ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದವರಲ್ಲಿ ಸುಧಾರಾಣಿ ಕೂಡ ಒಬ್ಬರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಿನೆಮಾರಂಗವನ್ನು ಪ್ರವೇಶ ಮಾಡಿ ಚಿತ್ರರಂಗದಲ್ಲಿ ಸಕ್ರಿಯರಾಗಿ ಕಾರ್ಯನಿವಹಿಸಿದ್ದಾರೆ. ಇತ್ತೀಚಿಗೆ ನಟಿ ಸುಧಾರಾಣಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಹಬ್ಬಗಳ ಸಂಭ್ರಮದ ಕ್ಷಣ, ಹುಟ್ಟುಹಬ್ಬದ ಕ್ಷಣ, ಹಾಗೂ ಫ್ಯಾಮಿಲಿ ಜೊತೆ ಟ್ರೀಪ್ ಹೋದಾಗ ಅಲ್ಲಿ ತೆಗೆದ ವಿಡಿಯೋ ಹಾಗೂ ಫೋಟೋ ಗಳನ್ನು ಆಗಾಗಿ ಶೇರ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ನಟಿ ಸುಧಾರಾಣಿಯವರು ಮಗಳ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಸುದ್ದಿಯಾಗಿದ್ದಾರೆ. ಸಿನೆಮಾ ಕ್ಷೇತ್ರದಲ್ಲಿ ಬಾಲನಟಿಯಾಗಿ ನಟನೆಯನ್ನು ಶುರು ಮಾಡಿದವರು ನಟಿ ಸುಧಾರಾಣಿ. ಕಳ್ಳ ಕುಳ್ಳ, ಖಿಲಾಡಿ ಕಿಟ್ಟಿ, ಅನುಪಮಾ, ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 1986 ರಲ್ಲಿ ಬಿಡುಗಡೆಯದ ಆನಂದ್ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿ ತೆರೆಮೇಲೆ ನಟಿಸಿದರು. ಇನ್ನು ಆಸೆ ಗೊಬ್ಬ ಮೀಸೆ ಗೊಬ್ಬ, ಅಣ್ಣ ತಂಗಿ,ಮಿಡಿದ ಶ್ರುತಿ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಅನೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಅವರ ಜೊತೆ ಪಂಚಮ ವೇದ, ಶ್ರೀಗಂಧ, ಅರಗಿಣಿ, ಮತ್ತು ಅನುರಾಗ ಸಂಗಮ ಸೇರಿದಂತೆ ಎಂಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ನಟಿ ಸುಧಾರಣಿ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತರಾಗಿಲ್ಲ. 1989 ರಲ್ಲಿ ತಮಿಳು ಚಿತ್ರಕ್ಕು ಎಂಟ್ರಿ ಕೊಟ್ಟರು. ಅಲ್ಲು ಸೈ ಎನಿಸಿಕೊಂಡರು. ಇತ್ತೀಚಿಗೆ ಸಾಕಷ್ಟು ವರ್ಷಗಳಿಂದ ಪೋಷಕ ನಟಿಯಾಗಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನೆಮಾರಂಗದಲ್ಲಿ ಬ್ಯುಸಿ ಇರುವಾಗಲೇ, ಅಮೇರಿಕ ಮೂಲದ ಡಾ. ಸಂಜಯ್ ಅವರನ್ನು ಮದುವೆಯಾದರು. ಆದರೆ ಇವರ ದಾಂಪತ್ಯ ಜೀವನ ಅಷ್ಟು ಚನ್ನಾಗಿ ನಡೆಯಲಿಲ್ಲ. ಸುಮಾರು ಐದು ವರ್ಷಗಳ ಕಲ ಸಂಸಾರ ಮಾಡಿ ಕೊನೆಗೆ ವಿಚ್ಚೇಧನ ಪಡೆದುಕೊಂಡರು. ಇನ್ನು ಭಾರತಕ್ಕೆ ವಾಪಾಸ್ ಆದ ನಟಿ ಸುಧಾರಾಣಿ ಗೋವರ್ಧನ್ ಎನ್ನುವರನ್ನು ಮದುವೆಯಾದರು. ಈ ಹಿಂದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಧಾರಾಣಿ ತಮ್ಮ ಪತಿ ಹಾಗೂ ಫ್ಯಾಮಿಲಿ ಕುರಿತಾಗಿ ಮಾತನಾಡಿದ್ದರು. ನನ್ನ ಸಂಸಾರನೇ ನನಗೆ ಎಲ್ಲಾ ನನ್ನ ಪತಿಯೇ ನನ್ನ ದೇವರು ಅದನ್ನು ಬಿಟ್ಟು ಬೇರೆ ಇಲ್ಲ ಎಂದು ಹೇಳಿದ್ದಾರೆ.
ಅಮೇರಿಕಾದಿಂದ ವಾಪಾಸ್ ಬಂದ ಮೇಲೆ ಪತಿ ಗೋವರ್ಧನ್ ಅವರೇ ನನಗೆ ತುಂಬಾ ಸಪೋರ್ಟ್ ಮಾಡಿದ್ದು. ಎಷ್ಟೋ ವಿಷಗಳನ್ನು ನನ್ನ ಕುಟುಂಬದವರಿಗೆ ಹೇಳಿಕೊಳ್ಳಲಿಲ್ಲ. ಅಂತಹ ವಿಷಯಗಳನ್ನು ನಾನು ಗೋವರ್ಧನ್ ಅವರ ಜೊತೆ ಹಂಚಿಕೊಂಡಿದ್ದೆ. ಸಪೋರ್ಟ್ ಎಂಬ ಪದ ತುಂಬಾ ಚಿಕ್ಕದು ವರ್ಣಿಸಲು. ಸಂಬಂಧಗಳ ಬಗ್ಗೆ ನನಗೆ ನಂಬಿಕೆ ಹೊರಟು ಹೋಗಿತ್ತು. ಆಗ ಎಲ್ಲವನ್ನು ನನಗೆ ವಾಪಾಸ್ ಕೊಟ್ಟಿದ್ದು ಗೋವರ್ಧನ್. ನಾನು ತುಂಬಾ ಲಕ್ಕಿ ಅಂಥಹ ಗಂಡನ್ನನ್ನು ಪಡೆಯೋಕ್ಕೆ ಎಂದಿದ್ದಾರೆ ಸುಧಾರಾಣಿ.
ಅಲ್ಲದೇ ಈ ಜೋಡಿಗಳಿಗೆ ಮುದ್ದಾದ ಮಗಳಿದ್ದಾಳೆ. ಇದೀಗ ಸುಧಾರಾಣಿ ಹಾಗೂ ಮಗಳು ನಿಧಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ತಾಯಿ ಮಗಳ ಮುದ್ದುದ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ನೀವು ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.