌ನ ಹುಡುಕಾಟದಲ್ಲಿದ್ದೆ. ಆಗ ನನ್ನ ಸ್ನೇಹಿತರೊಬ್ಬರಿಂದ ಪ್ರೊಫೆಶನಲ್ ಫೋಟೋಗ್ರಾಫರ್ ಪೂಜಾ ಬಗ್ಗೆ ತಿಳಿಯಿತು.

ಫೋಟೋಶೂಟ್ ಪೂರ್ತಿ ಅವರು ತುಂಬಾ ತಾಳ್ಮೆಯಿಂದ ಇದ್ದರು. ಮಾತ್ರವಲ್ಲದೇ ನನ್ನ, ಮಗಳ ಹಾಗೂ ಕುಟುಂಬದ ಫೋಟೋವನ್ನು ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ನಿಮಗೆ ಆಲ್ ದಿ ಬೆಸ್ಟ್ ಹಾಗೂ ನಿಮ್ಮ ಕೆಲಸ ಹೀಗೆ ಸಾಗುತ್ತಿರಲಿ” ಎಂದು ಬರೆದುಕೊಂಡಿದ್ದಾರೆ. ನಟಿಯ ಮುದ್ದಾದ ಫ್ಯಾಮಿಲಿ ಫೋಟೋ ಶೂಟ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ನಟಿಯ ಫ್ಯಾಮಿಲಿ ಫೋಟೋಶೂಟ್ ಗೆ ಫ್ಯಾನ್ಸ್ ಗಳು ಮೆಚ್ಚುಗೆಯ ಪ್ರತಿಕ್ರಿಯಗಳನ್ನು ನೀಡುತ್ತಿದ್ದಾರೆ.ಇತ್ತ ನಟಿ ಸುಷ್ಮಾ ನಾಣಯ್ಯ ಅವರ ಪತಿ ಹೆಸರು ಪ್ರತೀಕ್ (Pratik) ಇವರಿಬ್ಬರದ್ದು ಪಕ್ಕಾ ಲವ್ ಮ್ಯಾರೇಜ್ (Love Marriage). ಪ್ರೀತಿಸಿ ಮದುವೆಯಾದ ಈ ಜೋಡಿ ಪ್ರೀತಿಯ ಪ್ರತೀಕವಾಗಿ ಮಗಳು ಜನಸಿದ್ದಳು.

ಮಗಳು ಹುಟ್ಟಿದ ಬಳಿಕ ಬಣ್ಣದ ಲೋಕದಿಂದ ದೂರ ಉಳಿದ ನಟಿ ಸುಷ್ಮಾ ನಾಣಯ್ಯನವರು ಮತ್ತೆ ಕಿರುತೆರೆ ಲೋಕಕ್ಕೆ ಮರಳಿದ್ದು ಕಾವೇರಿ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ನಟಿ ಸುಷ್ಮಾ ನಾಣಯ್ಯರವರಿಗೆ ಬಣ್ಣದ ಲೋಕದಲ್ಲಿ ಮತ್ತಷ್ಟು ಅವಕಾಶಗಳು ಒದಗಿ ಬರಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *