ತೆಲುಗಿನಲ್ಲಿ ನಟಿ ಶ್ರೀಲೀಲಾಗೆ ಹೆಚ್ಚಿದ ಬೇಡಿಕೆ, ನಟಿಯ ಬೇಡಿಕೆ ನೋಡಿ ಇತರ ನಟಿಯರಿಗೆ ಪುಕ ಪುಕ ಅನ್ನುತ್ತಿದೆಯಂತೆ! ಎಷ್ಟು ಸಿನೆಮಾ ಶ್ರೀಲೀಲಾ ಕೈಯಲ್ಲಿದೆ ನೋಡಿ!!

ನಟಿಯರು ಎಂದ ಮೇಲೆ ಕೆಲವೊಮ್ಮೆ ಬೇಡಿಕೆ ಹೆಚ್ಚಾಗುತ್ತದೆ, ಕೆಲವೊಮ್ಮೆ ಅವಕಾಶಗಳಿಲ್ಲದೇ ಖಾಲಿ ಕುಳಿತಿರಬೇಕು. ಈ ಸಾಲಿಗೆ ಕನ್ನಡದ ನಟಿ ಶ್ರೀಲೀಲಾ ಸೇರಿಕೊಳ್ಳುತ್ತಾರೆ. ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರೂ ಕೂಡ ಕನ್ನಡವನ್ನು ಮರೆತ್ತಿಲ್ಲ. ಕನ್ನಡವನ್ನು ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡರೂ ಕನ್ನಡದ ನಟ ನಟಿಯರಿಗೆ ಬೆಂಬಲವಾಗಿ ನಿಂತಿರುವುದು ವಿಶೇಷ ಎನ್ನಬಹುದು.

ನಟಿಯ ಈ ನಡೆಯೂ ಉಳಿದ ನಟಿಗೆ ಸ್ವಲ್ಪ ಮಟ್ಟಿಗೆ ಹೊಟ್ಟೆ ಕಿಚ್ಚನ್ನು ಉಂಟು ಮಾಡಿದೆ ಎನ್ನಲಾಗಿದೆ. ಚಂದನವನದ ನಟಿ ಶ್ರೀಲೀಲಾ ಕಿಸ್ , ಭರಾಟೆ , ಬೈಟೂ ಲವ್ ನಂತಹ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಆದರೆ ಇದೀಗ ಶ್ರೀಲೀಲಾ ಟಾಲಿವುಡ್ ನಲ್ಲಿ ಬಹುಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಪೆಳ್ಳಿ ಸಂದಡಿ ಸಿನಿಮಾದದಲ್ಲಿ ನಟ ಶ್ರೀಕಾಂತ್ ಪುತ್ರ ರೋಷನ್ ಜೊತೆ ನಟಿಸುವ ಮೂಲಕ ನಟಿ ಶ್ರೀಲೀಲಾ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದರು.

ತದನಂತರದಲ್ಲಿ ನಟಿ ಶ್ರೀಲೀಲಾ ಪಾಲಿಗೆ ಪರಭಾಷೆಯಲ್ಲಿ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ನಟಿಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಮಹೇಶ್ ಬಾಬು ನಟನೆಯ 28ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಎರಡನೇ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದೂ, ಈ ಪಾತ್ರಕ್ಕೆ ಪ್ರಾಮುಖ್ಯತೆ ಇದೆ ಎನ್ನಲಾಗಿದೆ.

ಅದಲ್ಲದೇ, ಎನ್​ಬಿಕೆ108’ ಚಿತ್ರದಲ್ಲಿ ಬಾಲಯ್ಯ ಅವರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತೀನ್ ಅವರ 32ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಅನಗನಗ ಒಕ ರಾಜು’ ಸಿನಿಮಾ ಹಾಗೂ ನಟ ವೈಷ್ಣವ್ ತೇಜ್ ಅವರ ಇನ್ನೂ ಶೀರ್ಷಿಕೆ ಇಡದ ನಾಲ್ಕನೇ ಚಿತ್ರದಲ್ಲಿಯೂ ನಟಿ ಶ್ರೀಲೀಲಾರವರೇ ನಾಯಕಿಯಾಗಿದ್ದಾರೆ.

ನಟಿ ಶ್ರೀಲೀಲಾ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಶ್ರೀಲೀಲಾರವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿರುವುದು ಉಳಿದ ನಟಿಯರಿಗೆ ಸಹಿಸಲು ಆಗುತ್ತಿಲ್ಲ. ಈಗಾಗಲೇ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಆದರೆ ಇಷ್ಟೊಂದು ಸಿನಿಮಾ ಅವಕಾಶಗಳು ಅವರಿಬ್ಬರಿಗೂ ಸಿಕ್ಕಿಲ್ಲ.

ನಟಿ ಶ್ರೀಲೀಲಾರವರಿಗೆ ತೆಲುಗು ಸಿನಿಮಾ ರಂಗದಲ್ಲಿ ಸಿನಿಮಾ ಪ್ರಾಜೆಕ್ಟ್ ಗಳು ಬರುತ್ತಾ ಹೋದರೆ ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಡಿಮ್ಯಾಂಡ್ ಕಡಿಮೆಯಾಗುತ್ತದೆ ಎನ್ನುವುದು ಸಿನಿಮಾ ಪಂಡಿತರ ಅಭಿಪ್ರಾಯ ವಾಗಿದೆ. ಅದೇನೇ ಇರಲಿ, ಕನ್ನಡದ ನಟಿ ತೆಲುಗು ರಂಗದಲ್ಲಿ ಬ್ಯುಸಿ ಯಾಗಿರುವುದು ಚಂದನವನವು ಹೆಮ್ಮೆ ಪಡುವ ವಿಚಾರವಾಗಿದೆ.

Leave a Reply

Your email address will not be published. Required fields are marked *