ಮುದ್ದಾದ ಕುಟುಂಬದ ಜೊತೆಗೆ ನಟಿ ಸುಧಾರಾಣಿ, ಈ ಅಪರೂಪದ ಫೋಟೋ ವೈರಲ್

ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸುಧಾರಾಣಿ (Actress Sudharani) ಇದೀಗ ಪೋಷಕ ನಟಿಯಾಗಿ ಸಕ್ರಿಯರಾಗಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ವೈಯುಕ್ತಿಕ ಜೀವನದ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಸುಧಾರಾಣಿಯವರು ಫೋಟೋ ಹಾಗೂ ವಿಡಿಯೋಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ ನಟಿ ಸುಧಾರಾಣಿಯವರ ಕುಟುಂಬದ ಮುದ್ದಾದ ಫೋಟೋವೊಂದು ವೈರಲ್ ಆಗಿವೆ.

ಚಂದನವನದ ನಟಿ ಸುಧಾರಾಣಿ (Actress Sudharani) ರವರು ವೃತ್ತಿ ಜೀವನಕ್ಕೆ ಅಷ್ಟೇ ಅಲ್ಲದೇ ಸಂಸಾರಿಕ ಜೀವನಕ್ಕೂ ಅಷ್ಟೇ ಮಹತ್ವವನ್ನು ನೀಡುತ್ತಾರೆ. ಇದೀಗ ಪತಿ ಹಾಗೂ ಮಗಳ ಜೊತೆಗೆ ಇರುವ ಸುಧಾರಾಣಿಯವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋಗೆ ಫ್ಯಾನ್ಸ್ ಗಳಿಂದ ಲೈಕ್ಸ್ ಗಳು ಬಂದಿವೆ.

ಆನಂದ್ (Anand) ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡ ಇವರು ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಮೆರಿಕ ಮೂಲದ ಅರವಳಿಕೆ ತಜ್ಞ ಡಾಕ್ಟರ್ ಸಂಜಯ್ (Dr.Sanjay) ಅವರ ಜೊತೆಗೆ ಸಪ್ತಪದಿ ತುಳಿದರು. ಆದರೆ ವೈಯುಕ್ತಿಕ ಕಾರಣಗಳಿಂದ ವಿಚ್ಚೇಧನವನ್ನು ಪಡೆದುಕೊಂಡು ಭಾರತಕ್ಕೆ ಮರಳಿದರು. ತದನಂತರದಲ್ಲಿ ಗೋವರ್ಧನ್ (Govardhan) ಎಂಬುವರನ್ನು ನಟಿ ಸುಧಾರಾಣಿ ಮದುವೆಯಾದರು. ಇದೀಗ ಸುಧಾರಾಣಿ ಹಾಗೂ ಗೋವರ್ಧನ್ ದಂಪತಿಗಳಿಗೆ ನಿಧಿ (Nidhi) ಎಂಬ ಮುದ್ದಾದ ಮಗಳಿದ್ದಾಳೆ.

ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮವಾದ ವೀಕೆಂಡ್ ವಿಥ್ ರಮೇಶ್ ನಲ್ಲಿ ತನ್ನ ಮುದ್ದಾದ ಕುಟುಂಬದ ಬಗ್ಗೆ ಮಾತನಾಡಿದ್ದರು. ಈ ವೇಳೆಯಲ್ಲಿ ಸುಧಾರಾಣಿಯವರು, “‘ನನ್ನ ಫ್ಯಾಮಿಲಿ ನನಗೆ ಸ್ಟ್ರಾಂಗ್ ಫೌಂಡೇಶನ್ ನೀಡಿದ್ರೆ, ಅದರ ಮೇಲೆ ಅರಮನೆ ಕಟ್ಟಿದವರು ಗೋವರ್ಧನ್. ಅಮೇರಿಕಾದಿಂದ ವಾಪಸ್ ಬಂದಮೇಲೆ ಅವರೇ ನನಗೆ ತುಂಬಾ ಸಪೋರ್ಟ್ ಮಾಡಿದ್ದು. ಎಷ್ಟೋ ವಿಷಯಗಳು ನನ್ನ ಫ್ಯಾಮಿಲಿಯವರಿಗೆ ಹೇಳಿಕೊಳ್ಳಲಿಲ್ಲ.

ಅಂತಹ ವಿಷಯಗಳನ್ನ ನಾನು ಗೋವರ್ಧನ್ ಗೆ ಹೇಳಿದ್ದೆ. ಸಪೋರ್ಟ್ ಎಂಬ ಪದ ತುಂಬಾ ಚಿಕ್ಕದು ವರ್ಣಿಸುವುದಕ್ಕೆ. ಸಂಬಂಧಗಳ ಬಗ್ಗೆ ನನಗೆ ನಂಬಿಕೆ ಹೊರಟು ಹೋಗಿತ್ತು. ಆಗ ಎಲ್ಲವನ್ನೂ ನನಗೆ ವಾಪಸ್ ಕಲ್ಪಿಸಿದ್ದು ಗೋವರ್ಧನ್. ಐ ಯಮ್ ಲಕ್ಕಿ ಟು ಹಾವ್ ಹಿಮ್ ಆಸ್ ಮೈ ಹಸ್ಬೆಂಡ್ ಅಂತ ‘ ಎಂದಿದ್ದರು. ಸದ್ಯಕ್ಕೆ ಕಿರುತೆರೆ ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದು, ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

Leave a Reply

Your email address will not be published. Required fields are marked *